ಐಪಿಎಲ್ 2026: ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್, ಆರ್ಚರ್ ಮಾರಕ ಬೌಲಿಂಗ್; ಕ್ವಾಲಿಫೈಯರ್ 2 ಹಂತಕ್ಕೆ ಲಗ್ಗೆ ಇಟ್ಟ ರಾಜಸ್ಥಾನ್ ರಾಯಲ್ಸ್!

ಐಪಿಎಲ್ 2026: ಸೂರ್ಯವಂಶಿ ಸಿಡಿಲಬ್ಬರದ ಬ್ಯಾಟಿಂಗ್, ಆರ್ಚರ್ ಮಾರಕ ಬೌಲಿಂಗ್; ಕ್ವಾಲಿಫೈಯರ್ 2 ಹಂತಕ್ಕೆ ಲಗ್ಗೆ ಇಟ್ಟ ರಾಜಸ್ಥಾನ್ ರಾಯಲ್ಸ್!

ಕ್ರಿಕೆಟ್ ಜಗತ್ತು ಮತ್ತೊಮ್ಮೆ ಆ ಅದ್ಭುತ ಪ್ರತಿಭೆಗೆ ತಲೆಬಾಗಿದೆ! 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಬಾರಿಸಿದ ಸಿಕ್ಸರ್‌ಗಳ ಸುರಿಮಳೆ ಹಾಗೂ ಜೋಫ್ರಾ ಆರ್ಚರ್ ಅವರ ಮಾರಕ ಬೌಲಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಐಪಿಎಲ್ ಎಲಿಮಿನೇಟರ್ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 47 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಕ್ವಾಲಿಫೈಯರ್ 2 ಹಂತಕ್ಕೆ ಹೆಜ್ಜೆ ಇಟ್ಟರೆ, ಸನ್‌ರೈಸರ್ಸ್ ಹೈದರಾಬಾದ್ ಟೂರ್ನಿಯಿಂದ ಹೊರಬಿದ್ದಿದೆ.

ವೈಭವ್ ಸೂರ್ಯವಂಶಿ ಬಿರುಗಾಳಿ ಬ್ಯಾಟಿಂಗ್: ಜಸ್ಟ್ ಮಿಸ್ ಆಯ್ತು ದಾಖಲೆಯ ಶತಕ!​ ಬುಧವಾರ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ 15 ರ ಹರೆಯದ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಕೇವಲ 29 ಎಸೆತಗಳಲ್ಲಿ 97 ರನ್ ಚಚ್ಚಿ ಇತಿಹಾಸ ನಿರ್ಮಿಸಿದರು. ಹೈದರಾಬಾದ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದ ವೈಭವ್, ತಮ್ಮ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 12 ಗಗನಚುಂಬಿ ಸಿಕ್ಸರ್‌ಗಳನ್ನು ಸಿಡಿಸಿದರು. ಕೇವಲ 3 ರನ್‌ಗಳಿಂದ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ವೇಗದ ಶತಕದ ದಾಖಲೆಯನ್ನು ಕೈತಪ್ಪಿಸಿಕೊಂಡರೂ, ಅವರ ಈ ಆಟ ಕ್ರೀಡಾಭಿಮಾನಿಗಳನ್ನು ಮಂತ್ರಮುಗ್ಧರನ್ನಾಗಿಸಿತು.

​ಕೊನೆಯ 5 ಓವರ್‌ಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

ಹೈದರಾಬಾದ್ ಬ್ಯಾಟಿಂಗ್ ಬೆನ್ನೆಲುಬು ಮುರಿದ ಜೋಫ್ರಾ ಆರ್ಚರ್

244 ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ ಸನ್‌ರೈಸರ್ಸ್ ಹೈದರಾಬಾದ್ ತಂಡದ ಬಲಿಷ್ಠ ಬ್ಯಾಟಿಂಗ್ ಲೈನಪ್‌ಗೆ ವೇಗಿ ಜೋಫ್ರಾ ಆರ್ಚರ್ ಆಘಾತ ನೀಡಿದರು. ತಮ್ಮ ಅದ್ಭುತ ಸ್ಪೆಲ್ ಮೂಲಕ ಹೈದರಾಬಾದ್ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದ ಆರ್ಚರ್, ಎದುರಾಳಿಗಳು ಚೇತರಿಸಿಕೊಳ್ಳದಂತೆ ಮಾಡಿದರು.​

ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದ್ದರೂ ಸನ್‌ರೈಸರ್ಸ್ ಹೈದರಾಬಾದ್ ತಂಡ 19.2 ಓವರ್‌ಗಳಲ್ಲಿ 196 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ 47 ರನ್‌ಗಳ ಭರ್ಜರಿ ಜಯಭೇರಿ ಬಾರಿಸಿ ಟ್ರೋಫಿ ಗೆಲ್ಲುವ ರೇಸ್‌ನಲ್ಲಿ ಮುನ್ನಡೆದಿದೆ.

ಕ್ರೀಡೆ ರಾಷ್ಟ್ರೀಯ