ಶಿರಾಡಿಘಾಟ್‍ನಲ್ಲಿ ಮತ್ತೆ ಭೂಕುಸಿತ : ಮಣ್ಣಿನಲ್ಲಿ ಸಿಲುಕಿದ ಹೈವೆ ಪೆಟ್ರೋಲ್ ಪೊಲೀಸ್ ವಾಹನ
ರಾಜ್ಯ

ಶಿರಾಡಿಘಾಟ್‍ನಲ್ಲಿ ಮತ್ತೆ ಭೂಕುಸಿತ : ಮಣ್ಣಿನಲ್ಲಿ ಸಿಲುಕಿದ ಹೈವೆ ಪೆಟ್ರೋಲ್ ಪೊಲೀಸ್ ವಾಹನ

  : ಶಿರಾಡಿಘಾಟ್‍ನಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಮಣ್ಣು ಕುಸಿತದಲ್ಲಿ ಪೊಲೀಸ್ ವಾಹನ ಸಿಲುಕಿಕೊಂಡಿದೆ. ಸಕಲೇಶಪುರ ತಾಲ್ಲೂಕಿನ, ದೊಡ್ಡತಪ್ಲೆ ಬಳಿ ಘಟನೆ ನಡೆದಿದು ಪೊಲೀಸರು ನಿಲ್ಲಿಸಿದ್ದ ವಾಹನದ ಬಳಿಯೇ ಭೂಕುಸಿತ ಸಂಭವಿಸಿದೆ. KA-13 G-1713 ನಂಬರ್ ನ ಹೈವೇ ಪಟ್ರೋಲ್ ವಾಹನಕ್ಕೆ ಸಣ್ಣಪುಟ್ಟ ಹಾನಿಯಾಗಿದೆ. ಕೂಡಲೇ ಜೆಸಿಬಿ ಮೂಲಕ…

ಸ್ಕೂಟಿಗೆ ಬಸ್ ಡಿಕ್ಕಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು.
ರಾಜ್ಯ

ಸ್ಕೂಟಿಗೆ ಬಸ್ ಡಿಕ್ಕಿ ಸ್ಕೂಟರ್ ಸವಾರ ಸ್ಥಳದಲ್ಲೇ ಸಾವು.

ಸುಳ್ಯ :  ಸ್ಕೂಟಿಗೆಕೆ ಎಸ್ ಆರ್ ಟಿ ಸಿ  ಬಸ್ ಡಿಕ್ಕಿ ಹೊಡೆದು ಸ್ಕೂಟರ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸುಳ್ಯ ತಾಲೂಕಿನ ದುಗಲಡ್ಕ ಮತ್ತು ಸೋಣಂಗೇರಿಯ ಮಧ್ಯೆ ಸುತ್ತುಕೋಟೆ ಎಂಬಲ್ಲಿ ಸಂಭವಿಸಿದೆ. ಅಪಘಾತದಲ್ಲಿ ನೆಲ್ಲೂರು ಕೆಮ್ರಾಜೆ ಗ್ರಾ.ಪಂ. ಸದಸ್ಯ ರಾಮಚಂದ್ರ ಪ್ರಭು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ.ಅವರು ನೆಲ್ಲೂರು ಕೇಮ್ರಾಜೆಯಿಂದ…

ಉಪ್ಪಿನಂಗಡಿ ಅಕ್ರಮ ಮರ ಸಾಗಾಟ:  ಸುಳ್ಯ ಮೂಲದ ಲಾರಿ ಚಾಲಕನ ಬಂಧನ.
ರಾಜ್ಯ

ಉಪ್ಪಿನಂಗಡಿ ಅಕ್ರಮ ಮರ ಸಾಗಾಟ:  ಸುಳ್ಯ ಮೂಲದ ಲಾರಿ ಚಾಲಕನ ಬಂಧನ.

  ಉಪ್ಪಿನಂಗಡಿ ಅರಣ್ಯ ವ್ಯಾಪ್ತಿಯ ನೆಲ್ಯಾಡಿ  ರಾಷ್ಟ್ರೀಯ ಹೆದ್ದಾರಿಯಲ್ಲಿ  ಯಾವುದೇ ಪರವಾನಿಗೆ ಇಲ್ಲದೇ  ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದ  ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಯ ಮೂಲದ ಯುವಕನ್ನನ್ನು  ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಉಪ್ಪಿನಂಗಡಿ ಸಮೀಪದಲ್ಲಿ  ಅರಣ್ಯ ಇಲಾಖಾಧಿಕಾರಿಗಳ ತಂಡ ಆರೋಪಿಯನ್ನು ಬಂಧಿಸಿ ಲಾರಿ ಸಹಿತ  ಮರದ ದಿಮ್ಮಿ ವಶಪಡಿಸಿಕೊಂಡಿದೆ.  ಸುಳ್ಯ ತಾಲೂಕು…

ವಿದ್ಯುತ್ ಅವಘಡ : ಓರ್ವ ಮೃತ್ಯು,ನಾಲ್ವರಿಗೆ ಗಾಯ.
ರಾಜ್ಯ

ವಿದ್ಯುತ್ ಅವಘಡ : ಓರ್ವ ಮೃತ್ಯು,ನಾಲ್ವರಿಗೆ ಗಾಯ.

ಬಂಟ್ವಾಳ : ಖಾಸಗಿ ಸ್ಥಳವೊಂದರಲ್ಲಿ ಪೆಂಡಾಲ್ ಹಾಕುತಿದ್ದ ವೇಳೆ ಕಬ್ಬಿಣದ ರಾಡ್ ವಿದ್ಯುತ್ ತಂತಿಗೆ ಸ್ಪರ್ಶಿಸಿ ಬಿಹಾರ ಮೂಲದ ಯುವಕನೋರ್ವ ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ಕಡೇಶ್ವಾಲ್ಯ ಗ್ರಾಮದ ಕಾಡಬೆಟ್ಟು ಎಂಬಲ್ಲಿ ಶನಿವಾರ ಮದ್ಯಾಹ್ನ ನಡೆದಿದೆ. ಬಿಹಾರ ಮೂಲದ ಕುಂದನ್ ಕುಮಾರ್ ಮಂಡಲ್ (18) ಎಂಬಾತ ಮೃತಪಟ್ಟಿದ್ದು, ಕಡೇಶ್ವಾಲ್ಯ…

ಸರ್ವೆ ಗೌರಿಹೊಳೆಗೆ ಯುವಕ ಹಾರಿರುವ ಶಂಕೆ: ಸ್ಥಳದಲ್ಲಿ ಜಮಾಯಿಸಿದ ಜನ: ಸ್ಥಳದಲ್ಲಿ ಯುವಕನ ಪರ್ಸ್ ಮೊಬೈಲ್ ಪತ್ತೆ..
ರಾಜ್ಯ

ಸರ್ವೆ ಗೌರಿಹೊಳೆಗೆ ಯುವಕ ಹಾರಿರುವ ಶಂಕೆ: ಸ್ಥಳದಲ್ಲಿ ಜಮಾಯಿಸಿದ ಜನ: ಸ್ಥಳದಲ್ಲಿ ಯುವಕನ ಪರ್ಸ್ ಮೊಬೈಲ್ ಪತ್ತೆ..

ಪುತ್ತೂರು: ಕುದ್ಮಾರು ಗ್ರಾಮದ ಯುವಕನೊಬ್ಬ ಕಾಣೆಯಾಗಿದ್ದು, ಸರ್ವೆ ಗೌರಿ ಸೇತುವೆ ಸಮೀಪ ಆತನ ದ್ವಿಚಕ್ರ ವಾಹನ ಪತ್ತೆಯಾಗಿದೆ. ಯುವಕ ಗೌರಿ ಹೊಳೆಗೆ ಹಾರಿರುವ ಶಂಕೆ ವ್ಯಕ್ತವಾಗಿದ್ದು ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಯುವಕ ಹೊಳೆಗೆ ಹಾರಿದ್ದಾನೆಯೇ ಅಥವಾ ಎಲ್ಲಿಗಾದರೂ ಹೋಗಿದ್ದಾನೆಯೇ ಎನ್ನುವ ಸಂಶಯವೂ ವ್ಯಕ್ತವಾಗಿದ್ದು, ಸ್ಥಳಕ್ಕೆ ಅಗ್ನಿ ಶಾಮಕ ದಳದವರು…

ಉಡುಪಿ ಜಿಲ್ಲೆಯಾದ್ಯಂತ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ
ರಾಜ್ಯ

ಉಡುಪಿ ಜಿಲ್ಲೆಯಾದ್ಯಂತ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ

ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜು. 20ರಂದು ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶಿಸಿದ್ದಾರೆ

ಕೊಡಗು ಜಿಲ್ಲೆಯಾಧ್ಯಂತ ನಾಳೆ ರೆಡ್ ಅಲರ್ಟ್ ಘೋಷಣೆ ಹಿನ್ನಲೆ  (ಜು.20) ರಂದು ಎಲ್ಲಾ ಶಾಲೆ,ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ
ರಾಜ್ಯ

ಕೊಡಗು ಜಿಲ್ಲೆಯಾಧ್ಯಂತ ನಾಳೆ ರೆಡ್ ಅಲರ್ಟ್ ಘೋಷಣೆ ಹಿನ್ನಲೆ  (ಜು.20) ರಂದು ಎಲ್ಲಾ ಶಾಲೆ,ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಣೆ

:ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು ನಾಳೆ ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದೆ ಇದರ ಮುನ್ನೆಚ್ಚರಿಕ ಕ್ರಮವಾಗಿ ಜಿಲ್ಲೆಯ ಅಂಗನವಾಡಿ, ಶಾಲಾ-ಕಾಲೇಜುಗಳಿ(ಪಿಯುಸಿ)ಗೆ ಜುಲೈ.20ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಆದೇಶಿಸಿದ್ದಾರೆ.

ಮುಂದುವರಿದ ಮಳೆ : ಜಿಲ್ಲೆಯಾದ್ಯಂತ ನಾಳೆ ಶಾಲಾ, ಕಾಲೇಜುಗಳಿಗೆ ರಜೆ
ರಾಜ್ಯ

ಮುಂದುವರಿದ ಮಳೆ : ಜಿಲ್ಲೆಯಾದ್ಯಂತ ನಾಳೆ ಶಾಲಾ, ಕಾಲೇಜುಗಳಿಗೆ ರಜೆ

ಭಾರಿ ಮಳೆ, ರೆಡ್ ಅಲರ್ಟ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲ ಅಂಗನವಾಡಿ, ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಜು.20ರ ಶನಿವಾರ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ರಜೆ ಘೋಷಿಸಿದ್ದಾರೆ, ಈ ಮೂಲಕ ಮಳೆಗಾಗಿ ಒಂದುವಾರ ಶಾಲೆ ಮಚ್ಚಲಾಗಿದೆ

ಒಂದೂವರೆ ವರ್ಷದಿಂದ ಜನ ಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದೆ ಬಾಕಿಯಾಗಿದ್ದ  ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಕೊನೆಗೂ ಸರಕಾರ ಮೀಸಲಾತಿ ನಿಗದಿ

ಜು. 19: ಒಂದೂವರೆ ವರ್ಷದಿಂದ ಜನ ಪ್ರತಿನಿಧಿಗಳ ಆಡಳಿತ ವ್ಯವಸ್ಥೆ ಇಲ್ಲದೆ ಸೊರಗಿದ್ದ ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳಿಗೆ ಕೊನೆಗೂ ಸರಕಾರ ಮೀಸಲಾತಿ ನಿಗದಿಪಡಿಸಿ ಕರಡು ಅಧಿಸೂಚನೆ ಹೊರಡಿಸಿದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳ ಅಧ್ಯಕ್ಷ ಉಪಾಧ್ಯಕ್ಷರಿಗೆ ನಿಗದಿಗೊಳಿಸಿರುವ ಕರಡು ಮೀಸಲಾತಿ ಅಧಿಸೂಚನೆ ಅಧಿಕೃತವಾಗಿ ರಾಜ್ಯ…

ಪುಂಜಾಲಕಟ್ಟೆ ಲಾರಿ ಪಲ್ಟಿ: ಓರ್ವ ಸ್ಥಳದಲ್ಲಿಯೇ ಸಾವು, ಮೂವರು ಗಂಭೀರ
ರಾಜ್ಯ

ಪುಂಜಾಲಕಟ್ಟೆ ಲಾರಿ ಪಲ್ಟಿ: ಓರ್ವ ಸ್ಥಳದಲ್ಲಿಯೇ ಸಾವು, ಮೂವರು ಗಂಭೀರ

ಬಂಟ್ವಾಳ: ಲಾರಿಯೊಂದು ಪಲ್ಟಿಯಾಗಿ ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ ಇನ್ನು ಇಬ್ಬರು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಪುಂಜಾಲಕಟ್ಟೆ ಎಂಬಲ್ಲಿ ಇದೀಗ ನಡೆದಿದೆ. ಫರಂಗಿಪೇಟೆ ನಿವಾಸಿ ಕಾರ್ತಿಕ್ ಎಂಬಾತ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.ಇನ್ನುಳಿದಂತೆ ಗಾಯಗೊಂಡವರ ಹೆಸರು ಮಾಹಿತಿ ಲಭ್ಯವಾಗಿಲ್ಲ.ವಗ್ಗ ಸಮೀಪದ ‌ಮದ್ವ ಎಂಬಲ್ಲಿನ ಸಾಮಿಯಾನ ಅಂಗಡಿಗೆ ಸೇರಿದ ಲಾರಿ ಇದಾಗಿದ್ದು,…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI