ಪ್ರಯಾಣಿಕರ ಗಮನಕ್ಕೆ: ಯಶವಂತಪುರ-ಮಂಗಳೂರು, ಕಾರವಾರ ನಡುವಿನ ಹಲವು ರೈಲುಗಳು ರದ್ದು! ಇಲ್ಲಿದೆ ಸಂಪೂರ್ಣ ವಿವರ

ಪ್ರಯಾಣಿಕರ ಗಮನಕ್ಕೆ: ಯಶವಂತಪುರ-ಮಂಗಳೂರು, ಕಾರವಾರ ನಡುವಿನ ಹಲವು ರೈಲುಗಳು ರದ್ದು! ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು/ಮಂಗಳೂರು: ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯಾಪ್ತಿಗೆ ಒಳಪಡುವ ಸಿರಿಬಾಗಿಲು ಎಡಕುಮೇರಿ ರೈಲ್ವೆ ನಿಲ್ದಾಣಗಳ ನಡುವೆ ಟ್ರ್ಯಾಕ್ ನಿರ್ವಹಣೆ (Track Maintenance) ಮತ್ತು ಎಂಜಿನಿಯರಿಂಗ್ ಕಾಮಗಾರಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಿನಲ್ಲಿ ಹಲವು ಪ್ರಮುಖ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.​

ಕರಾವಳಿ ಹಾಗೂ ಬೆಂಗಳೂರು ನಡುವೆ ಸಂಚರಿಸುವ ಪ್ರಯಾಣಿಕರು ತಮ್ಮ ಪ್ರಯಾಣವನ್ನು ಯೋಜಿಸುವ ಮುನ್ನ ರದ್ದಾಗಿರುವ ರೈಲುಗಳ ದಿನಾಂಕಗಳನ್ನು ಪರಿಶೀಲಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

ಪ್ರಯಾಣಿಕರ ಗಮನಕ್ಕೆ:ರೈಲು ಸಂಚಾರದಲ್ಲಿನ ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಕರು ತಮ್ಮ ಪ್ರಯಾಣದ ವೇಳಾಪಟ್ಟಿಯನ್ನು ಕಾಯ್ದಿರಿಸಿಕೊಳ್ಳಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಭಾರತೀಯ ರೈಲ್ವೆಯ ಅಧಿಕೃತ ವೆಬ್‌ಸೈಟ್ www.swr.indianrailways.gov.in ಗೆ ಭೇಟಿ ನೀಡಬಹುದು.

ರಾಜ್ಯ ವಾಹನ ಸುದ್ದಿ