
ಸುಳ್ಯ ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಡಿ.9ರಂದು ಶಂಕುಸ್ಥಾಪನೆ ಮತ್ತು ಗುದ್ಧಲಿ ಪೂಜೆ ನೆರವೇರಿಸಿದರು
ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ (ಮುನಿಸಿಪಾಲಿಟಿ) ಹಂತ 4. ರ ಯೋಜನೆಯಡಿ 2.80 ಕೋಟಿ ವೆಚ್ಚದಲ್ಲಿ ಸುಳ್ಯ ನಗರ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ, ಚರಂಡಿ ಮತ್ತು ಇನ್ನಿತರ ಅಭಿವೃದ್ಧಿ ಕಾಮಗಾರಿ, ಸಣ್ಣ ನೀರಾವರಿ ಇಲಾಖೆ ವತಿಯಿಂದ ಕಲ್ಲುಮುಟ್ಲುವಿನಲ್ಲಿ ಮಂಜೂರಾದ ಸುಳ್ಯ ನಗರದ ಕುಡಿಯುವ ನೀರಿನ ಯೋಜನೆಗೆ 17 ಕೋಟಿ ಮೊತ್ತದ ವೆಂಟೆಡ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ
ತೆಂಗಿನ ಕಾಯಿ ಒಡೆದು ಚಾಲನೆ ನೀಡಿದರು. ಮತ್ತು ನಗರದ ರಸ್ತೆಗಳಾದ ನಾರಾಜೆ ಪ.ಜಾತಿ ಕಾಲನಿ ಸಂಪರ್ಕ ರಸ್ತೆ ,ಶಾಂತಿನಗರ ಬಾಣರಗುಡ್ಡೆ-ಕುದ್ಪಾಜೆ-ದುಗಲಡ್ಕ-ನೀರಬಿದಿರೆ ಪ.ಜಾತಿ ಕಾಲನಿಗಳ ರಸ್ತೆ ಬೂಡು ಪ.ಜಾತಿ ಕಾಲನಿ- ನಾವೂರು ಕಾಲನಿ ಸಂಪರ್ಕ ರಸ್ತೆ, ಸೂರ್ತಿಲ ಆಶ್ರಯ ಕಾಲನಿಯ ಪ.ಜಾತಿ ಕಾಲನಿ ರಸ್ತೆ,ಪರಿವಾರಕಾನ ಪರಿಶಿಷ್ಟ ಪಂಗಡ ಕಾಲನಿ ರಸ್ತೆ, ಕುರುಂಜಿ- ಭಸ್ಮಡ್ಕ ಪರಿಶಿಷ್ಟ ಪಂಗಡದ ಹಾಗೂ ಕುಕ್ಕಾಜೆಕಾನ ಪರಿಶಿಷ್ಟ ಪಂಗಡ ಹಾಗೂ ಕುಕ್ಕಾಜೆ ಕಾನ ಪರಿಶಿಷ್ಟ ಪಂಗಡದ ಮನೆ ಕಡೆಯ ರಸ್ತೆ.ಬೆಟ್ಟಂಪಾಡಿ ಆಶ್ರಯಕಾಲನಿ,ಸೂರ್ತಿಲ,ಕೊರಂಬಡ್ಕ ಅಶ್ರಯ ಕಾಲನಿ ಅಡ್ಡ ರಸ್ತೆಗಳ ಹಾಗಕೊಡಿಯಾಲಬೈಲ್ ಬ್ರಹ್ಮರಗಯ ರಸ್ತೆ ಚರಂಡಿ . ದುಗಲಡ್ಕ ಕೊಯಿಕುಳಿ ಶಾಲಾ ರಸ್ತೆಗೆ.ದಕ್ಷಿಣ ಬೀರಮಂಗಿಲ ಹಾಗೂ ಜಟ್ಟಿಪಳ್ಳ ಕಾನತ್ತಿಲ ರಸ್ತೆಗೆ. ಕೇರ್ಪಳ ಭಗವತಿ ದೇವಸ್ಥಾನ ದ್ವಾರದಿಂದ ಕೇರ್ಪಳ ಕಟ್ಟೆಯ ಕಡೆಗೆ ರಸ್ತೆಗೆ. ಕೆರೆಮೂಲೆಯಿಂದ ಬೂಡು ನೂತನ ಸಂಪರ್ಕ ರಸ್ತೆಗೆ ಗಾಂಧಿನಗರ ಶಾಲಾ ಹಿಂಬದಿಯ ಬಲಗಡೆ ರಸ್ತೆ ,ಕಾಯರ್ತೋಡಿ ನಡುಮುಟ್ಲು ರಸ್ತೆ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಹಿಂಭಾಗದ ರಸ್ತೆ ಮತ್ತು ಕನಿಕರಪಳ್ಳದಿಂದ ಕೋಡಿ ಕುಶಾಲಪ್ಪರ ಮನೆ ಕಡೆ ರಸ್ತೆ,ತಾಲೂಕು ಪಂಚಾಯತ್ ಕಛೇರಿ ಹಿಂಭಾಗದ ರಸ್ತೆ ಮತ್ತು ಅಂಬಟಡ್ಕ ವೆಂಕಟರಮಣ ದೇವಸ್ಥಾನ ಮುಂಭಾಗದ ರಸ್ತೆ,ಕೆ ಹೆಚ್ ಬಿ ಕಾಲನಿಯ ಒಂದು ಮತ್ತು ಎರಡನೇ ರಸ್ತೆ ,ಜಯನಗರ ಶಾಲಾ ಬದಿಯ ರಸ್ತೆ
ಆಯುರ್ವೇದ ಕಾಲೇಜಿನಿಂದ ವಿವೇಕಾನಂದ ವೃತದ ಕಡೆಗೆ ಹಾಗೂ ವಿವೇಕಾನಂದ ವೃತದಿಂದ ಕಾಂತಮಂಗಲ ರಸ್ತೆ ಬದಿ ಅಂಬಟಡ್ಕ ದೇವಸ್ಯ ರಸ್ತೆ ಬದಿ ಮತ್ತು ಎಸ್ ವಿ ಯಂ ಅಸ್ಪತ್ರೆ ಹಿಂಭಾಗಕ್ಕೆ ಹರಿಯುವ ಮಳೆ ನೀರು ಚರಂಡಿ ಹಾಗೂ ಮೋರಿ ರಚನೆ ಕಾಮಗಾರಿ ಕೆಲಸಗಳಿಗೆ ಸಚಿವ ಅಂಗಾರ ಗುದ್ದಲಿ ಪೂಜೆ ಹಾಗೂ ಶಂಕುಸ್ಥಾಪನೆ ನೆರವೇರಿಸಿದರು.
ಅರೋಗ್ಯ ಇಲಾಖೆಯಿಂದು ತಾಲೋಕು ಆಸ್ಪತ್ರೆಯಲ್ಲಿ ಹೊಸದಾಗಿ ಶವಗಾರ,ಆಕ್ಸಿಜನ್ ಘಟಕ, ಅತ್ಯಾಧುನಿಕ ಲ್ಯಾಬ್,ಅಸ್ಪತ್ರೆಯ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆಯಿತು.
ನಗರ ಪಂಚಾಯತ್ ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ರಾಜ್ಯ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ನಗರ ಪಂಚಾಯತ್ ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಶೀಲಾ ಅರುಣ ಕುರುಂಜಿ, ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಭಿಷೇಕ್ ವಿ ಕೆ ಎ ಎಸ್. ಜಿಲ್ಲಾ



ನಗರಾಭಿವೃದ್ಧಿಕೋಶದ ಕಾರ್ಯಪಾಲಕ ಇಂಜಿನಿಯರ್ ಪುರಂದರ ಕೋಟ್ಯಾನ್,ನಗರ ಪಂಚಾಯತ್ ಮುಖ್ಯಾಧಿಕಾರಿ ಸುದಾಕರ್ ಎಂ ಹೆಚ್. ನಗರ ಪಂಚಾಯತ್ ಸದಸ್ಯರಾದ ಎಂ.ವೆಂಕಪ್ಪ ಗೌಡ, ಕೆ.ಎಸ್.ಉಮ್ಮರ್, ಶಶಿಕಲಾ ಎ, ನಗರ ಪಂಚಾಯತ್ ಮಾಜಿ ಅದ್ಯಕ್ಷ ಎನ್ ಎ ರಾಮಚಂದ್ರ, ಕೆ. ವಿ ಹೇಮನಾಥ ಬಾಲಕೃಷ್ಣ ರೈ, ನಾರಾಯಣ ಪಿ.ಆರ್, ಬುದ್ಧನಾಯ್ಕ್ ಜಿ, ಡೇವಿಡ್ ಧೀರಾ ಕ್ರಾಸ್ತಾ, ಕಿಶೋರಿ ಶೇಟ್, ಪೂಜಿತಾ ಕೆ.ಯು, ಸುಧಾಕರ ಕೆ, ರಿಯಾಝ್ ಕಟ್ಟೆಕ್ಕಾರ್, ಸುಶೀಲಾ ಜಿನ್ನಪ್ಪ ಪೂಜಾರಿ, ಪ್ರವಿತಾ ಪ್ರಶಾಂತ್ ಕಾಯರ್ಯೋಡಿ, ಶಿಲ್ಪಾ ಸುದೇವ್, ನಾಮನಿರ್ದೇಶಿತ ಸದಸ್ಯರಾದ ಬೂಡು ರಾಧಾಕೃಷ್ಣ ರೈ, ರೋಹಿತ್ ಕೊಯಿಂಗೋಡಿ,ಯತೀಶ್ ಬೀರಮಂಗಿಲ, ಹರೀಶ ಕಂಜಿಪಿಲಿ ಹಾಗೂ ಹಲವಾರು ಮಂದಿ ಉಪಸ್ತಿತರಿದ್ದರು.

