
ಹೊಸದಾಗಿ ನಿರ್ಮಿಸುವ ಮನೆಗಳಿಗೆ, ವಾಣಿಜ್ಯ ಮಳಿಗೆಗಳಿಗೆ ಅತ್ಯಾಧುನಿಕ ಶೈಲಿಯ ಕಿಟಕಿ, ಬಾಗಿಲುಗಳು ಹೆಚ್ಚು ಸೌಂದರ್ಯ ನೀಡುತ್ತವೆ. ಕಬ್ಬಿಣದ ವಸ್ತುಗಳು ತುಕ್ಕು ಹಿಡಿದರೆ,ಮರದ ವಸ್ತುಗಳು ಗೆದ್ದಲು ಹಿಡಿಯುವ ಸಾಧ್ಯತೆಯಿದೆ.ಇದಕ್ಕೆಲ್ಲ ಪರ್ಯಾಯವಾಗಿ ಸುಳ್ಯದಲ್ಲಿ ಟಾಟಾ ಸ್ಟೀಲ್ ನಿಂದ ಮಾಡಲ್ಪಟ್ಟ ಕಿಟಕಿ, ದಾರಂದ, ಬಾಗಿಲುಗಳು ಸುಳ್ಯದಲ್ಲಿ ಪರಿಚಯಿಸ್ಪಟ್ಟಿದೆ.
ಪೆರಾಜೆಯ ಅವಿನ್ ಪೆರುಮುಂಡ ಹಾಗೂ ಬಾಲಕೃಷ್ಣ ಕೆ ಯವರ ಪಾಲುದಾರಿಕೆಯಲ್ಲಿ ಸುಳ್ಯದ ಗಾಂಧಿನಗರದ ಆಲೆಟ್ಟಿ ಕ್ರಾಸ್ ರೋಡ್ ಸಮಿಪದ ಕಟ್ಟೆಕಾರ್ ಸಂಕೀರ್ಣದಲ್ಲಿ ವಾಸ್ತವ್ಯ ವಿಂಡೋಟೆಕ್ ಸಂಸ್ಥೆ ಶುಭಾರಂಭಗೊಂಡಿದೆ.ಕೃಷಿಕರಾದ ಪೆರಾಜೆಯ ದಯಾನಂದ ಪೆರುಮುಂಡ, ಸುಳ್ಯವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಸುಳ್ಯ ನ.ಪಂ.
ಸದಸ್ಯ ಎಂ.ವೆಂಕಪ್ಪ ಗೌಡರು ಜತೆಯಾಗಿ ದೀಪ ಬೆಳಗಿಸಿ ಸಂಸ್ಥೆಯನ್ನು ಲೋಕಾರ್ಪಣೆ ಗೊಳಿಸಿದರು.
ಸಂಸ್ಥೆಯಲ್ಲಿ ಟಾಟಾ ಸ್ಟೀಲ್ ಕಿಟಕಿ, ದಾರಂದ, ಬಾಗಿಲುಗಳು ಅತ್ಯಾಧುನಿಕ ಹೊಸ ಹೊಸ ಮಾದರಿಯಲ್ಲಿ ಗ್ರಾಹಕರಿಗೆ ಒದಗಿಸಲಾಗುವುದು. ಕೇರಳ ಶೈಲಿಯಲ್ಲಿ ಮನೆ ಅಥವಾ ವಾಣಿಜ್ಯ ಸಂಕೀರ್ಣ ಗಳ ಹಂಚು ಅಥವಾ ಟಾಟಾ ಶೆಟ್ ಬಳಸಿ
ಮೇಲ್ಬಾವಣಿ ಆಕರ್ಷಕ ರೀತಿಯಲ್ಲಿ ಮಾಡಿಕೊಡಲಾಗುವುದು.ಈ ವಸ್ತುಗಳು ಹೆಚ್ಚು ಬಾಳಿಕೆ ಬರಲಿದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.

