ಸೌಜನ್ಯ ಅತ್ಯಾಚಾರ ಪ್ರಕರಣ ಮರು ತನಿಖೆಯಾಗಲಿ:ನೈಜ್ಯ ಆರೋಪಿ ಎಷ್ಟೇ ಪ್ರಭಾವಿಯಾದರೂ ಬಂಧಿಸುವ ಕೆಲಸವಾಗಲಿ:ಆ.1ರಂದು ಸುಳ್ಯದಲ್ಲಿ ಬೃಹತ್ ವಾಹನ ಜಾಥಾ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುತ್ತೇವೆ : ಚಂದ್ರಾಕೋಲ್ಚಾರ್

ಸೌಜನ್ಯ ಅತ್ಯಾಚಾರ ಪ್ರಕರಣ ಮರು ತನಿಖೆಯಾಗಲಿ:
ನೈಜ್ಯ ಆರೋಪಿ ಎಷ್ಟೇ ಪ್ರಭಾವಿಯಾದರೂ ಬಂಧಿಸುವ ಕೆಲಸವಾಗಲಿ:
ಆ.1ರಂದು ಸುಳ್ಯದಲ್ಲಿ ಬೃಹತ್ ವಾಹನ ಜಾಥಾ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸುತ್ತೇವೆ : ಚಂದ್ರಾಕೋಲ್ಚಾರ್

ಬೆಳ್ತಂಗಡಿಯ ಸೌಜನ್ಯ ಹತ್ಯೆ ಪ್ರಕರಣದಲ್ಲಿ ಗೌಡ ಸಮಾಜವು ಹಿಂದೆಯೂ ಸೌಜನ್ಯ ಮನೆಯವರ ಬೆಂಬಲಕ್ಕೆ ನಿಂತಿದ್ದೇವೆ, ಮುಂದೆಯೂ ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಮಾಡಿರುವ ನೈಜ್ಯ ಆರೋಪಿಗಳ ಪತ್ತೆಯಾಗಬೇಕು, ಸರಕಾರ ಮರು ತನಿಖೆಗೆ ನಡೆಸಬೇಕು, ನೈಜ ಆರೋಪಿಗಳನ್ನು ಪತ್ತೆ ಮಾಡಿ ಕಠಿಣ ಶಿಕ್ಷೆಗೆ ಒಳಪಡಿಸುವಂತಾಗಬೇಕು ಹಾಗೂ ಇದರ ತನಿಖೆಯನ್ನು ಸದೃಡ ಕರ್ನಾಟಕ ಪೋಲಿಸ್ ಇಲಾಖೆ ನಡೆಸುವಂತಾಗಬೇಕು ಎಂದು ಸುಳ್ಯದ ಗೌಡರ ಯುವ ಸೇವಾ ಸಂಘ ಒತ್ತಾಯಿಸಿದೆ.


ಜು.೨೯ರಂದು ಸುಳ್ಯ ಪ್ರೆಸ್ರ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಚಂದ್ರಾ ಕೋಲ್ಚಾರ್ ಈ ವಿಷಯ ತಿಳಿಸಿದರು.

ಬೆಳ್ತಂಗಡಿ ಸೌಜನ್ಯ ಹತ್ಯೆ ಪ್ರಕರಣ ೨೦೧೧ರಲ್ಲಿ ನಡೆದು ಇಂದಿಗೆ ೧೧ ವರ್ಷಗಳಾಗಿವೆ. ಸೌಜನ್ಯ ಕೊಲೆಯಲ್ಲ ಅದೊಂದು ಬಲಿದಾನ ,ಆ ಹೆಣ್ಣು ಮಗಳಿಗೆ ಆದ ಅನ್ಯಾಯಕ್ಕೆ ಮತ್ತು ಅವರ ಮನೆಯವರಿಗೆ ಇದುವರೆ ನ್ಯಾಯ ಸಿಕ್ಕಿಲ್ಲ. ಬಂದಿತನಾದ ಆರೋಪಿ ನಿರಾಪರಾದಿಯೆಂದು ನ್ಯಾಯಾಲಯ ಹೇಳಿದೆ. ಆದ್ದರಿಂದ ಈ ಪ್ರಕಣವನ್ನು ಮರು ತನಿಖೆ ನಡೆಸಬೇಕು ಎಂದು ಸರಕಾವನ್ನು ಒತ್ತಾಯಿಸುವುದಾಗಿ ಹೇಳಿದ ಅವರು ಈ ಬಗ್ಗೆ ಆ.೧ರಂದು ಮಂಗಳವಾರ ಸುಳ್ಯದ ವೆಂಕಟರಮಣ ಸೊಸೈಟಿ ಬಳಿಯಿಂದ ಬೆಳಗ್ಗೆ ೧೦ ಗಂಟೆಗೆ ವಾಹನ ಜಾಥಾದ ಮೂಲಕ ಸುಳ್ಯ ನಗರದಲ್ಲಿ ಮೆರವಣಿಗೆಯಲ್ಲಿ ಸಾಗಿ ಸುಳ್ಯ ತಾಲೂಕು ಕಚೇರಿಗೆ ತೆರಳಿ ತಹಶೀಲ್ದಾರ್ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಿದ್ದೇವೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ನಮ್ಮ ಸಮಾಜದ ಕುರಿತು ಅವಹೇಳನ ಸಂದೇಶ ಬರುತ್ತಿದೆ. ಇದು ಸರಿಯಲ್ಲ. ನಮ್ಮ ಸಂಘಟನೆ ಸಮಾಜದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. ನ್ಯಾಯದ ಪರ ನಿರಂತರವಾಗಿ ನಾವು ಧ್ವನಿಯಾಗಿರುತ್ತೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಗೌಡ ಸಂಘದ ಕಾರ್ಯದರ್ಶಿ ಬೆಳ್ಯಪ್ಪ ಗೌಡ ಬಳ್ಳಡ್ಕ, ಮಹಿಳಾ ಘಟಕದ ಅಧ್ಯಕ್ಷ ಪುಷ್ಪಾ ರಾಧಾಕೃಷ್ಣ, ಗೌಡ ಸಂಘದ ಪ್ರಮುಖರಾದ ಡಾ| ಎನ್.ಎ.ಜ್ಞಾನೇಶ್, ಪಿ.ಎಸ್.ಗಂಗಾಧರ್, ಕೂಸಪ್ಪ ಗೌಡ ಮುಗುಪ್ಪು, ಎಂ.ಜಿ.ಎಂ. ಶಾಲಾ ಸಂಚಾಲಕ ದೊಡ್ಡಣ್ಣ ಬರೆಮೇಲು, ಸುರೇಶ್ ಅಮೈ, ಚಿದಾನಂದ ಕಾಡುಪಂಜ, ಪುರುಷೋತ್ತಮ ಬೊಡ್ಡನಕೊಚ್ಚಿ,ಎ.ವಿ. ತೀರ್ಥರಾಮ, ಉಮೇಶ್ ಕೆ.ಎಂ.ಬಿ., ರಮಾನಂದ ಬಾಳೆಕಜೆ, ಶ್ರೀಮತಿ ವಿನುತಾ ಹರೀಶ್ಚಂದ್ರ ಪಾತಿಕಲ್ಲು, ವೀರಪ್ಪ ಗೌಡ ಕಣ್ಕಲ್, ತೀರ್ಥರಾಮ ಅಡ್ಕಬಳೆ, ಜಯರಾಮ ಪಿಂಡಿಬನ, ಗಿರೀಶ್ ಡಿ.ಎಸ್., ಇದ್ದರು.

ರಾಜ್ಯ