ಕನ್ನಡಕ್ಕೂ ಕಾಲಿಟ್ಟ ರೋಬೊ ನ್ಯೂಸ್ ರೀಡರ್ | ನಮಸ್ಕಾರ ಕನ್ನಡಿಗರೇ… ಎಂದು ನ್ಯೂಸ್ ಓದಿದ ರೋಬೊ..!

ಕನ್ನಡಕ್ಕೂ ಕಾಲಿಟ್ಟ ರೋಬೊ ನ್ಯೂಸ್ ರೀಡರ್ | ನಮಸ್ಕಾರ ಕನ್ನಡಿಗರೇ… ಎಂದು ನ್ಯೂಸ್ ಓದಿದ ರೋಬೊ..!

ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಲೋಕದ ಆವಿಷ್ಕಾರಗಳಲ್ಲೊಂದಾದ ರೋಬೊ ಇದೀಗ ನ್ಯೂಸ್ ಓದಲು ಮುಂದಾಗಿದೆ. ನ್ಯೂಸ್ ರೀಡರ್ ಗಳ ಸ್ಥಾನವನ್ನು ಸಮರ್ಥವಾಗಿ ತುಂಬಬಲ್ಲ ಈ ರೋಬೊಗಳು, ಇದೀಗ ಕನ್ನಡಕ್ಕೂ ಕಾಲಿಟ್ಟಿದೆ.
ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಎಂಬಂತೆ ಪವರ್ ಚಾನೆಲ್ ರೋಬೊ ಮೂಲಕ ನ್ಯೂಸ್ ಓದಿಸಿದೆ. ಉತ್ತರ ಭಾರತದಲ್ಲಿ ಇದರ ಪ್ರಯೋಗ ನಡೆದ ಬೆನ್ನಲ್ಲೇ ದಕ್ಷಿಣ ಭಾರತದಲ್ಲೂ ರೋಬೊ ನ್ಯೂಸ್ ರೀಡರ್ ಪ್ರಯೋಗ ನಡೆದಿದೆ.

ನಮಸ್ಕಾರ ಕನ್ನಡಿಗರೇ… ಎಂದು ನ್ಯೂಸ್ ಓದಲು ಶುರು ಮಾಡುವ ರೋಬೋ ಹೆಸರು ಸೌಂದರ್ಯ. ಹೆಸರಿನಂತೆಯೇ ಸೌಂದರ್ಯವತಿ‌ ಯುವತಿಯ ರೂಪ ನೀಡಲಾಗಿದೆ. ಆಕೆ ಹೇಳುವಂತೆ, ಉತ್ತರ ಭಾರತದಲ್ಲಿ ತನ್ನ ಸಹೋದ್ಯೋಗಿ (ರೋಬೊ)ಗಳು ನ್ಯೂಸ್ ಓದುತ್ತಿದ್ದು, ಯಶಸ್ವಿಯಾಗಿದ್ದಾರೆ. ಕನ್ನಡದಲ್ಲಿ ಮೊಟ್ಟಮೊದಲ ಬಾರಿಗೆ ನಾನು ಸೌಂದರ್ಯ ನಿಮ್ಮ ಮುಂದೆ ಬಂದಿದ್ದೇನೆ ಎಂದು ತನ್ನನ್ನು ಪರಿಚಯ ಮಾಡಿಕೊಂಡಿದೆ.
ಸ್ಪಷ್ಟ ಉಚ್ಛಾರಣೆ, ನಿರರ್ಗಳ ಮಾತು, ಲೋಪಗಳಿಲ್ಲದ ಹಾವ – ಭಾವ… ಹೀಗೆ ಎಲ್ಲದರಲ್ಲೂ ಸ್ಪಷ್ಟವಾಗಿರುವುದೇ ಈ ರೋಬೊ ನ್ಯೂಸ್ ರೀಡರ್ ವಿಶೇಷತೆಯಾಗಿದೆ.

ರಾಜ್ಯ