
ಸುಳ್ಯಭಾಗದಲ್ಲಿ ಕಳ್ಳತನ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು,ಒಂದೇ ದಿನ ಮೂರು ಕಳ್ಳತನ ಪ್ರಕರಣ ನಡೆದಿದೆ,
ಸುಳ್ಯದ ಅರಂಬೂರು ನಿವಾಸಿ ಎಸ್ ಸಂಶುದ್ದೀನ್ ಮನೆಯಲ್ಲಿ ರಾತ್ರಿ ಮನೆಗೆ ನುಗ್ಗಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ, ಮನೆಯಲ್ಲಿ ಯಾರು ಇಲ್ಲದಿದ್ದ ಸಂದರ್ಭ 20 ಪವನ್ ಬಂಗಾರ ಕಳುವಾಗಿದೆ,ಕವಾಟು ಒಡೆದು ಒಡವೆಗಳ ಹೊತ್ತೊಯ್ದ ಬಗ್ಗೆ ಸುಳ್ಯ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ,


ಮತ್ತೋಂದು ಪ್ರಕರಣದಲ್ಲಿ
ಮದುವೆಯ ಕಾರ್ಯಕ್ರಮ ಒಂದರಲ್ಲಿ ಮಗು ಧರಿಸಿದ್ದ ಚಿನ್ನದ ಸರವನ್ನು ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಮಗುವಿನ ತಂದೆ ಐವರ್ನಾಡು ಗ್ರಾಮದ ಮಡ್ತಿಲ ನಿವಾಸಿ ಶಿವಪ್ರಸಾದ್ ಎಂ.ಆರ್. ದೂರು ನೀಡಿದ್ದು, ಎ.30 ರಂದು ಸಂಬಂಧಿಕರ ಮದುವೆ ಕಾರ್ಯಕ್ರಮ ಸುಳ್ಯ ಕಾಯರ್ತೋಡಿ ದೇವಸ್ಥಾನ ಸಭಾಭವನದಲ್ಲಿ ನಡೆದಿದ್ದು, ಈ ಸಂದರ್ಭ ಕಳ್ಳತನ ನಡೆದಿದೆ ಎಂದು ತಿಳಿಸಿದ್ದಾರೆ.
ಸುಳ್ಯದಲ್ಲಿ ನಡೆದಿದ್ದ ಮದುವೆ ಸಮಾರಂಭಕ್ಕೆ ಪತ್ನಿ ಮತ್ತು 5 ವರ್ಷದ ಮಗು ಪೂರ್ವಿಕ್ ತೆರೆಳಿದ್ದೆವು ಮದುವೆ ಹಾಲ್ ನಲ್ಲಿ ಮಗ ನೀರು ಕುಡಿಯಲೆಂದು ಹೋದಾಗ ಲೋಟ ಮೇಲೆ ಇದ್ದ ಕಾರಣ ಆತನಿಗೆ ಸಿಗಲಿಲ್ಲ, ಅಲ್ಲಿದ್ದ ವ್ಯಕ್ತಿಯೊಬ್ಬರು ನಾನು ನೀರು ಕೊಡಿಸುತ್ತೇನೆ ಎಂದು ಅಲ್ಲಿಂದ ಹೊರಗೆ ಶೌಚಾಲಯಕ್ಕೆ ಕರೆದುಕೊಂಡು ಹೋಗಿ ಮಗುವಿನ ಕುತ್ತಿಗೆಯಲ್ಲಿದ 2 ಪವನ್ ತೂಕದ ಚಿನ್ನದ ಸರವನ್ನು ಹಾಗೂ ಅದಕ್ಕೆ ಅಳವಡಿಸಿದ್ದ ಪದಕ ಕಿತ್ತುಕೊಂಡು ಹೋಗಿದ್ದಾನೆ. ಈ ಘಟನೆ ಗೆ ಹೆದರಿ ಮಗು ಓಡಿ ಬಂದು ವಿಷಯ ತಿಳಿಸಿದ್ದಾನೆ.
ಇನ್ನು ಆರೋಪಿಗಾಗಿ ಹುಡುಕಾಡಿದರೂ ಆತ ಪತ್ತೆ ಯಾಗಲಿಲ್ಲ. ಮಗುವಿನ ಕುತ್ತಿಗೆಯಿಂದ ಸರವನ್ನು ಎಳೆಯುವ ಸಂದರ್ಭ ಮಗುವಿಗೆ ಸಣ್ಣ ಗಾಯಗಳಾಗಿವೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ..
ಮತ್ತೊಂದು ಪ್ರಕರಣದಲ್ಲಿ ಸುಳ್ಯದ ಚಿನ್ನಾಭರಣ ಅಡವಿಟ್ಟ ಚಿನ್ನಾಭರಣಗಳ ಬಿಡಿಸಿಕೊಡುವ ಉದ್ಯಮ ನಡೆಸುತ್ತಿರುವ ಉದ್ಯಮಿಯಿಂದ ಹಣ ಪಡೆದ ಅಪರಿಚಿತ ವ್ಯಕ್ತಿ ಉದ್ಯಮಿಯನ್ನು ಚಿನ್ನಬಿಡಿಸುವಲ್ಲಿಗೆ ಕರೆದೊಯ್ದು ಈಗ ಬರುತ್ತೇನೆ ಎಂದ ವ್ಯಕ್ತಿ ಉದ್ಯಮಿಯಿಂದ 40000 ಹಣ ಪಡೆದು ಮತ್ತೊಂದು ದಾರಿಯಲ್ಲಾಗಿ ಪರಾರಿಯಾಗಿ ವಂಚಿಸಿರುವುದು ತಿಳಿದು ಬಂದಿದೆ.
ಒಟ್ಟಿನಲ್ಲಿ ತಾಲೋಕಿನಲ್ಲಿ ದಿನೇ ದಿನೇ ವಂಚನಾ ಪ್ರಕರಣ ಹೆಚ್ಚುತ್ತಿದ್ದು ಸಾರ್ವಜನಿಕರೂ ಎಚ್ಚರದಿಂದ ಇರಬೇಕಾಗಿದೆ .