
ಮಂಗಳೂರಿನಲ್ಲಿ ಮಕ್ಕಳನ್ನು ಕದಿಯುವ ಆರೋಪದ ಮೇಲೆ ವ್ಯಕ್ತಿ ಮೇಲೆ ಸಾರ್ವಜನಿಕರು ಹಲ್ಲೆ ನಡೆಸಿರುವ ಘಟನೆ ಇಂದು ವರದಿಯಾಗಿದೆ ಮಂಗಳೂರು ವೆನ್ಲಾಕ್ ಆಸ್ಪತ್ರೆ ಸಮೀಪದಲ್ಲಿ ಮಹಿಳೆಯೊಬ್ಬಳು ಮತ್ತು ಮಗುವಿನ ಜೊತೆ ನಡೆದು ಹೋಗುತ್ತಿದ್ದ ವೇಳೆ ಆರೋಪಿತ ವ್ಯಕ್ತಿ ಮಗುವನ್ನು ಎಳೆದು ಕದ್ದೊಯ್ಯಲು ಯತ್ನಿಸಿದ್ದಾನೆ ಎಂದು ಹೇಳಲಾಗಿದೆ ಈ ವೇಳೆ ಮಹಿಳೆ ಜೋರಾಗಿ ಕಿರುಚಿಕೊಂಡಿದ್ದು, ತಕ್ಷಣ ಸಾರ್ವಜನಿಕರು ಆರೋಪಿತನ ಹಿಡಿದು ಗೂಸಾ ನೀಡಿ ಪೋಲಿಸರಿಗೆ ಒಪ್ಪಿಸಿರುವುದಾಗಿ ತಿಳಿದು ಬಂದಿದೆ..
