ಸಾವಿರಾರು ಯಕ್ಷ ಪ್ರೇಮಿಗಳ ಮನ ತಣಿಸಿದ ಸುಳ್ಯ ರಂಗಮನೆ ಯಕ್ಷ ಸಂಭ್ರಮ.ವಿಶ್ವವಿನೋದ ಬನಾರಿ ಮತ್ತು ಕುಮಾರ ಸುಬ್ರಹ್ಮಣ್ಯರಿಗೆ ವನಜ ರಂಗಮನೆ ಪ್ರಶಸ್ತಿ ಪ್ರದಾನ.

ಸಾವಿರಾರು ಯಕ್ಷ ಪ್ರೇಮಿಗಳ ಮನ ತಣಿಸಿದ ಸುಳ್ಯ ರಂಗಮನೆ ಯಕ್ಷ ಸಂಭ್ರಮ.ವಿಶ್ವವಿನೋದ ಬನಾರಿ ಮತ್ತು ಕುಮಾರ ಸುಬ್ರಹ್ಮಣ್ಯರಿಗೆ ವನಜ ರಂಗಮನೆ ಪ್ರಶಸ್ತಿ ಪ್ರದಾನ.

ಪ್ರಸಿದ್ದ ರಂಗ ಕಲಾವಿದ ಜೀವನ್ ರಾಮ್ ಸುಳ್ಯ ಮುಂದಾಳುತ್ವದಲ್ಲಿ ನಡೆಯುತ್ತಿರುವ ಸುಳ್ಯದ ಪ್ರಸಿದ್ಧ ರಂಗಮನೆ ಸಾಂಸ್ಕ್ರತಿಕ ಕಲಾ ಕೇಂದ್ರದ ವತಿಯಿಂದ ವನಜ ರಂಗಮನೆ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಯಕ್ಷ ಸಂಭ್ರಮ ಕಾರ್ಯಕ್ರಮ ಸುಳ್ಯದ ಹಳೇಗೇಟಿನ ರಂಗಮನೆ ಆಡಿಟೋರಿಯಂನಲ್ಲಿ ಆ.27ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು .

ಕೃಷ್ಣ ಮೂರ್ತಿ ಮುಖ್ಯ ಅತಿಥಿಯಾಗಿದ್ದರು. ವೇದಿಕೆಯಲ್ಲಿ ರಂಗಮನೆಯ ಹಿರಿಯ ಯಕ್ಷಗಾನ ಕಲಾವಿದರಾದ ಸುಜಾನ ಸುಳ್ಯ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿಶ್ವ ವಿನೋದ ಬನಾರಿ ಮತ್ತು ಕುಮಾರ ಸುಬ್ರಹ್ಮಣ್ಯ ಇವರಿಗೆ 2022 ಮತ್ತು 2023ನೇ ವರ್ಷದ ವನಜ ರಂಗಮನೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಮನ ರಂಜಿಸಿದ ಯಕ್ಷಸಂಭ್ರಮ

ಸಂಜೆ 5.45ಕ್ಕೆ ಸುಜಾನ ಯಕ್ಷ ಶಿಕ್ಷಣ ಕೇಂದ್ರದ ಹಿಮ್ಮೇಳ ಕಲಾವಿದರಿಂದ ಚೆಂಡೆ ಮದ್ದಳೆ ಝೇಂಕಾರ‌ ನಡೆಯಿತು.‌


ಸಂಜೆ 6.10ಕ್ಕೆ ಎನ್.ಎಂ.ಎ.ಎಂ. ತಾಂತ್ರಿಕ ಮಹಾವಿದ್ಯಾಲಯ ನಿಟ್ಟೆ‌ ಕಾರ್ಕಳ ತಾಲೂಕು ಇವರಿಂದ ಪ್ರಶಸ್ತಿ ವಿಜೇತ ರಂಗಶಿಸ್ತಿನ ಯಕ್ಷಗಾನ ಶರಣ ಸೇವಾ ರತ್ನ ನಡೆಯಿತು. ‌‌‌‌‌ಬಳಿಕ ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರ ಮೂಡಬಿದಿರೆ ಇವರಿಂದ ಪ್ರಶಸ್ತಿ ವಿಜೇತ ರಂಗಶಿಸ್ತಿನ ಯಕ್ಷಗಾನ ನರ ಶಾರ್ದೂಲ ನಡೆಯಿತು

ಸಾಯಿನಕ್ಷತ್ರ ಮಜಿಕೋಡಿ ಪ್ರಾರ್ಥಿಸಿದರು. ರಂಗಮನೆ ನಿರ್ದೇಶಕ ಜೀವನ್ ರಾಂ ಸುಳ್ಯ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು‌‌ ವಿದ್ಯಾಶಾರದ, ವಿನೋದಿನಿ ಯನ್. ರೈ ವಳಕುಂಜ ಕುಮಾರ ಸುಬ್ರಹ್ಮಣ್ಯ, ರವೀಶ್ ಪಡ್ಡಂಬೈಲು ಸರೋಜಿನಿ ಬನಾರಿ, ಮಾ| ಮನುಜ ನೇಹಿಗ ಸಹಕರಿಸಿದರು.

ರಾಜ್ಯ