ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಅಸೈಗೋಳಿಯ ವ್ಯಕ್ತಿ ಅರೆಸ್ಟ್.

ಪತ್ನಿಗೆ ತ್ರಿವಳಿ ತಲಾಕ್ ನೀಡಿದ ಅಸೈಗೋಳಿಯ ವ್ಯಕ್ತಿ ಅರೆಸ್ಟ್.

ಮಂಗಳೂರು : ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ್ದಲ್ಲದೆ ತ್ರಿವಳಿ ತಲಾಖ್ ಹೇಳಿ ವಿಚ್ಚೇದನ ನೀಡಿದ ಆಕೆಯ ಪತಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ, ಬಂಧಿತನನ್ನು ಮಂಗಳೂರು ನಗರ ವಲಯದ ದೇರಳಕಟ್ಟೆ ಅಸೈಗೋಳಿ ನಿವಾಸಿ ಅಬ್ದುಲ್ ಕರೀಂ ಎಂದು ಗುರುತಿಸಲಾಗಿದೆ.
ಇವರು ತನ್ನ ಹೆಂಡತಿಗೆ ವರದಕ್ಷಿಣೆ ನೀಡಲು ಕಿರುಕುಳ ನೀಡುತ್ತಾ ನಿರಂತರ ಹಲ್ಲೆ ಮಾಡಿ ನಂತರ ತಲಾಕ್ ತಲಾಕ್ ತಲಾಕ್ ಎಂದು ಹೇಲಿ ವಿಚ್ಛೇದನೆ ನೀಡಿದ್ದು, ಈ ಬಗ್ಗೆ ನೊಂದ ಮಹಿಳೆಯು ನಗರದ ಮಹಿಳಾ ಪೋಲಿಸ್ ಠಾಣೆ ಯಲ್ಲಿ ತನ್ನ ಗಂಡ ಕರೀಮ್ ಎಂಬಾತನ ವಿರುದ್ದ ದೂರು ನೀಡಿದ್ದರು. ಇದೀಗ ಮಹಿಳಾ ಪೊಲೀಸ್ ಠಾಣೆಯ ಪೋಲೀಸರು ಆರೋಪಿಯನ್ನು ಮಂಗಳವಾರ ರಾತ್ರಿ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬುಧವಾರ ನ್ಯಾಯಾಲಯದಲ್ಲಿ ಹಾಜರಿ ಪಡಿಸಿದ್ದು ನಗರದ ಮೂರನೆ ಜೆ. ಎಂ. ಎಫ್. ಸೀ ನ್ಯಾಯಾಲಯವು ದಿನಾಂಕ 08/11/2023 ರಂದು ಆರೋಪಿ ಕರೀಮ್ ಎಂಬಾತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯ ವಿರುದ್ದ ನಗರದ ಪಾಂಡೇಶ್ವರ ಮಹಿಳಾ ಪೋಲಿಸ್ ಠಾಣೆಯ ಕ್ರೈಂ ನಂಬರ್ 110/23 ಯಾಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ 3 ಮತ್ತು 4, I.P.C ಕಾಯ್ದೆ 323,498A,504,506, ಮುಸ್ಲಿಂ ಮಹಿಳಾ ರಕ್ಷಣಾ ಕಾಯ್ದೆ 4 ಮುಂತಾದ ಪ್ರಕರಣಗಳು ದಾಖಲಿಸಲಾಗಿದೆ

ರಾಜ್ಯ