ಪುತ್ತೂರು : ಕಣಿಲೆ ತರಲೆಂದು ಕಾಡಿಗೆ ಹೋದವ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆ.

ಪುತ್ತೂರು : ಕಣಿಲೆ ತರಲೆಂದು ಕಾಡಿಗೆ ಹೋದವ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆ.

ಪುತ್ತೂರು : ಕಣಿಲೆ ತರಲೆಂದು ಕಾಡಿಗೆ ಹೋದ ವ್ಯಕ್ತಿ ಶವವಾಗಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ. ವ್ಯಕ್ತಿಯನ್ನು ಪುತ್ತೂರು ಹೊರವಲಯದ ನಿವಾಸಿ ದೇವಪ್ಪ ( ಅಂದಾಜು ವಯಸ್ಸು 6೦) ಎಂದು ಗುರುತಿಸಲಾಗಿದೆ.
ಪುತ್ತೂರು ಕಸ್ಬಾದ ಪಾಂಗಳಾಯಿ ಪರಿಸರದಲ್ಲಿ ಬಿದಿರಿನ ಮೆಳೆಯಲ್ಲಿ ಈ ಮೃತ ದೇಹ ಸಿಲುಕಿ ಹಾಕಿಕೊಂಡಿತ್ತು. ಆ ಪರಿಸರದಲ್ಲಿ ತೋಡಿಗೆ ಮೀನು ಹಿಡಿಯಲು ಹೋದ ಸ್ಥಳೀಯ ಯುವಕರಿಗೆ ದುರ್ನಾತ ಬಂದಿದೆ. ಹೀಗಾಗಿ ಅದರ ಜಾಡು ಹಿಡಿದು ಹೋದ ಯುವಕರಿಗೆ ಮೃತ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕೊಳೆತ ಅಪರಿಚಿತ ದೇಹ ಪತ್ತೆಯಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬುತ್ತಿದ್ದಂತೆ ಕೆಲವರು ಪೊಲೀಸ್‌ ಠಾಣೆ ಸಂಪರ್ಕಿಸಿ ಮೃತ ದೇಹ ಗುರುತು ತಿಳಿಸಿದ್ದಾರೆ. ಪುತ್ತೂರು ಹೊರ ವಲಯದ ದೇವಪ್ಪ ಎಂಬವರ ಮೃತದೇಹ ಎಂದು ತಿಳಿಸಿದ್ದಾರೆ. ದೇವಪ್ಪ ಅವರ ಕುಟುಂಬ ಸದಸ್ಯರು ಮೃತದೇಃದ ಬಟ್ಟೆಯ ಆಧಾರದಲ್ಲಿ ಅದನ್ನು ಖಚಿತ ಪಡಿಸಿದ್ದಾರೆ ಎನ್ನಲಾಗಿದೆ.

ದೇವಪ್ಪ ಅವರು ಹೊಳೆ ಬದಿ ಏಡಿ, ಮೀನು ಹಿಡಿಯುವ ಜತೆಗೆ ಬಿದಿರಿನ ಮೆಳೆಯಿಂದ ಎಳೆ ಬಿದಿರು (ಕಣಿಲೆ) ತೆಗೆದು ಅಂಗಡಿಗಳಿಗೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಈತ ನಿಯಮಿತವಾಗಿ ಮನೆಗೆ ಹೋಗುತ್ತಿರಲಿಲ್ಲ ಎಂದು ತಿಳಿದು ಬಂದಿದ್ದು ಕಳೆದ ಹತ್ತು ದಿನಗಳಿಂದ ಮನೆಗೆ ಆಗಮಿಸಿರಲಿಲ್ಲ ಎನ್ನಲಾಗಿದೆ.

ರಾಜ್ಯ