ಕಲ್ಲಡ್ಕ ಪ್ರಸಿದ್ಧ ಹೊಟೇಲ್ ಶ್ರೀ ಲಕ್ಷ್ಮೀನಿವಾಸದಲ್ಲಿ ಕಳ್ಳತನ 

ಕಲ್ಲಡ್ಕ ಪ್ರಸಿದ್ಧ ಹೊಟೇಲ್ ಶ್ರೀ ಲಕ್ಷ್ಮೀನಿವಾಸದಲ್ಲಿ ಕಳ್ಳತನ 

ಬಂಟ್ವಾಳ: ಕಲ್ಲಡ್ಕದಲ್ಲಿ ಕಳೆದ ಹಲವಾರು ವರ್ಷಗಳಿಂದ ಮನೆಮಾತಾಗಿರುವ ಪ್ರಸಿದ್ಧ ಹೊಟೇಲ್ ಗೆ ಕಳ್ಳನೋರ್ವ ನುಗ್ಗಿದ ಘಟನೆ ನಡೆದಿದ್ದು, ಸಿಸಿ ಟಿವಿ ದೃಶ್ಯಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಕಲ್ಲಡ್ಕದಲ್ಲಿರುವ ಶ್ರೀ ಲಕ್ಮೀನಿವಾಸ ಕೆ.ಟಿ.ಹೋಟೆಲ್ ಗೆ ಕಳ್ಳನೋರ್ವ ನುಗ್ಗಿದ್ದು, ಹೊಟೇಲ್‍ ನಲ್ಲಿ ಇರಿಸಿದ್ದ ದೇವರ ಹುಂಡಿಯನ್ನು ಕಳವು ಮಾಡಿದ್ದಾನೆ. ಈ ಬಗ್ಗೆ ಮಾಲಕರು ಯಾವುದೇ ದೂರು ನೀಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೇವರ ಡಬ್ಬಿಯಲ್ಲಿದ್ದ ಚಿಲ್ಲರೆ ಹಣವನ್ನು ಕಳವು ಮಾಡಿದ ಕಳ್ಳ ಇತರ ಕಡೆಗಳಲ್ಲಿ ಜಾಲಾಡಿರುವ ದೃಶ್ಯ ‌ಸಿಸಿ.ಟಿ.ವಿಯಲ್ಲಿ ಸೆರೆಯಾಗಿದೆ.

ರಾಜ್ಯ