​ಯುವ ಮೋರ್ಚಾಗೆ ನೂತನ ಅಧ್ಯಕ್ಷ: ಹೇಮಾಂಗ್ ಜೋಶಿಗೆ ಶುಭಾಶಯ ಕೋರಿ 14 ವರ್ಷಗಳ ನೆನಪು ಹಂಚಿಕೊಂಡ ತೇಜಸ್ವಿ ಸೂರ್ಯ!

​ಯುವ ಮೋರ್ಚಾಗೆ ನೂತನ ಅಧ್ಯಕ್ಷ: ಹೇಮಾಂಗ್ ಜೋಶಿಗೆ ಶುಭಾಶಯ ಕೋರಿ 14 ವರ್ಷಗಳ ನೆನಪು ಹಂಚಿಕೊಂಡ ತೇಜಸ್ವಿ ಸೂರ್ಯ!

ಬೆಂಗಳೂರು / ನವದೆಹಲಿ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯುವ ಮೋರ್ಚಾದ (BJYM) ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ಗುಜರಾತ್‌ನ ವಡೋದರಾ ಲೋಕಸಭಾ ಸಂಸದ ಡಾ. ಹೇಮಾಂಗ್ ಜೋಶಿ ಅವರನ್ನು ನೇಮಕ ಮಾಡಲಾಗಿದೆ. ಈ ಮಹತ್ವದ ಬೆಳವಣಿಗೆಯ ಬೆನ್ನಲ್ಲೇ, ನಿರ್ಗಮಿತ BJYM ರಾಷ್ಟ್ರೀಯ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಮ್ಮ 14 ವರ್ಷಗಳ ಯುವ ಮೋರ್ಚಾ ಪಯಣವನ್ನು ನೆನಪಿಸಿಕೊಂಡು ಅತ್ಯಂತ ಭಾವುಕ ಪತ್ರವೊಂದನ್ನು ಬರೆದಿದ್ದಾರೆ.

​ಸೋಷಿಯಲ್ ಮೀಡಿಯಾ ಎಕ್ಸ್ (X) ನಲ್ಲಿ ತಮ್ಮ ಭಾವನೆಗಳನ್ನು ಹಂಚಿಕೊಂಡಿರುವ ತೇಜಸ್ವಿ ಸೂರ್ಯ, “ಹುದ್ದೆಗಳು ಮತ್ತು ಪದನಾಮಗಳು ಬದಲಾಗಬಹುದು. ಆದರೆ ಒಮ್ಮೆ BJYM ಎಂದರೆ ಎಂದೆಂದಿಗೂ BJYM!” ಎಂದು ಬರೆದುಕೊಂಡಿದ್ದಾರೆ.

​’ಸಾಮಾನ್ಯ ಕಾರ್ಯಕರ್ತನಿಂದ ರಾಷ್ಟ್ರೀಯ ಅಧ್ಯಕ್ಷನವರೆಗೆ…’​ತಮ್ಮ ಪತ್ರದಲ್ಲಿ ಯುವ ಮೋರ್ಚಾದಲ್ಲಿನ ಪಯಣವನ್ನು ಮೆಲಕು ಹಾಕಿದ ತೇಜಸ್ವಿ ಸೂರ್ಯ:

​”ಸುಮಾರು 14 ವರ್ಷಗಳ ಹಿಂದೆ ನಾನು ನಗರ ಘಟಕದ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಬಿಜೆವೈಎಂನಲ್ಲಿ ನನ್ನ ಪಯಣವನ್ನು ಪ್ರಾರಂಭಿಸಿದೆ. ಈ ಪಯಣ ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಹುದ್ದೆಯವರೆಗೆ ಕರೆದೊಯ್ಯುತ್ತದೆ ಎಂದು ನಾನು ಎಂದಿಗೂ ಊಹಿಸಿರಲಿಲ್ಲ. ಈ ಸೇವಾ ಅವಕಾಶ ನೀಡಿದ್ದಕ್ಕಾಗಿ ಮತ್ತು ನನ್ನ ಮೇಲಿಟ್ಟ ನಂಬಿಕೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ನಾಯಕ ಜೆ.ಪಿ. ನಡ್ಡಾ ಹಾಗೂ ಬಿ.ಎಲ್. ಸಂತೋಷ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು,” ಎಂದು ತಿಳಿಸಿದ್ದಾರೆ.

ಮಾರ್ಗದರ್ಶನ ನೀಡಿದ ತರುಣ್ ಚುಗ್ ಮತ್ತು ಸುನಿಲ್ ಬನ್ಸಲ್ ಅವರಿಗೆ ಧನ್ಯವಾದ ಅರ್ಪಿಸಿದ ಅವರು, ದೇಶಾದ್ಯಂತ ತಮಗೆ ಆಶ್ರಯ ನೀಡಿ ಬೆಂಬಲಿಸಿದ ಪ್ರತಿಯೊಬ್ಬ ಕಾರ್ಯಕರ್ತರಿಗೂ ಕೃತಜ್ಞತೆ ಸಲ್ಲಿಸಿದರು.

​ನೂತನ ಅಧ್ಯಕ್ಷ ಹೇಮಾಂಗ್ ಜೋಶಿಗೆ ಶುಭಹಾರೈಕೆ​ಬಿಜೆಪಿ ಯುವ ಮೋರ್ಚಾವನ್ನು ಮತ್ತಷ್ಟು ಎತ್ತರಕ್ಕೆ ಕರೆದೊಯ್ಯುವ ಜವಾಬ್ದಾರಿ ಪಡೆದಿರುವ ನೂತನ ಅಧ್ಯಕ್ಷ ಡಾ. ಹೇಮಾಂಗ್ ಜೋಶಿ ಅವರಿಗೆ ತೇಜಸ್ವಿ ಸೂರ್ಯ ಶುಭಾಶಯ ಕೋರಿದ್ದಾರೆ. ಪಕ್ಷದ ನೂತನ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ನೇತೃತ್ವದಲ್ಲಿ ಬಿಜೆವೈಎಂ ಹೊಸ ಸಾಧನೆಗಳನ್ನು ಮಾಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರಾಜಕೀಯ ರಾಜ್ಯ ರಾಷ್ಟ್ರೀಯ