ಕುರುಂಜಿ ವೆಂಕಟ್ರಮಣ ಗೌಡರ 94ನೇ ಜಯಂತ್ಯೋತ್ಸವ: ಡಿ. 25, 26 ರಂದು ಕೆವಿಜಿ ಸುಳ್ಯ ಹಬ್ಬ 2022 ಆಚರಣೆ: ಮನೆ ಹಸ್ತಾಂತರ.

ಕುರುಂಜಿ ವೆಂಕಟ್ರಮಣ ಗೌಡರ 94ನೇ ಜಯಂತ್ಯೋತ್ಸವ: ಡಿ. 25, 26 ರಂದು ಕೆವಿಜಿ ಸುಳ್ಯ ಹಬ್ಬ 2022 ಆಚರಣೆ: ಮನೆ ಹಸ್ತಾಂತರ.

ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 94ನೇ ಜಯಂತ್ಯೋತ್ಸವದ ಕೆ.ವಿ.ಜಿ. ಸುಳ್ಯ ಹಬ್ಬ ಆಚರಣೆ ಡಿ.25,26 ರಂದು ಸುಳ್ಯದ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ನಡೆಯಲಿದೆ ಎಂದು ಕೆವಿಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ದೊಡ್ಡಣ್ಣ ಬರೆಮೇಲು ಮತ್ತು ಸುಳ್ಯ ಹಬ್ಬ ಸಮಿತಿಯ ವಿವಿಧ ಪದಾಧಿಕಾರಿಗಳು ಹೇಳಿದ್ದಾರೆ ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿವರ ತಿಳಿಸಿದ ಅವರು
ಡಾ. ಕುರುಂಜಿ ವೆಂಕಟ್ರಮಣ ಗೌಡರ ಜನ್ಮದಿನದಂದು ಕೆ.ವಿ.ಜಿ ಸುಳ್ಯ ಹಬ್ಬ ಹೆಸರಿನಲ್ಲಿ 2011 ರಿಂದ ಆಚರಿಸಿಕೊಂಡು ಬರುತ್ತಿದ್ದು, ಇದೀಗ ಪ್ರತಿವರ್ಷದಂತೆ ಈ ವರ್ಷ ಕೂಡ ಸುಳ್ಯ ಹಬ್ಬ ಆಚರಣೆ ಮಾಡಲಾಗುತ್ತದೆ. ಡಿ. 25 ರಂದು ತಾಲೋಕು ಮಟ್ಟದ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು,ಬೆಳಿಗ್ಗೆ 9 ಗಂಟೆಯಿಂದ ಚೆನ್ನಕೇಶವ ದೇವಾಲಯದ ಮುಂಭಾಗದಲ್ಲಿ ನಡೆಯಲಿದೆ.ಸಂಜೆ 6 ರಿಂದ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದ್ದು ಅಂದು , ಕ್ರೀಡೆ,

ವೈದ್ಯಕೀಯ, ಚಿತ್ರರಂಗ, ಯಕ್ಷಗಾನ, ಸಾಂಸ್ಕೃತಿಕ ಮತ್ತು ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರಿಗೆ ಕೆ.ವಿ.ಜಿ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ತಿಳಿಸಿದರು. ಡಿ 26 ರಂದು 10.30 ಕ್ಕೆ ಉಬರಡ್ಕ ಗ್ರಾಮದಲ್ಲಿ ಪ್ರಾಕೃತಿಕ ವಿಕೋಪಕ್ಕೆ ಒಳಗಾದ ಸೂರ್ಯ ಮನೆ ಅನಂತ ರವರಿಗೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಲಿದ್ದು ಸಂಜೆ 6.ರಿಂದ ಕೆವಿಜಿ ಸ್ಮರಣೆ ಮತ್ತು ಕೆ .ವಿ.ಜಿ. ಸಾಧನಾಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಕೆ ವಿ ಜಿ ಕಾನೂನು ಕಾಲೇಜಿನ ಆವರಣದಲ್ಲಿ ನಡೆಯಲಿದ್ದು ಕೆ ವಿ ಜಿ ಸಾಧನಾಶ್ರೀ ಪ್ರಶಸ್ತಿಯನ್ನು ವಿಶ್ರಾಂತ ಪ್ರಾಂಶುಪಾಲ ಪ್ರೋ ಬಾಲಚಂದ್ರ ಗೌಡ ಹಾಗೂ ಗ್ರೀನ್ ಹೀರೋ ಆಫ್ ಇಂಡಿಯಾ ಖ್ಯಾತಿಯ ಡಾ.ಆರ್ ಕೆ ನಾಯರ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. ಕೆ.ವಿ.ಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಜಯಪ್ರಕಾಶ್ ರೈ, ಕಾರ್ಯದರ್ಶಿ ಹರೀಶ್ ರೈ ಉಬರಡ್ಕ , ಕೋಶಾಧಿಕಾರಿ ಆನಂದ ಖಂಡಿಗ, ಕಾರ್ಯಕ್ರಮದ ಸಂಯೋಜಕ ಮತ್ತು ಸಂಚಾಲಕ ಜ್ಞಾನೇಶ್ ಎನ್ ಎ, ಪೂರ್ವ ಅಧ್ಯಕ್ಷ ಚಂದ್ರ ಕೋಲ್ಚಾರ್ ಮತ್ತು ಪಿ,ಸಿ. ಜಯರಾಮ, ವೇದಿಕೆ ಅಲಂಕಾರ ಸಮಿತಿ ಅಧ್ಯಕ್ಷ ರಾಜು ಪಂಡಿತ್ , ಚಂದ್ರಶೇಖರ ಪೇರಾಲು , ಕ್ರೀಡಾ ಸಂಚಾಲಕ ಎ.ಸಿ ವಸಂತ್, ಸೇರಿದಂತೆ ಸುಳ್ಯ ಹಬ್ಬ ಸಮಿತಿಯ ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು.

ರಾಜ್ಯ