
ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯ ಬೂಡು ವಾರ್ಡ್ ಪರಿಸರದಲ್ಲಿರುವ ಅಂಗನವಾಡಿ ಕೇಂದ್ರದಕ್ಕೆ ಆವರಣ ಗೋಡೆ ಇಲ್ಲದೆ ಅಂಗನವಾಡಿಯ ಮಕ್ಕಳು ಹೊರಗೆ ಬಾರದ ಸ್ಥಿತಿ ಇದೆ, ಒಂದು ಕಡೆ ಆಳವಾದ ಕಂದಕ , ಮತ್ತೊಂದು ಕಡೆ ಸಾರ್ವಜನಿಕ ರಸ್ತೆ ಇರುವ ಹಿನ್ನಲೆಯಲ್ಲಿ ಮಕ್ಕಳನ್ನು ಕೋಣೆಯಿಂದ ಹೊರಗೆ ಕಳಿಸಲು ಅಂಗನವಾಡಿ ಕಾರ್ಯಕರ್ತೆಯರು ಭಯ ಪಡುವ ಸ್ಥಿತಿ ಇದ್ದು ಆವರಣ ಗೋಡೆ ನಿರ್ಮಾಣವಾದರೆ ಮಕ್ಕಳಿಗೆ ಮುಕ್ತವಾಗಿ ಓಡಾಡಲು ಸಾಧ್ಯವಿದೆ . ಶಾಸಕರು ತಮ್ಮ ವಿಶೇಷ ಮುತುವರ್ಜಿ ಯಿಂದ ಅನುದಾನ ಒದಗಿಸುವಂತೆ ನಗರ ಪಂಚಾಯತ್ ಸದಸ್ಯ ರಿಯಾಜ್ ಕಟ್ಟೆಕ್ಕಾರ್, ಬಂದರು ಮತ್ತು ಮೀನುಗಾರಿಕೆ ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅವರಿಗೆ ಮನವಿ ಮಾಡಿದ್ದಾರೆ.


