ಬೈಂದೂರು: ಮೀನುಗಾರಿಕಾ ದೋಣಿ ಮುಳುಗಡೆ; ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ..

ಬೈಂದೂರು: ಮೀನುಗಾರಿಕಾ ದೋಣಿ ಮುಳುಗಡೆ; ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ..

ಬೈಂದೂರು: ಮೀನುಗಾರಿಕಾ ದೋಣಿ ಮುಳುಗಡೆ; ಓರ್ವ ಮೃತ್ಯು, ಇನ್ನೋರ್ವ ನಾಪತ್ತೆ
ಬೈಂದೂರು:ಉಪ್ಪುಂದ ಸಮೀಪ ಮೀನುಗಾರಿಕಾ ದೋಣಿಯೊಂದು ಮುಳುಗಡೆಯಾಗಿ ಓರ್ವ ಮೃತಪಟ್ಟು, ಇನ್ನೊಬ್ಬರ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿದೆ.

ನಾಗೇಶ್ (29) ಮೃತಪಟ್ಟವರು ಮತ್ತು ಸತೀಶ್ (31) ನೀರುಪಾಲಾದ ಯುವಕ ಎಂದು ತಿಳಿದುಬಂದಿದೆ. ಸಚಿನ್ ಎಂಬವರ ಮಾಲಕತ್ವದ ದೋಣಿಯು ಅಲೆಗಳ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಕಡಲು ಪಾಲಾದ ಮೀನುಗಾರರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

ದೋಣಿಯಲ್ಲಿ ಒಟ್ಟು 8 ಮಂದಿ ಇದ್ದರು. ಉಳಿದ ನಾಲ್ವರು ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳಕ್ಕೆ ಬೈಂದೂರು ತಹಸಿಲ್ದಾರ್ ಶ್ರೀಕಾಂತ್ ಹೆಗಡೆ, ಬೈಂದೂರು ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಕಾಯ್ಕಿಣಿ, ಬೈಂದೂರ್ ಪೊಲೀಸ್, ಅಗ್ನಿಶಾಮಕ ದಳ, ಪೋಸ್ಟಲ್ ಗಾರ್ಡ್ , ಮೀನುಗಾರಿಕಾ ಸಹಾಯಕ ನಿರ್ದೇಶಕರು ಕುಂದಾಪುರ ಸುಮಲತಾ, ಮುಳುಗುತಜ್ಞ ದಿನೇಶ್ ಖಾರ್ವಿ ಹಾಗೂ ತಂಡ, ಬೈಂದೂರು ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ್ ಖಾರ್ವಿ ಉಪ್ಪುಂದ ಮೊದಲಾದವರು ಆಗಮಿಸಿದ್ದರು.

ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ

ರಾಜ್ಯ