ಆಭರಣ ಜ್ಯುವೆಲರ್ಸ್‌ನ ಶೋರೂಂಗಳಲ್ಲಿ ಐಟಿ ದಾಳಿ

ಆಭರಣ ಜ್ಯುವೆಲರ್ಸ್‌ನ ಶೋರೂಂಗಳಲ್ಲಿ ಐಟಿ ದಾಳಿ

ಕರಾವಳಿಯ ಹೆಸರಾಂತ ಚಿನ್ನಾಭರಣ ಮಳಿಗೆ ಆಭರಣ ಜ್ಯುವೆಲರ್ಸ್‌ನ ಶೋರೂಂಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಉಡುಪಿ ನಗರದಲ್ಲಿರುವ ಪ್ರಮುಖ ಮಳಿಗೆ, ಅಲ್ಲೇ ಸಮೀಪ ಇರುವ ಆಭರಣ ತಯಾರಿಕಾ ಘಟಕ, ಬ್ರಹ್ಮಾವರ, ಮಂಗಳೂರಿನ ಕದ್ರಿ ಬಳಿಯ ಶಿವಭಾಗ್ ನಲ್ಲಿರುವ ಮಳಿಗೆಗಳಿಗೆ ಏಕಕಾಲದಲ್ಲಿ ದಾಳಿ ನಡೆದಿರುವುದು ತಿಳಿದುಬಂದಿದೆ. ದಾಳಿಯ ಹಿನ್ನೆಲೆಯಲ್ಲಿ ಪೊಲೀಸ್ ಭದ್ರತೆ ಕೂಡ ಒದಗಿಸಲಾಗಿದೆ.
ಐದಾರು ಜನ ಐಟಿ ಅಧಿಕಾರಿಗಳ ತಂಡದಿಂದ ಜ್ಯುವೆಲ್ಲರಿಯಲ್ಲಿ ಶೋಧ ಕಾರ್ಯ ನಡೆಯುತ್ತಿದ್ದು, ಬಿಲ್ಲಿಂಗ್ ವಿವರ, ಚಿನ್ನದ ಬೇರೆ ಬೇರೆ ದಾಖಲೆ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ರಾಜ್ಯ