
ಸುಬ್ರಮಣ್ಯ ಮೆಸ್ಕಾಂ ಶಾಖೆಯಲ್ಲಿ ದಿ :01/03/2024 ರಂದು 8ಬ್ಯಾಟರಿ ಕಳ್ಳತನವಾಗಿದ್ದು Cr No-14/2024 ಪ್ರಕರಣ ದಾಖಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಆರೋಪಿ ವೆಂಕಟೇಶ್ ಎಂಬತನನ್ನು ಬಂದಿಸಿ ಆತನಿಂದ ಹಣ ಹಾಗೂ ಬ್ಯಾಟರಿ ವಶಪಡಿಸಿಕೊಳ್ಳಲಾಗಿತ್ತು, ಇನ್ನೊಬ್ಬ ಆರೋಪಿಯಾದ ಮುತ್ತು @ಮಣಿ ಎಂಬತನನ್ನು ಮಂಗಳೂರಿನಲ್ಲಿ ಅರೆಸ್ಟ್ ಮಾಡಿ ಆತನಿಂದ ಕೃತ್ಯಕ್ಕೆ ಬಳಕೆಯಾದ KA19AC 7392 ಗೂಡ್ಸ್ ವಾಹನ ವಶಕ್ಕೆ ಪಡೆಯಲಾಗಿದೆ… ಆರೋಪಿಗಳು ವಿಟ್ಲ ಹಾಗೂ ಸುಳ್ಯ ವ್ಯಾಪ್ತಿಯಲ್ಲಿ ಕೈ ಚಳಕ ತೋರಿಸಿರುವುದಾಗಿದೆ ಎಂದು ತಿಳಿದು ಬಂದಿದೆ.

ಆರೋಪಿ ಪತ್ತೆಯಲ್ಲಿ ಇನ್ಸ್ಪೆಕ್ಟರ್ ಸತೀಶ್ ಹಾಗೂ ಸುಬ್ರಮಣ್ಯ ಠಾಣಾ ಎಸ್ ಐ -ಕಾರ್ತಿಕರವರು, ಎಸ್ ಐ ಮಹೇಶ ಪಿ ಹಾಗೂ ಅಪರಾಧ ಸಿಬ್ಬಂದಿಯಾದ ಮಹೇಶ್ ಹಾಗೂ ಆಕಾಶ್ ರವರು ಪ್ರಮುಖ ಪಾತ್ರವಹಿಸಿರುತ್ತಾರೆ….ಎ ಎಸ್ ಐ -ಕರುಣಾಕರ, ಸಂಧ್ಯಾ, ವಿಠಲ್ ರವರು ಪೂರಕವಾಗಿ ಕಾರ್ಯ ನಿರ್ವಹಿಸಿರುತ್ತಾರೆ

