ಡಿ.11ರಂದು ಕಾರ್ಮಿಕ ಸಂಘದ ಹಿರಿಯ ನೇತಾರ ಗೋಪಾಲಕೃಷ್ಣ ಭಟ್ ರವರಿಗೆ ಸರಳಿಕುಂಜದ ಧರ್ಮಾರಣ್ಯದಲ್ಲಿ ಸಾರ್ವಜನಿಕ ಅಭಿನಂದನೆ ಮತ್ತು ಸನ್ಮಾನ ಸಮಾರಂಭ.

ಡಿ.11ರಂದು ಕಾರ್ಮಿಕ ಸಂಘದ ಹಿರಿಯ ನೇತಾರ ಗೋಪಾಲಕೃಷ್ಣ ಭಟ್ ರವರಿಗೆ ಸರಳಿಕುಂಜದ ಧರ್ಮಾರಣ್ಯದಲ್ಲಿ ಸಾರ್ವಜನಿಕ ಅಭಿನಂದನೆ ಮತ್ತು ಸನ್ಮಾನ ಸಮಾರಂಭ.


ಸುಳ್ಯದಲ್ಲಿ ರಿಕ್ಷಾ ಚಾಲಕರಾಗಿದ್ದು, ಸಂಘದ ನಾಯಕನಾಗಿ, ಕಾರ್ಮಿಕ ಸಂಘದ ನೇತಾರನಾಗಿ , ಧಾರ್ಮಿಕ ಉಪನ್ಯಾಸಕನಾಗಿ, ಸಂಘಟಕನಾಗಿ ಸುಮಾರು ನಾಲ್ಕು ದಶಕಗಳಿಂದಲೂ ಅಧಿಕ ಸಮಯ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡ ಗೋಪಾಲ ಕೃಷ್ಣ ಭಟ್ ಸಾರ್ವಜನಿಕ ಅಭಿನಂದನೆ ಹಾಗೂ ಸನ್ಮಾನ ಸಮಾರಂಭ ಡಿ 11.ರಂದು ಸರಳಿಕುಂಜ ಧರ್ಮಾರಣ್ಯದ ಗುರುಗಣಪತಿ ಸಭಾಭವನದಲ್ಲಿ ನಡೆಯಲಿರುವುದು ಎಂದು ಗಿರೀಶ್ ಭಾರದ್ವಾಜ್ ಹೇಳಿದ್ದಾರೆ. ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಗೋಪಾಲಕೃಷ್ಣ ಭಟ್ ಸಾರ್ವಜನಿಕ ಅಭಿನಂದನಾ ಸಮಿತಿಯ ಪದಾಧಿಕಾರಿಗಳು ಮಾತನಾಡಿ..ಗೋಪಾಲ ಕೃಷ್ಣ ಭಟ್ ರವರಿಗೆ 75 ವರ್ಷ ತುಂಬಿದ್ದು, ಇವರ ಹುಟ್ಟು ಹಬ್ಬದ ಪ್ರಯುಕ್ತ ಬಿ.ಎಮ್ ಎಸ್ ಅಟೊ ರಿಕ್ಷಾ ಚಾಲಕರ ಸಂಘ , ಸುಳ್ಯ ಹವ್ಯಕ ವಲಯ, ಧರ್ಮಾರಣ್ಯ ಅಭಿವೃದ್ದಿ ಸಮಿತಿ ಸರಳಿಕುಂಜ , ಗುರು ಗಣಪತಿ ಭಕ್ತ ಭಜನಾ ಮಂಡಳಿ ಸರಳಿಕುಂಜ, ದೀಪಾಂಜಲಿ ಮಹಿಳಾ ಭಜನಾ ಮಂಡಳಿ ಶಾಂತಿನಗರ, ಪೂಮಲೆ ಕ್ರೀಡಾ ಕಲಾ ಸಂಘ ಸರಳಿಕುಂಜ ಇವುಗಳ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಿದ್ದು , ಡಿ ೧೧ ರಂದು ಗೋಪಾಲಕೃಷ್ಣ ಭಟ್ ದಂಪತಿಗಳನ್ನು ಬೆ.೯ ಗಂಟೆಗೆ ಜ್ಯೋತಿ ವೃತ್ತದಿಂದ ಸರಳಿಕುಂಜಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುವುದು. ಸರಳಿಕುಂಜದಲ್ಲಿ ಸಭಾ ಕಾರ್ಯಕ್ರಮ ನಡೆಸಿ ಅಭಿನಂದನೆಸಲ್ಲಿಸಲಾಗುತ್ತದೆ, ಇದರ ಅಧ್ಯಕ್ಷತೆಯನ್ನು ಪದ್ಮಶ್ರಿ ಪುರಸ್ಕೃತ ಗಿರೀಶ್ ಭಾರದ್ವಾಜ್ ವಹಿಸಲಿದ್ದು ,ಅತಿಥಿಗಳಾಗಿ ವೃತ್ತ ನಿರೀಕ್ಷಕ ನವೀನ್ ಚಂದ್ರ ಜೋಗಿ, ಭಾಗವಹಿಸಲಿದ್ದು,

ಧರ್ಮಸ್ಥಳದ ಮಂಜುನಾಥೇಶ್ವರ ಪ್ರೌಢಶಾಲೆಯ ಮುಖ್ಯೋಪದ್ಯಾಯ ರಾಮಕೃಷ್ಣ ಭಟ್ ಚೂಂತಾರು ಅಭಿನಂದನಾ ಭಾಷಣ ಮಾಡಲಿದ್ದಾರೆ, ಅಭಿನಂದನಾ ಗೃಂಥ “ಅಂತರಿಕ್ಷ” ವನ್ನು ಉದ್ಯಮಿ ಕೃಷ್ಣ ಕಾಮತ್ ಬಿಡುಗಡೆ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಸಾರ್ವಜನಿಕ ಅಭಿನಂದನಾ ಸಮಿತಿ ಅದ್ಯಕ್ಷ ಅಶೋಕ ಪ್ರಭು ಹಾಗೂ ಬಿ ಎಂ ಎಸ್ ಅಟೋ ರಿಕ್ಷಾ ಚಾಲಕ ಸಂಘದ ತಾಲೋಕು ಅಧ್ಯಕ್ಷ ರಾಧಾಕೃಷ್ಣ ಬೈತ್ತಡ್ಕ ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಎಂದು ಸುದ್ದಿಗೋಷ್ಟಿಯಲ್ಲಿ ವಿವರಿಸಿದರು.ಈ ಸಂಧರ್ಭದಲ್ಲಿ
ಗೋಪಾಲಕೃಷ್ಣ ಭಟ್ ಸಾರ್ವಜನಿಕ ಅಭಿನಂದನಾ ಸಮಿತಿಯ ಅಧ್ಯಕ್ಷ ಅಶೋಕ ಪ್ರಭು, ಕೋಶಾಧಿಕಾರಿ ಕೃಷ್ಣ ಮೂರ್ತಿ, ಅಂತರಿಕ್ಷ ಅಭಿನಂದನಾ ಗೃಂಥದ ಸಂಪಾದಕ ಕುಮಾರ ಸ್ವಾಮಿ ತೆಕ್ಕುಂಜ, ಶ್ಯಾಮ್ ಭಟ್ ಸುಳ್ಯ ಮೊದಲಾದವರಿದ್ದರು.

ರಾಜ್ಯ