ಈ ಬಾರಿಯ ಬಜೆಟ್ ಸರ್ವರನ್ನು ಸೇರಬಲ್ಲ ಹಾಗೂ ಕೃಷಿಕರ ಬಗ್ಗೆ ಕಾಳಜಿಯನ್ನು ಹೊಂದಿದೆ: ಪಿ ಸಿ ಜಯರಾಮ

ಈ ಬಾರಿಯ ಬಜೆಟ್ ಸರ್ವರನ್ನು ಸೇರಬಲ್ಲ ಹಾಗೂ ಕೃಷಿಕರ ಬಗ್ಗೆ ಕಾಳಜಿಯನ್ನು ಹೊಂದಿದೆ: ಪಿ ಸಿ ಜಯರಾಮ

13 ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಸಿದ್ದರಾಮಯ್ಯ ದಾಖಲೆ ಮೆರೆದಿದ್ದಾರೆ,ಸರ್ವರನ್ನು ಸೇರಬಲ್ಲ ಹಾಗೂ ಕೃಷಿಕರ ಬಗ್ಗೆ ಹೆಚ್ಚು ಕಾಳಜಿ ಹೊಂದಿದ ಬಜೆಟ್ ಆಗಿದ್ದು, ಚುನಾವಣಾ ಸಂದರ್ಭ ಜನರಿಗೆ ನೀಡಿದ ಭರವಸೆಯನ್ನು ಪೂರೈಸಲು ಕಾಂಗ್ರೇಸ್ ಈ ಬಾರೀ ಬಜೆಟ್ ನಲ್ಲಿ 52 000 ಸಾವಿರ ಕೋಟಿಗಳನ್ನು ಮೀಸಲಿಟ್ಟಿದ್ದು, ಗ್ಯಾರಂಟಿ ಯೋಜನೆಗಳು ಪ್ರತಿ ಮನೆಗೆ ತಲುಪುವಂತೆ ಮಾಡಲು ಸಿದ್ದವಾಗಿದೆ,ಅಲ್ಲದೆ ಮಹಿಳಾ ಸಭಲೀಕರಣಕ್ಕೆ ಸರಕಾರ ಒತ್ತು ನೀಡಿದೆ ಎಂದು ಸುಳ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಪಿ ಸಿ ಜಯರಾಮ ಹೇಳಿದ್ದಾರೆ ,ಅವರು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ, ಶಿಕ್ಷಣ ಕುಡಿಯುವ ನೀರು ಯೋಜನೆಗಳಿಗೆ ಸಾಕಷ್ಟು ಅನುದಾನಗಳನ್ನು ಮೀಸಲಿಟ್ಟಿದ್ದು, ಕೃಷಿಕರ ಅನುಕೂಲಕ್ಕಾಗಿ ಕೃಷಿ ಸಾಲ ಹೆಚ್ಚಿಸಿರುವುದಲ್ಲದೆ, ಧಾನ್ಯ ಸಂಗ್ರಹಣಾ ಗೋದಾಮು ನಿರ್ಮಿಸಲು 20 ಲಕ್ಷದ ವರೆಗೆ ಸಾಲ ನೀಡುವ ಹೊಸ ಯೋಜನೆ ಜಾರಿಗೆ ತಂದಿದೆ ಎಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೇಸ್ ಉಪಾಧ್ಯಕ್ಷ ಸದಾನಂದ ಮಾವಜಿ, ಪ್ರಧಾನ ಕಾರ್ಯದರ್ಶಿ ಪಿ.ಎಸ್.ಗಂಗಾಧರ, ಮುಖಂಡರಾದ ಸುರೇಶ್ ಎಮ್ ಹೆಚ್, ಎಂ.ಎಚ್, ಚಂದ್ರಲಿಂಗಂ, ನಂದರಾಜ ಸಂಕೇಶ್, ಜ್ಞಾನಶೀಲನ್ ರಾಜು ಮೊದಲಾದವರಿದ್ದರು.

ರಾಜ್ಯ