ವಿದ್ಯುತ್ ಸ್ಪರ್ಶಗೊಂಡು ಲೈನ್ ಮೆನ್ ಸಾವು

ವಿದ್ಯುತ್ ಸ್ಪರ್ಶಗೊಂಡು ಲೈನ್ ಮೆನ್ ಸಾವು

ಮಡಿಕೇರಿ ನ.9 : ವಿದ್ಯುತ್ ಲೈನ್ ದುರಸ್ತಿ ಪಡಿಸುತ್ತಿದ್ದ ಸಂದರ್ಭ ವಿದ್ಯುತ್ ಸ್ಪರ್ಶಗೊಂಡು ಲೈನ್ ಮೆನ್ ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ಆರ್ಜಿ ಗ್ರಾಮದಲ್ಲಿ ನಡೆದಿದೆ.
ಅನಿಲ್ ಮ್ಯಾನೇಜಸ್(45) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಕಳೆದ 20 ವರ್ಷಗಳಿಂದ ಅನಿಲ್ ಅವರು ವಿರಾಜಪೇಟೆ ವಲಯದಲ್ಲಿ ಲೈನ್‍ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಹೆಗ್ಗಳ ವಿಭಾಗಕ್ಕೆ ಒಳಪಡುವ ಆರ್ಜಿ ಗ್ರಾಮದಲ್ಲಿ 11 ಕೆ.ವಿ ವಿದ್ಯುತ್ ತಂತಿ ದುರಸ್ತಿಪಡಿಸುತ್ತಿದ್ದ ಸಂದರ್ಭ ಮತ್ತೊಂದು ಭಾಗದಲ್ಲಿ ತುಂಡಾಗಿ ಬಿದ್ದಿದ್ದ ತಂತಿಯಿಂದ ಭೂಮಿಗೆ ವಿದ್ಯುತ್ ಪ್ರಹರಿಸಿ ಅನಿಲ್ ಮ್ಯಾನೇಜಸ್ ಸ್ಥಳದಲ್ಲೇ ಮೃತಪಟ್ಟರು.


ಘಟನಾ ಸ್ಥಳಕ್ಕೆ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಸುರೇಶ್ ಪಿ.ಎಸ್, ಸಹಾಯಕ ಇಂಜಿನಿಯರ್ ಟೆಕ್ನಿಕಲ್ ವಿಭಾಗದ ಸೋಮೇಶ್, ಸಹಾಯಕ ಇಂಜಿನಿಯರ್ ಅಯ್ಯನ ಗೌಡ ಪಾಟೀಲ್ ಅವರುಗಳು ಭೇಟಿ ನೀಡಿದರು. ದುರಂತದ ಬಗ್ಗೆ ಮಾಹಿತಿಯನ್ನು ಕಲೆ ಹಾಕಿದ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಘಟನೆ ಕುರಿತು ವಿರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಾಗಿದೆ

ರಾಜ್ಯ