
ವಿಶ್ವಹಿಂದೂ ಪರಿಷದ್ ಭಜರಂಗದಳ ಹನುಮಾನ್ ಶಾಖೆ ವತಿಯಿಂದ ಅಖಂಡ ಭಾರತ ಸಂಕಲ್ಪ ಹಾಗೂ ಪಂಜಿನ ಮೆರವಣಿಗೆ ಆ.೧೩ ರಂದು ಅರಂತೋಡಿನಲ್ಲಿ ನಡೆಯಿತು ಪಂಜಿನ ಮೆರವಣಿಗೆ ಕೋಡಂಕೇರಿ ಕೋರಗಜ್ಜನ ದ್ವಾರದಿಂದ ಹೊರಟು ದುರ್ಗಾಮತಾ ಮಂದಿರದಲ್ಲಿ ಸಮಾಪನ ಗೊಂಡಿತು ನಂತರ ಸಭಾ ಕಾರ್ಯಕ್ರಮ ಆರಂತೋಡು ತೊಡಿಕಾನ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ನಡೆಯಿತು ದಿಕ್ಸೂಚಿ ಭಾಷಣ ನಳಿನಾಕ್ಷಿ ವೆಂಕಟ್ರಮಣ ಆಚಾರ್ಯ ಕಲ್ಮಡ್ಕ ಮಾಡಿದರು ವೇದಿಕೆಲ್ಲಿ ವಿಶ್ವಹಿಂದೂ ಪರಿಷದ್ ಸುಳ್ಯ ಪ್ರಖಂಡದ ಅಧ್ಯಕ್ಷರಾದ ಸೋಮಶೇಖರ್ ಪೈಕ ಆರಂತೋಡು ಹನುಮಾನ್ ಶಾಖೆಯ ಅಧ್ಯಕ್ಷರಾದ ವಿನೋದ್ ಕುಮಾರ್ ಉಳುವಾರು ಉಪಸ್ಥಿತರಿದ್ದು ಸಭೆಯ ಅದ್ಯಕ್ಷತೆಯನ್ನು ನಿವೃತ ಸೈನಿಕ ರಾದ ಮಾಧವ ಮೇಲೆಅಡ್ತಲೆ ವಹಿಸಿದ್ದರು ಅಲ್ಲದೆ ಪರಿವಾರದ ಹಿರಿಯರು ಕಾರ್ಯಕರ್ತರು ಹಾಗೂ ಮಾತೆಯರು ಉಪಸ್ಥಿತರಿದ್ದು ವಂದೇ ಮಾತರಂ ಗೀತೆ ಯನ್ನು ಹಾಡಿದರು ಸ್ವಾಗತ ಕುಸುಮಾಧರ ಅಡ್ಕಬಳೆ ಹಾಗೂ ಧನ್ಯವಾದ ರಾಜೇಂದ್ರ ಮರ್ಕಂಜ ಮಾಡಿದರು ನಿರೂಪಣೆ ಜೀವನ ಮಾಸ್ಟರ್ ಆರಂತೋಡು ಮಾಡಿದರು

