ಪುತ್ತೂರು: ಉದ್ಯೋಗ ನೀಡುವುದಾಗಿ 2,25 ಲಕ್ಷ ಹಣ ಪಡೆದು ವಂಚನೆ..!
ಪುತ್ತೂರು: ಉದ್ಯೋಗ ನೀಡುವುದಾಗಿ ಯುವತಿಯೊಬ್ಬರಿಂದ 7 ತಿಂಗಳ ಅವಧಿಯಲ್ಲಿ ಹಂತ ಹಂತವಾಗಿ ಹಣ ಪಡೆದು ವಂಚನೆ ಮಾಡಿರುವ ಘಟನೆ ನಡೆದಿದೆ. ಆರ್ಯಾಪು ಗ್ರಾಮದ ಒಳತ್ತಡ್ಕ ನಿವಾಸಿ ನಿಶ್ಮಿತಾ ವಂಚನೆಗೊಳಗಾಗಿದ್ದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ. 2023 ರ ಜೂ.12 ರಂದು ಪತ್ರಿಕೆಯೊಂದರಲ್ಲಿ ಪರಿಶೀಲಿಸಿ, ಅದರಲ್ಲಿದ್ದ ಮೊಬೈಲ್ ಸಂಖ್ಯೆಗೆ ಕರೆಮಾಡಿ…









