
ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಗಾಲಿ ಜನಾರ್ಧನ ರೆಡ್ಡಿ ಇವರ ಕಲ್ಯಾಣರಾಜ್ಯ ಪ್ರಗತಿ ಪಕ್ಷದ ಉಮೇದ್ವಾರನಾಗಿ ಸುಂದರ ಮೇರ ಸ್ಪರ್ಧೆ ನಡೆಸಲಿದ್ದೇನೆ ಮೂಲತಃ ಉಡುಪಿ ಜಿಲ್ಲೆಯ ಕಾಪು ತಾಲೂಕು ಎಲ್ಲೂರು ಗ್ರಾಮದ ನಿವಾಸಿಯಾದ ನಾನು ಬಾಲ್ಯದಲ್ಲಿ ಅನುಭವಿಸಿದ ಅವಮಾನಗಳು, ಆಸ್ಪೃಶ್ಯತೆ, ಅಸಮಾನತೆಗಳು ಒಂದೆಡೆಯಾದರೆ ಇನ್ನೊಂದೆಡೆ ಬಾಲ್ಯದ ಆ ಕಷ್ಟದ ದಿನಗಳು ನನಗೆ ಕಲಿಸಿದ ಜೀವನದ ಪಾಠ, ನನ್ನ ತಂದೆ, ತಾಯಿ, ಹಿರಿಯರ ಆದರ್ಶಯುತ ಬದುಕಿನ ಮೌಲ್ಯಗಳು ನನ್ನನ್ನು ಬಡಿದೆಬ್ಬಿಸಿ ಜೀವನದಲ್ಲಿ ಏನಾದರೂ ಸಾಧಿಸಬೇಕೆನ್ನುವ ಕಿಚ್ಚನ್ನು ಹಚ್ಚಿ ಹೋರಾಟಕ್ಕೆ ಧುಮುಕುವಂತೆ ಮಾಡಿದೆ ಎಂದು ಅವರು ಹೇಳಿದ್ದಾರೆ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ.ಅವರು
ನನ್ನ ಕಠಿಣ ಪರಿಶ್ರಮದ ಮೂಲಕ ಪದವಿ, ಕಾನೂನು ಶಿಕ್ಷಣ,ಪಡೆದು 1990ರಲ್ಲಿ ಭಾರತೀಯ ಜೀವ ವಿಮಾ ನಿಗಮ (LIC) ದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಸೇರ್ಪಡೆಗೊಂಡು ಕಳೆದ 30 ವರ್ಷಗಳಿಂದ
ಸೇವೆಯನ್ನು ಸಲ್ಲಿಸಿ 4 ವರ್ಷಗಳಿಂದ ಉಪ ಶಾಖಾಧಿಕಾರಿಯಾಗಿ ನಿವೃತ್ತಿ ಹೊಂದಿರುತ್ತೇನೆ.



ಸರಕಾರಿ ಸೇವೆಯ ಜೊತೆ ಜೊತೆಗೆ ಅಶಕ್ತರಿಗೆ ವೃದ್ಧಾಪ್ಯ
ವೇತನ, ಅಂಗವಿಕಲ ವೇತನ, ಸ್ಕಾಲರ್‌ಶಿಫ್, ವಿಧವಾ ವೇತನ, ಹೀಗೆ ಜನ ಸೇವೆಯ ಮೂಲಕ ನಾನು ಗುರುತಿಸಿಕೊಂಡು ಬಂದಿರುತ್ತೇನೆ. ಸಮಾಜದಲ್ಲಿ
ನಡೆಯುವ ಜನಪರ, ಜೀವಪರ ಚಳವಳಿಯಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡು ಬಂದಿರುತ್ತೇನೆ. ಯುವಜನರಲ್ಲಿರುವ ಸುಪ್ತ ಪ್ರತಿಭೆಗಳನ್ನು
ಗುರುತಿಸಿ ಕಲೆ, ಕ್ರೀಡೆ, ಸಾಹಿತ್ಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಮಿಂಚುವ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುತ್ತೇನೆ. ಮಾತ್ರವಲ್ಲದೆ ಲಯನ್ಸ್ ಕ್ಲಬ್‌ನಲ್ಲಿ ತೊಡಗಿಸಿ ಅನೇಕ ಸಾಮಾಜಿಕ ಚಟುವಟಿಕೆಗಳನ್ನು
ಸಂಘಟಿಸಿರುವ ಹಿರಿಮೆ ನನಗಿದೆ.ಆದುದರಿಂದ ಬಂಧುಗಳೇ ಶೋಷಿತ ಸಮುದಾಯದಿಂದ ಒಂದು ಬದುಕಿನಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿ
ಜೀವನದಲ್ಲಿ ಏನಾದರೂ ಸಾಧಿಸಿ ಸಾರ್ಥಕ ಬದುಕನ್ನು ರೂಪಿಸಬೇಕೆನ್ನುವ ಛಲವನ್ನು ಇಟ್ಟುಕೊಂಡು ಬಂದಿರುವ ನನ್ನ ಸಾಧನೆಯೇ ನನ್ನ ಹಿರಿಮೆ. ಈ ಹಿನ್ನಲೆಯಲ್ಲಿ ವಿದ್ಯಾವಂತ, ಪದವೀಧರ, ಹೋರಾಟಗಾರ, ಹಾಗೂ ಸಾಮಾಜಿಕ ನ್ಯಾಯದ ಬಗ್ಗೆ ಅನನ್ಯ ಅನುಭವ ಹೊಂದಿರುವ ನನ್ನನ್ನು ಗುರುತಿಸಿ ಈ ಬಾರಿ ಸಮಸ್ತ ಜನ ಸಮುದಾಯದ ಸೇವೆಯನ್ನು ಮಾಡುವ ಮೂಲಕ ಸುಳ್ಯ ಕ್ಷೇತ್ರದಲ್ಲಿ ನೆನೆಗುದಿಗೆ ಬಿದ್ದಿರುವ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಅವಕಾಶವನ್ನು ನೀಡುವಂತೆ ಕೇಳಿಕೊಂಡಿದ್ದಾರೆ. ಸುಳ್ಯ ತಾಲೂಕಿನ ನಗರ ಭಾಗದ ಕೇರ್ಪಳದಲ್ಲಿ ವಾಸವಾಗಿದ್ದು ಸುಳ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕಲ್ಪನೆಯೊಂದಿಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸುತ್ತಿರುವ ಸುಂದರ ಮೇರ ಆಗಿರುವ “ಫುಟ್‌ಬಾಲ್” ಗುರುತಿನ ಚಿಹ್ನೆಗೆ ತಮ್ಮ ಅತ್ಯಮೂಲ್ಯ ಮತವನ್ನು ನೀಡಿ ಅತ್ಯಧಿಕ ಮತಗಳಿಂದ ಚುನಾಯಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಸುಳ್ಯ ತಾಲೂಕು ಸರ್ಕಾರಿ ಆಸ್ಪತ್ರೆಯನ್ನು ಆಧುನೀಕರಣಗೊಳಿಸಿ ಮೇಲ್ದರ್ಜೆಗೆ ಏರಿಸುವುದು.
ಹಳ್ಳಿ ಹಳ್ಳಿಗಳ ರಸ್ತೆ/ಕಾಲು ಸಂಕಗಳ ಅಭಿವೃದ್ಧಿಗೊಳಿಸುವುದು. ಜನರನ್ನು ಕಾಡುತ್ತಿರುವ ನೀರಿನ ಸಮಸ್ಯೆ/ಮೂಲಭೂತ ಸೌಕರ್ಯವನ್ನು ಒದಗಿಸುವುದು.ವಸತಿ ಯೋಜನೆಯ ಮೂಲಕ ಅರ್ಹ ಫಲಾನುಭವಿಗಳಿಗೆ ನಿವೇಶನವನ್ನು ಒದಗಿಸುವುದು.
ಅಡಿಕೆ ಬೆಳೆಗಾರರ ಹಳದಿ ರೋಗ ಮತ್ತು ಎಲೆಚುಕ್ಕಿ ರೋಗಕ್ಕೆ ಪರಿಹಾರ ಒದಗಿಸುವುದು. ಪ್ರಾಥಮಿಕ, ಪ್ರೌಢ, ಕಾಲೇಜು ಮತ್ತು ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ.

ಪ್ರವಾಸೋದ್ಯಮ ಪ್ರದೇಶವನ್ನು ಅಭಿವೃದ್ಧಿಪಡಿಸುವುದು.
ತುಳುನಾಡಿನ ಕಲೆ, ಸಂಸ್ಕೃತಿ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು.ಬಡವರ ವೈದ್ಯಕೀಯ ಆರೈಕೆಗಾಗಿ ಹೆಚ್ಚಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಲು ಪ್ರಯತ್ನಿಸುವುದು.
ಆಟೋ ಚಾಲಕರಿಗೆ ಪ್ರತೀ ಗ್ರಾಮದಲ್ಲಿ ರಿಕ್ಷಾ ನಿಲ್ದಾಣದ ವ್ಯವಸ್ಥೆ ಕಲ್ಪಿಸುವುದು, ಪಿಂಚಣಿ ವ್ಯವಸ್ಥೆ ಕೈಗಾರಿಕೋದ್ಯಮವನ್ನು ಸ್ಥಾಪಿಸಿ ಸ್ಥಳೀಯರಿಗೆ ಉದ್ಯೋಗ ಅವಕಾಶವನ್ನು ಕಲ್ಪಿಸುವುದು. ಸುಳ್ಯ ನಗರ ಅಭಿವೃದ್ಧಿ ಮತ್ತು ಬೈಪಾಸ್ ನಿರ್ಮಾಣ ಮಾಡುವುದು.
ಕಟ್ಟಡ ಕಾರ್ಮಿಕರು ಮತ್ತು ಚಾಲಕರಿಗೆ ಆರೋಗ್ಯ ವಿಮೆಯನ್ನು ಕಲ್ಪಿಸುವುದು.ಅಂಗವಿಕಲರು ಮತ್ತು ವಿಧವೆಯರಿಗೆ ಸ್ವ ಉದ್ಯೋಗ ಮಾಡಲು ಉತ್ತೇಜನ ನೀಡುವುದು.ಅರಣ್ಯ ಒತ್ತುವರಿಯಲ್ಲಿ ವಾಸಿಸುವ ಜನರಿಗೆ ಪ್ರದೇಶವನ್ನು ಸಕ್ರಮ ಮಾಡಿಸುವ ಬಗ್ಗೆ ಪ್ರಯತ್ನಿಸುವುದು.
ದೇವಸ್ಥಾನ/ದೈವಸ್ಥಾನದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ನೀಡುವುದು.ಸುಳ್ಯದಲ್ಲಿರುವ ಕ್ರೀಡಾಂಗಣವನ್ನು ಅಭಿವೃದ್ಧಿ ಪಡಿಸಿ ಸಾರ್ವಜನಿಕ ಉಪಯೋಗಕ್ಕೆ ಅವಕಾಶ ಕಲ್ಪಿಸುವುದು.ಸರಕಾರಿ ITI POLYTECHNIC / NURSING ಕಾಲೇಜುಗಳನ್ನು ತೆರೆಯುವುದು.ನೆಟ್ ವರ್ಕ್ ಸಮಸ್ಯೆ ಸಮಸ್ಯೆಯನ್ನು ಬಗೆಹರಿಸುವುದು. 110 ಕೆ.ವಿ ವಿದ್ಯುತ್ ಕಾಮಗಾರಿ ಶೀಘ್ರ ಪೂರ್ಣಗೊಳಿಸುವುದು.
ಹೈನುಗಾರಿಕೆ/ ಕೋಳಿ ಸಾಕಣೆ/ ಹಾಗೂ ಇತ್ಯಾದಿ ಕ್ಷೇತ್ರಗಳ ಅಭಿವೃದ್ಧಿ,ಪರಿಸರ ಸ್ನೇಹಿ ಚಟುವಟಿಕೆಗಳಿಗೆ ಉತ್ತೇಜನ ಒದಗಿಸುವುದು ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಅಶೋಕ್ ಕುಂಚಾಡಿ, ಸೀತಾರಾಮ ಕುಂಚಾಡಿ, ಕರುಣಾಕರ ಪಲ್ಲತಡ್ಕ, ಸುಂದರ ನಿಡ್ಪಳ್ಳಿ, ಜಯಪ್ರಕಾಶ್ ಕನ್ಯಾಡಿ, ವಸಂತ ಮೊದಲಾದವರಿದ್ದರು.