ತುಳುವಿನ ಸ್ಥಾನಮಾನಕ್ಕೆ ಟ್ವೀಟ್ ಅಭಿಯಾನ.

ತುಳುವಿನ ಸ್ಥಾನಮಾನಕ್ಕೆ ಟ್ವೀಟ್ ಅಭಿಯಾನ.

ಮಂಗಳೂರು: ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಸಿಗಬೇಕು ಎಂದು ಆಗ್ರಹಿಸಿ, ಹಲವು ಸಂಘಟನೆಗಳು ನ. 1ರ ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನವನ್ನಾಗಿ ಆಚರಿಸಿದೆ.
ಟ್ವಿಟ್ಟರ್‌ನಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೆ ಟ್ವೀಟ್‌ ಅಭಿಯಾನ ಹಮ್ಮಿಕೊಂಡಿದ್ದು, ನಿನ್ನೆ ಬೆಳಗ್ಗಿನಿಂದ ರಾತ್ರಿಯವರೆಗೆ ಸಾವಿರಾರು ಮಂದಿ ಟ್ವಿಟ್ ಮಾಡುವ ಮೂಲಕ ತುಳು ಭಾಷೆಗೆ ಸೂಕ್ತ ಸ್ಥಾನ ಮಾನ ನೀಡುವಂತೆ ಬೆಂಬಲ ಸೂಚಿಸಿದ್ದಾರೆ
ತುಳು ಭಾಷೆ ರಾಜ್ಯ ಭಾಷೆಯನ್ನಾಗಿ ಘೋಷಣೆ ಮಾಡಬೇಕು, ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆ ಮಾಡಬೇಕು ಎಂದು ಹಲವು ವರ್ಷಗಳಿಂದ ಅಭಿಯಾನ ಸೇರಿದಂತೆ ಹಲವು ಸಂಘಟನೆಗಳು ಮನವಿ ನೀಡುತ್ತಾ ಬಂದಿದೆ. ಆದರೆ ಇನ್ನೂ ತುಳುನಾಡಿಗರ ಈ ಕನಸು ಈಡೇರಿಲ್ಲ.
ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಹೀಗಾಗುತ್ತಿದ್ದು, ಜನಪ್ರತಿನಿಧಿಗಳಿಗೆ ಕಲಾಪಗಳಲ್ಲಿ ಆಗ್ರಹಿಸಬೇಕು ಎಂದು ಅನೇಕರು ತಮ್ಮ ಟ್ವೀಟ್‌ ಮೂಲಕ ಪ್ರಧಾನಿ, ಮುಖ್ಯಮಂತ್ರಿಗಳು, ಸಂಸದರು, ಶಾಸಕರು ಸಹಿತ ವಿವಿಧ ಜನಪ್ರತಿನಿಧಿಗಳನ್ನು ಒತ್ತಾಯಿಸಿದ್ದಾರೆ

ರಾಜ್ಯ