ಭಾರತಕ್ಕೆ ಮಹಾನ್ ರಾಜತಾಂತ್ರಿಕ ವಿಜಯ: ಪಾಕಿಸ್ತಾನ ಬಂಧನದಿಂದ 22 ದಿನಗಳ ನಂತರ ಬಿಎಸ್‌ಎಫ್ ಯೋಧ ಪುರ್ಣಂ ಕುಮಾರ್ ಶಾ ಬಿಡುಗಡೆ

ಭಾರತಕ್ಕೆ ಮಹಾನ್ ರಾಜತಾಂತ್ರಿಕ ವಿಜಯ: ಪಾಕಿಸ್ತಾನ ಬಂಧನದಿಂದ 22 ದಿನಗಳ ನಂತರ ಬಿಎಸ್‌ಎಫ್ ಯೋಧ ಪುರ್ಣಂ ಕುಮಾರ್ ಶಾ ಬಿಡುಗಡೆ

ಪಾಕಿಸ್ತಾನದಲ್ಲಿ 22 ದಿನಗಳ ಕಾಲ ಬಂಧಿತರಾಗಿ ಇದ್ದ ಬಿಎಸ್‌ಎಫ್ ಯೋಧ ಪುರ್ಣಂ ಕುಮಾರ್ ಶಾ ಅವರನ್ನು ಬುಧವಾರ ಬೆಳಿಗ್ಗೆ ಸುಮಾರು 10.30ಕ್ಕೆ ಅಟಾರಿ (ಅಂಮೃತ್ಸರ್) ಜಂಟಿ ಚೆಕ್ ಪೋಸ್ಟ್ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಗಿದೆ. ಈ ಬಿಡುಗಡೆ ಪ್ರಕ್ರಿಯೆ ಶಾಂತಿಯುತವಾಗಿ ಮತ್ತು ನಿಗದಿತ ಪ್ರೋಟೋಕಾಲ್ ಪ್ರಕಾರ ನಡೆದಿದ್ದು, ಬಿಎಸ್‌ಎಫ್ ಈ ಕುರಿತು ಅಧಿಕೃತ ಮಾಹಿತಿ ನೀಡಿದೆ.

2025ರ ಏಪ್ರಿಲ್ 23ರಂದು, ಫಿರೋಝ್‌ಪುರ್ ವಲಯದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಯೋಧ ಶಾ ಅವರು ಭುಲಾಕೆ ಪಾಕಿಸ್ತಾನದ ಭೂಭಾಗದಲ್ಲಿ ಪ್ರವೇಶಿಸಿ ಪಾಕಿಸ್ತಾನ ರೇಂಜರ್‌ಗಳ ಬಂಧನಕ್ಕೆ ಒಳಗಾಗಿದ್ದರು.

ಪಾಕಿಸ್ತಾನ ರೇಂಜರ್‌ಗಳೊಂದಿಗೆ ಬಿಎಸ್‌ಎಫ್ ನಿಯಮಿತವಾಗಿ ಫ್ಲಾಗ್ ಮೀಟಿಂಗ್‌ಗಳು ಮತ್ತು ಇತರೆ ಸಂವಹನ ಮಾಧ್ಯಮಗಳ ಮೂಲಕ ಬೃಹತ್ ಪ್ರಯತ್ನಗಳನ್ನು ಮುಂದುವರೆಸಿದ ನಂತರ ಈ ಹಸ್ತಾಂತರ ಸಾಧ್ಯವಾಯಿತು.

ಯೋಧ ಶಾ ಅವರ ಕುಟುಂಬದವರು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದ್ದಾರೆ. ಕಳೆದ 22 ದಿನಗಳಿಂದ ನಾವು ತುಂಬಾ ಚಿಂತೆಗೊಳಗಾಗಿದ್ದೆವು. ಇಂದು ತುಂಬಾ ಸಂತೋಷವಾಗಿದೆ, ಎಂದು ಶಾ ಅವರ ತಾಯಿ ಹೇಳಿದ್ದಾರೆ.

ಶಾ ಅವರ ಗರ್ಭಿಣಿಯಾದ ಪತ್ನಿ ರಾಜನಿ ಶಾ ತಮ್ಮ ಮಗನೊಂದಿಗೆ ಪಠಾನ್ಕೋಟ್ ಮತ್ತು ನಂತರ ಫಿರೋಝ್‌ಪುರ್ ಪ್ರವಾಸ ಮಾಡಿ ತಮ್ಮ ಪತಿಯ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಪಡೆದು, ಅಧಿಕಾರಿಗಳಿಂದ ಭರವಸೆ ಪಡೆದಿದ್ದರು.

ಅಂತರಾಷ್ಟ್ರೀಯ