
ಸಂಪಾಜೆ ಕಾಂಗ್ರೇಸ್ ನಲ್ಲಿ ಎದ್ದಿರುವ ಕೊಲಾಹಲ ತಕ್ಕ ಮಟ್ಟಿಗೆ ಉಪಶಮನ ವಾಗಿದೆ ಎಂದು ತಿಳಿದು ಬಂದಿದೆ. ರಾಜ್ಯ ನಾಯಕರು, ಜಿಲ್ಲಾ ನಾಯಕರು ಹಾಗೂ ಬ್ಲಾಕ್ ನಾಯಕರ ಮಾತಿಗೆ ಮಣ್ಣನೆ ನೀಡಿದ ಸೋಮಶೇಖರ್ ಕೊಯಿಂಗಾಜೆ. ತಾವು ನೀಡಿರುವ ರಾಜಿನಾಮೆ ಹಿಂಪಡೆದು ವಲಯ ಕಾಂಗ್ರೇಸ್ ಉಪಾದ್ಯಕ್ಷರಾಗಿ ಮತ್ತು ಪಂಚಾಯತ್ ಸದಸ್ಯರಾಗಿ ಮುಂದುವರಿಯುವ ಇಂಗಿತ ವ್ಯಕ್ತ ಪಡಿಸಿದ್ದಾರೆ ಎಂದು ತಿಳಿದು ಬಂದಿದೆ.
ಪಕ್ಷದ ಹಿತದೃಷ್ಠಿಯಿಂದ ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೋಮಶೇಖರ್ ಕೊಯಿಂಗಾಜೆ ಈ ರೀತಿಯ ನಿರ್ಧಾರ ಪ್ರಕಟಿಸಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದ್ದಾರೆ.
ಸಂಪಾಜೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರ ಮೇಲೆ ಮುಂದಿನ ದಿನಗಳಲ್ಲಿ ಕ್ರಮಕ್ಕೆ ಕೈ ಹೈಕಮಾಂಡ್ ಮುಂದಾಗಲಿದೆ ಎಂದು ತಿಳಿದು ಬಂದಿದೆ. ಈ ಸಂದರ್ಭ್ ದಲ್ಲಿ ರಾಜಿನಾಮ ನೀಡಿರುವ ಪಂಚಾಯತ್ ಉಪಾದ್ಯಾಕ್ಷರಾಗಿದ್ದ, ಲಿಸ್ಸಿ ಮೊನಾಲಿಸಾ, ಹಾಗೂ ಸದಸ್ಯರಾದ ಶವಾದ್ ಗೂನಡ್ಕ, ವಿಮಲಾ ಪ್ರಸಾದ್ ರವರಿಗೆ
ರಾಜೀನಾಮೆ ಹಿಂಪಡೆಯಲು ಕೈ ಹೈಕಮಾಂಡ್ ಸೂಚನೆ ನೀಡಿದೆ ಎಂದು ಮಾಹಿತಿ ಲಭ್ಯವಾಗಿದೆ
ಸಂಪಾಜೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ನೀಡಲು ರಾಜ್ಯ ನಾಯಕರು ತಿಳಿಸಿದ ಹಿನ್ನಲೆಯಲ್ಲಿ ಮುಂದಿನ ವಾರ ವಲಯ ಕಾಂಗ್ರೆಸ್ ಸಭೆ ನಡೆಸಲು ಚಿಂತನೆ ಮಾಡಲಾಗಿದೆ.

