ವಡೋದರಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸಿದೆ. ಸೋಮವಾರ ನಡೆದ ರೋಚಕ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 61 ರನ್ಗಳ ಭರ್ಜರಿ ಜಯ ಸಾಧಿಸಿದ ಸ್ಮೃತಿ ಮಂಧಾನ ಪಡೆ, ಟೂರ್ನಿಯಲ್ಲಿ ಸತತ 5ನೇ ಗೆಲುವು ದಾಖಲಿಸುವುದರೊಂದಿಗೆ ಅಧಿಕೃತವಾಗಿ ಪ್ಲೇ-ಆಫ್ (ಟಾಪ್ 3) ಸ್ಥಾನವನ್ನು ಖಚಿತಪಡಿಸಿಕೊಂಡಿದೆ.

ಗೌತಮಿ ನಾಯಕ್ ಸಮಯೋಚಿತ ಬ್ಯಾಟಿಂಗ್ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 9 ರನ್ಗಳಿಗೆ ಗ್ರೇಸ್ ಹ್ಯಾರಿಸ್ ಮತ್ತು ಜಾರ್ಜಿಯಾ ವೋಲ್ ಅವರ ವಿಕೆಟ್ ಕಳೆದುಕೊಂಡು ತತ್ತರಿಸಿದ್ದ ತಂಡಕ್ಕೆ ಗೌತಮಿ ನಾಯಕ್ ಆಸರೆಯಾದರು. ಜವಾಬ್ದಾರಿಯುತ ಆಟವಾಡಿದ ಗೌತಮಿ, ಆಕರ್ಷಕ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 178 ರನ್ಗಳಿಗೆ ತಲುಪಿಸಿದರು.

ಗುಜರಾತ್ ಜೈಂಟ್ಸ್ ಶರಣು 179 ರನ್ಗಳ ಗುರಿ ಬೆನ್ನಟ್ಟಿದ ಗುಜರಾತ್ ಜೈಂಟ್ಸ್ ತಂಡವು ಆರ್ಸಿಬಿ ಬೌಲರ್ಗಳ ನಿಖರ ದಾಳಿಗೆ ತತ್ತರಿಸಿತು. ಯಾವುದೇ ಹಂತದಲ್ಲೂ ಚೇಸಿಂಗ್ ಮಾಡುವ ಲಕ್ಷಣ ತೋರದ ಗುಜರಾತ್, ಅಂತಿಮವಾಗಿ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಆರ್ಸಿಬಿ ಪ್ರಸಕ್ತ ಸಾಲಿನಲ್ಲಿ ನಾಕೌಟ್ ಹಂತಕ್ಕೇರಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

