ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ದೇವರ ಹರಿಸೇವೆ ಹಾಗೂ ನೇಮೋತ್ಸವ ಸಂಪನ್ನ

ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ದೇವರ ಹರಿಸೇವೆ ಹಾಗೂ ನೇಮೋತ್ಸವ ಸಂಪನ್ನ

ಕನಕಮಜಲು ಕಣಜಾಲು ತರವಾಡು ದೈವಸ್ಥಾನದಲ್ಲಿ ಶ್ರೀ ವೆಂಕಟರಮಣ ದೇವರ ಹರಿಸೇವೆ ಹಾಗೂ ಶ್ರೀ ಧರ್ಮದೈವ ರುದ್ರಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವವು ಭಕ್ತಿಭಾವದೊಂದಿಗೆ ಏಪ್ರಿಲ್ 30, 2025 (ಬುಧವಾರ)ರಿಂದ ಮೇ 1, 2025 (ಗುರುವಾರ)ರ ತನಕ ವಿಜೃಂಭಣೆಯಿಂದ ನೆರವೇರಿತು.

ಏ.30, ಬುಧವಾರದಂದು:
ಬೆಳಿಗ್ಗೆ ಗಣಪತಿ ಹವನ, ನಾಗನಕಟ್ಟೆಯಲ್ಲಿ ಅಭಿಷೇಕ, ತಂಬಿಲ ಹಾಗೂ ಪೂಜೆಗಳು ಜರುಗಿದವು. ಮಧ್ಯಾಹ್ನ ಶ್ರೀ ಸತ್ಯನಾರಾಯಣ ದೇವರ ಪೂಜೆ, ಶ್ರೀ ವೆಂಕಟರಮಣ ದೇವರ ಹರಿಸೇವೆ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನಡೆಯಿತು.

ಅಪರಾಹ್ನದಂದು ಗುರುಕಾರ್ನವರು ಮತ್ತು ಕಲ್ಲುರ್ಟಿ ದೈವದ ಅಗೇಲು, ಭಂಡಾರ ತೆಗೆಯುವ ಕಾರ್ಯಕ್ರಮಗಳು ನಡೆದವು. ಸಂಜೆ ಕುಳೆಕುಂಞಿ ಮತ್ತು ಸತ್ಯದೇವತೆ ದೈವಗಳ ನೇಮ, ಬಳಿಕ ವರ್ಣಾರ ಪಂಜುರ್ಲಿ ಮತ್ತು ಗುಳಿಗ ದೈವಗಳ ನೇಮ ನಡೆದವು.

ಮೇ 1, ಗುರುವಾರದಂದು:
ಬೆಳಿಗ್ಗೆ 7.00 ರಿಂದ ಶ್ರೀ ಧರ್ಮದೈವ ರುದ್ರಚಾಮುಂಡಿ ನೇಮೋತ್ಸವ ಜರುಗಿತು. ನಂತರ ಭಕ್ತಾಧಿಗಳಿಗೆ ಪ್ರಸಾದ ವಿತರಣೆ ಮತ್ತು ಮಧ್ಯಾಹ್ನ ಅನ್ನಸಂತರ್ಪಣೆಯೊಂದಿಗೆ ಸಂಪೂರ್ಣಗೊಂಡಿತು.

ಧಾರ್ಮಿಕ