ಪುತ್ತೂರು: ಹೊಟೇಲ್ ನಲ್ಲಿ ಕ್ಯಾಶ್ ನಲ್ಲಿದ್ದ ಹಣ ಎಗರಿಸಿದ ವೆಯ್ಟರ್

ಪುತ್ತೂರು: ಹೊಟೇಲ್ ನಲ್ಲಿ ಕ್ಯಾಶ್ ನಲ್ಲಿದ್ದ ಹಣ ಎಗರಿಸಿದ ವೆಯ್ಟರ್

ಪುತ್ತೂರಿನ ನೆಹರೂನಗರದಲ್ಲಿ ಕಾರ್ಯಾಚರಿಸುತ್ತಿರುವ ಕೋಕೋ ಗುರು ಅಡುಗೆಮನೆಯಲ್ಲಿ ವೈಟರ್ ಆಗಿ ಕೆಲಸ ಮಾಡುತ್ತಿದ್ದ ಗಣೇಶ್ ಎಂಬಾತ 69,000 ರೂ. ಮತ್ತು ಮೊಬೈಲ್ ನೊಂದಿಗೆ ಪರಾರಿಯಾದ ಬಗ್ಗೆ ತಿಳಿದು ಬಂದಿದೆ.

ಕ್ಯಾಶಿಯರ್ ಅನ್ನು ಊಟ ಮಾಡಿಬರುವಂತೆ ತಿಳಿಸಿದ ವೆಯ್ಟರ್ ತಾನು ಕ್ಯಾಶ್ ಕೌಂಟರ್ ಅನ್ನು ನೋಡಿಕೊಳ್ಳುವುದಾಗಿ ಹೇಳಿ ಕ್ಯಾಶಿಯರ್ ಅನ್ನು ಊಟಕ್ಕೆ ಕಳುಹಿಸಿದ್ದಾನೆ. ಕ್ಯಾಶಿಯರ್ ಊಟಕ್ಕೆ ತೆರಳುತ್ತಿದ್ದಂತೆ ಕ್ಯಾಶ್ ಡ್ರಯಾರ್ ನಲ್ಲಿದ್ದ ರೂ.69,000 ಹಾಗೂ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಎಲ್ಲಾ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಜ್ಯ