
ಕರ್ನಾಟಕ ರಾಜ್ಯ ಅಂಬೇಡ್ಕರ್ ರಕ್ಷಣಾ ವೇದಿಕೆ ಇದರ ಐವರ್ನಾಡು ಗ್ರಾಮ ಘಟಕವನ್ನು ಡಿ. 5ರಂದು ರಚನೆ ಮಾಡಲಾಯಿತು.
ಕುಂಞಿ ಕೃಷಿ ಕಾಲೋನಿ ಇವರು ಘಟಕದ ಉದ್ಘಾಟನೆಯನ್ನು ನೆರವೇರಿಸಿದರು . ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆ ರಾಜ್ಯದ್ಯಕ್ಷರಾದ ಪಿ.ಸುಂದರ ಪಾಟಾಜೆ ಸಂಘಟನೆಯ ಬಗ್ಗೆ ಮತ್ತು ನಿಯಮಗಳ ಬಗ್ಗೆ ವಿವರಿಸಿದರು ವೇದಿಕೆಯ ಜಿಲ್ಲಾಧ್ಯಕ್ಷರಾದ ಪರಮೇಶ್ವರ ಕೆಮ್ಮಿಂಜೆ ಸುಳ್ಯ ತಾಲೂಕು ಕಾರ್ಯದರ್ಶಿ ಆನಂದ ರಂಗತ್ಮಲೆ, ಉಬರಡ್ಕ ಮಿತ್ತೂರು ಗ್ರಾಮ ಘಟಕದ ಕಾರ್ಯದರ್ಶಿ ಗಣೇಶ್ ಪಾಲಡ್ಕ ವೇದಿಕೆಯಲ್ಲಿದ್ದರು , ಕೃಷಿ ಕಾಲೋನಿಯ ಹಲವಾರು ಮಂದಿಯ ಸಮ್ಮುಖದಲ್ಲಿ ಗ್ರಾಮ ಘಟಕವನ್ನು ರಚಿಸಲಾಗಿ ಐವರ್ನಾಡು ಘಟಕದ ಅಧ್ಯಕ್ಷರಾಗಿ ಗುರುವ ಕೃಷಿ ಕಾಲೋನಿ. ಉಪಾಧ್ಯಕ್ಷರಾಗಿ ಕೊರಗಪ್ಪ ಕೊಯ್ಲಾ, ಕಾರ್ಯದರ್ಶಿಯಾಗಿ ಪ್ರವೀಣ ಕೃಷಿ ಕಾಲೋನಿ, ಜೊತೆ ಕಾರ್ಯದರ್ಶಿಯಾಗಿ ಗಣೇಶ್ ಕೃಷಿ ಕಾಲೋನಿ ಇವರನ್ನು ಆಯ್ಕೆ ಮಾಡಲಾಯಿತು.ಸುಳ್ಯ ತಾಲೂಕು ಘಟಕದ ಉಪಾಧ್ಯಕ್ಷರಾದ ರಮೇಶ ಕೊಡಂಕಿರಿ ಸ್ವಾಗತಿಸಿ ವಂದಿಸಿದರು.
