ಬಿಜೆಪಿ ರೈತ ಮೋರ್ಚಾ ಹಾಗೂ ಸುಳ್ಯ ಬಿಜೆಪಿ ಮಂಡಲದ ವತಿಯಿಂದ ರಾಜ್ಯಸರಕಾರ ರೈತ ವಿರೋಧಿಯಾಗಿದೆ ಎಂದು ಆರೋಪಿಸಿ ಸುಳ್ಯದಲ್ಲಿ ಪ್ರತಿಭಟನಾ ಸಭೆ.

ಬಿಜೆಪಿ ರೈತ ಮೋರ್ಚಾ ಹಾಗೂ ಸುಳ್ಯ ಬಿಜೆಪಿ ಮಂಡಲದ ವತಿಯಿಂದ ರಾಜ್ಯಸರಕಾರ ರೈತ ವಿರೋಧಿಯಾಗಿದೆ ಎಂದು ಆರೋಪಿಸಿ ಸುಳ್ಯದಲ್ಲಿ ಪ್ರತಿಭಟನಾ ಸಭೆ.

ಬಿಜೆಪಿ ಪಕ್ಷ ರೈತರ ಜೀವನದ ಅನುಕೂಲಕ್ಕೆ ಹಾಗೂ ರೈತರಿಗೆ ಅನ್ಯಾಯವಾದಾಗ ಮುಂದೆಯೂ ರೈತರ ಪರ ನಿಲ್ಲಲಿದೆ : ಭಾಗೀರಥಿ ಮುರಳ್ಯ

ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗೆ ಜನರ ತೆರಿಗೆ ಹಣ ಬಳಸಲಾಗಿದೆಯೇ ಹೊರತು .ಕಾಂಗ್ರೇಸಿಗರ ಮನೆಯ ಅಡಿಕೆ ಮಾರಾಟದಿಂದ ತಂದ ಹಣವಲ್ಲ: ಹರೀಶ್ ಕಂಜಿಪಿಲಿ.

ಬಿಜೆಪಿ ರೈತ ಮೋರ್ಚಾ ಹಾಗೂ ಸುಳ್ಯ ಬಿಜೆಪಿ ಮಂಡಲದ ವತಿಯಿಂದ ರಾಜ್ಯಸರಕಾರ ರೈತ ವಿರೋಧಿಯಾಗಿದೆ ಎಂದು ಆರೋಪಿಸಿ ಸುಳ್ಯದ ತಾಲೂಕು ಕಛೇರಿ ಬಳಿ ಪ್ರತಿಭಟನಾ ಸಭೆಯನ್ನು ನಡೆಸಿದೆ.ಪ್ರತಿಭಟನೆಯಲ್ಲಿ ಭಾಗವಹಿಸಿದ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸರಕಾರದ ಜನವಿರೋಧಿ ನೀತಿಯ ವಿರುದ್ದ ರೈತರು ಒಗ್ಗಟ್ಟಾಗಿ ಸರಕಾರದ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು
ರೈತರ ಜೀವನ ಸುಗಮವಾಗಲು ಹೋರಾಟ ಅನಿವಾರ್ಯ . ಈ ರಾಜ್ಯದ ರೈತರ ಏಳಿಗೆಗಾಗಿ ಬಿಜೆಪಿ ಮುಂದಿನ ದಿನದಲ್ಲೂ ಬೃಹತ್ ಪ್ರತಿಭಟನೆ ನಡೆಸಲು ಹಿಂದೇಟು ಹಾಕುವುದಿಲ್ಲ, ಎಂದು ಹೇಳಿದ್ದಾರೆ,ಪ್ರತಿಭಟನೆಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಮಾತನಾಡಿ,ಬಿಜೆಪಿ ಅವದಿಯಲ್ಲಿ ಜಾರಿಗೆ ತಂದ ಸುಮಾರು ೨೦ ಕ್ಕೂ ಹೆಚ್ಚು ಯೋಜನೆ ಸ್ಥಗಿತ ಗೊಳಿಸುವುದರ ಮೂಲಕ ಈಗಿನ ಕಾಂಗ್ರೇಸ್ ಆಡಳಿತದ ಸರಕಾರ ಜನರಿಗೆ ಅನ್ಯಾಯ ಮಾಡಿದೆ, ರಾಜ್ಯಸರಕಾರ ತಂದ ಗ್ಯಾರಂಟಿ ಯೋಜನೆಯನ್ನು ಬಿಜೆಪಿಯವರು ಪಡೆದುಕೊಳ್ಳುತ್ತಿಲ್ಲವೇ ಎಂದು ಪ್ರಶ್ನೆ ಮಾಡುತ್ತಿರುವ ಕಾಂಗ್ರೇಸ್ ಸ್ಥಳೀಯ ನಾಯಕರು, ತಮ್ಮ ಮನೆಯಿಂದ ಅಡಕೆ ಮಾರಿ ತಂದ ಹಣದಿಂದ ಜನರಿಗೆ ಹಂಚುತ್ತಿದ್ದೀರಾ, ಯಾವೂದೇ ಯೋಜನೆ ಇದ್ದರೂ ಅದು ಜನರ ತೆರಿಗೆ ಹಣವೇ ಹೊರತು, ನಿಮ್ಮ ಹಣ ಅಲ್ಲಾ .., ಕೇಂದ್ರ ಸರಕಾರದ ಯೋಜನೆ ನೀವು ಪಡೆದುಕೊಳ್ಳುತ್ತಿಲ್ಲವೇ ಎಂದು ಪ್ರಶ್ನೆ ಮಾಡಿದ ಅವರು ಕಾಂಗ್ರೇಸ್ ಜನ ವಿರೋಧಿ ನೀತಿ ವಿರುದ್ದ ಮುಂದೆ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ , ವೆಂಕಟ್ ದಂಬೆಕೋಡಿ , ವಿನಯ್ ಕುಮಾರ್ ಕಂದಡ್ಕ, ಪುಲಸ್ಯ ರೈ ಮೊದಲಾದವರು ಕಾಂಗ್ರೇಸ್ ಸರಕಾರದ ವಿರುದ್ಧ ಹರಿಹಾಯ್ದರು,
ಬಿಜೆಪಿ ಪ್ರಮುಖರಾದ ಎಸ್.ಎನ್.ಮನ್ಮಥ, ಸುಬೋದ್ ಶೆಟ್ಟಿ ಮೆನಾಲ , ಚನಿಯ ಕಲ್ತಡ್ಕ, ಮಹೇಶ್ ರೈ ಮೇನಾಲ, ಸಂತೋಷ್ ಕುತ್ತಮೊಟ್ಟೆ, ಸುನಿಲ್ ಕೇರ್ಪಳ , ಪುಷ್ಪಾವತಿ ಬಾಳಿಲ, ಶುಭದಾ ರೈ,ಮುಗುಪ್ಪು ಕೂಸಪ್ಪ ಗೌಡ,ಶ್ಯಾಮ್ ಪಾನತ್ತಿಲ,ವಿನಯ್ ಮುಳುಗಾಡು,ಸುಪ್ರಿತ್ ಮೊಂಟಡ್ಕ,ಅಶೋಕ್ ಪೀಚೆ, ದಯಾನಂದ ಕುರುಂಜಿ, ಕಿರಣ್ ಕುರುಂಜಿ, ಗುರುಮೂರ್ತಿ, ಕರುಣಾಕರ ಹಾಸ್ಪಾರೆ,ಜಗದೀಶ ಸರಳಿಕುಂಜ, ವಿನುತಾ ಪಾತಿಕಲ್ಲು, ಸೇರಿದಂತೆ ಹಲವಾರು ಬಿಜೆಪಿ ಪ್ರಮುಖರಿದ್ದರು, ರಮೇಶ್ ಕಲ್ಪುರೆ ಸ್ವಾಗತಿಸಿ ಮಹೇಶ್ ರೈ ಮೇನಾಲ ವಂದಿಸಿದರು. ಬಳಿಕ ಸರಕಾರಕ್ಕೆ ಉಪ ತಹಶೀಲ್ದಾರ್ ಮಂಜುನಾಥ್ ಮುಖಾಂತರ ಮನವಿ ಸಲ್ಲಿಸಲಾಯಿತು.

ರಾಜ್ಯ