ಅರಂತೋಡಿನಲ್ಲಿ ಸಂಪಾಜೆ ವಲಯ ಭಜನಾ ಪರಿಷತ್ ಸಭೆ.

ಅರಂತೋಡಿನಲ್ಲಿ ಸಂಪಾಜೆ ವಲಯ ಭಜನಾ ಪರಿಷತ್ ಸಭೆ.

ಅಡಿಕೆ ಎಲೆ ಹಳದಿ ರೋಗದ ಬಗ್ಗೆ ಚರ್ಚೆ: ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿಯವರಿಗೆ ಮನವಿಗೆ ತೀರ್ಮಾನ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಪಾಜೆ ವಲಯದ ವತಿಯಿಂದ ಭಜನಾ ಪರಿಷತ್ ನ ಸಭೆಯು ಅರಂತೋಡು ರಬ್ಬರ್ ಸೊಸೈಟಿ ಸಭಾಂಗಣದಲ್ಲಿ ತಾಲೂಕು ಭಜನಾ ಪರಿಷತ್ ನ ನಿರ್ದೇಶಕರಾದ ಸೋಮಶೇಖರ್ ಪೈಕ ಇವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಸಂಪಾಜೆ ವಲಯ ಮೇಲ್ವಿಚಾರಕರಾದ ಸುಧೀರ್ ನೆಕ್ರಾಜೆ ಪ್ರಸ್ತಾವಿಕವಾಗಿ ಮಾತನಾಡಿದರು. ಗ್ರಾಮ ಮಟ್ಟದಲ್ಲಿ ಭಜನಾ ತರಬೇತಿ ಆಯೋಜನೆ ಮಾಡುವುದಾಗಿ ನಿರ್ಣಯಿಸಲಾಯಿತು. ವಲಯದ ಎಲ್ಲಾ ಮಂಡಳಿಯ ಸದಸ್ಯರನ್ನು ಕರೆದು ಸಭೆ ಮಾಡುವುದೆಂದು ತೀರ್ಮಾನಿಸಲಾಯಿತು.ಸಭೆಯಲ್ಲಿ ವಲಯ ಸಮಿತಿ ರಚಿಸಲಾಗಿದ್ದು ವಲಯದ ಅಧ್ಯಕ್ಷರಾಗಿ ಕೆ ಆರ್ ಪದ್ಮನಾಭ ಕುರುಂಜಿ ಹಾಗೂ ಸದಸ್ಯರುಗಳಾಗಿ ಚಂದ್ರಶೇಖರ್ ಆಚಾರ್ಯ ತೊಡಿಕಾನ, ರತ್ನಾಕರ ರೈ ಆರಂಬೂರು, ಸತೀಶ್ ಅಂಬೆಕಲ್ಲು ಸಂಪಾಜೆ, ರೋಹಿಣಿ ಅಂಗಡಿಮಜಲು ಇವರನ್ನು ಆಯ್ಕೆ ಮಾಡಲಾಯಿತು. ಅಡಿಕೆಗೆ ಹಳದಿರೋಗ ವಿಚಾರವಾಗಿ ಚರ್ಚಿಸಲಾಯಿತು .ಈ ಬಗ್ಗೆ ಧರ್ಮಸ್ಥಳದ ಧರ್ಮಾಧಿಕಾರಿ ಯವರನ್ನು ಭೇಟಿ ಮಾಡಿ ಅವರ ಆಶೀರ್ವಾದವನ್ನು ಪಡೆದು ಯೋಜನೆಯಡಿಯಲ್ಲಿ ಹಳದಿ ರೋಗ ಬಾಧಿತರ ಕುರಿತಾದ ಸಭೆಗಳನ್ನು ನಡೆಸುವ ಬಗ್ಗೆ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಿತು

ಈ ಸಂದರ್ಭದಲ್ಲಿ ಸಂಪಾಜೆ ವಲಯ ಜನಜಾಗೃತಿ ಅಧ್ಯಕ್ಷರಾದ ಲೋಕನಾಥ್ ಅಮೆಚೂರ್, ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕಿಶೋರ್ ಕುಮಾರ್ ಉಳುವಾರು , ನ್ಯಾಯವಾದಿ ವೆಂಕಪ್ಪ ಗೌಡ ಶ್ರೀ ದುರ್ಗಾ ಮಾತಾ ಭಜನಾ ಮಂದಿರದ ಅಧ್ಯಕ್ಷರಾದ ಕೆ ಆರ್ ಪದ್ಮನಾಭ ಕುರುಂಜಿ,ಜತ್ತಪ್ಪ ಗೌಡ ಅಳಿಕೆ, ಭವಾನಿಶಂಕರ್ ಅಡ್ತಲೆ, ಚಂದ್ರಶೇಖರ ನೆಡ್ಚಿಲ್, ವಲಯದ ಭಜನಾ ಮಂದಿರಗಳ ಅಧ್ಯಕ್ಷರು ಸದಸ್ಯರು ಗಳು, ಸೇವಾಪ್ರತಿನಿಧಿಗಳು ಭಾಗವಹಿಸಿದ್ದರು.

ರಾಜ್ಯ