ರಾಜ್ಯ ವಿಧಾನಸಭಾ ಚುನಾವಣೆ ಮೊದಲ ಹಂತದ ಮತದಾನ ಪ್ರಕ್ರೀಯೆ ಆರಂಭ : ಮೊದಲ ದಿನ ಸುಳ್ಯ ತಾಲೂಕಿನಲ್ಲಿ 184 ಮಂದಿ ಮತ ಚಲಾವಣೆ.

ರಾಜ್ಯ ವಿಧಾನಸಭಾ ಚುನಾವಣೆ ಮೊದಲ ಹಂತದ ಮತದಾನ ಪ್ರಕ್ರೀಯೆ ಆರಂಭ : ಮೊದಲ ದಿನ ಸುಳ್ಯ ತಾಲೂಕಿನಲ್ಲಿ 184 ಮಂದಿ ಮತ ಚಲಾವಣೆ.

ರಾಜ್ಯ ವಿಧಾನ ಸಭಾ ಚುನಾವಣೆ ಮೊದಲ ಹಂತದ ಮತದಾನ ಪ್ರಕ್ರೀಯೆ ಆರಂಭಗೊಂಡಿದ್ದು ಇಂದು ಸುಳ್ಯ ತಾಲೋಕಿನಲ್ಲಿ 184 ಅಂಚೆ ಮತದಾನವಾಗಿದೆ ಎಂದು ಅಧಿಕಾರಿಗಳು ದೃಡ ಪಡಿಸಿದ್ದಾರೆ.
ರಾಜ್ಯದಲ್ಲಿ ಪ್ರಥಮವಾಗಿ ಈ ಭಾರಿ ಚುನವಣಾ ಆಯೋಗ ಹಿರಿಯ ನಾಗರೀಕರಿಗೆ ಮತ್ತು ವಿಕಲಚೇತನರಿಗೆ ಮನೆಯಿಂದಲೇ ಕುಳಿತು ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಿತ್ತು, ಇದರಿಂದ ಸಾವಿರಾರು ಮಂದಿ ಹಿರಿಯ ನಾಗರೀಕರು ಮತ್ತು ವಿಕಲಚೇತನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಕೂಲವಾಗಿದೆ. ಈ ಹಿಂದೆ ಹಲವು ಮಂದಿ ಮತದಾನ ದಿಂದ ವಂಚಿತರಾಗುತ್ತಿದ್ದರು, ಇದೀಗ ಹಲವಾರು ಮಂದಿಗೆ ಅವಕಾಶ ಲಭಿಸಿದೆ.


ಇಂದು ಸುಳ್ಯ ತಾಲೋಕಿನಲ್ಲಿ 184 ಮತ ಚಲಾವಣೆ ಯಾಗಿದ್ದು ಇದರಲ್ಲಿ 34 ವಿಕಲ ಚೇತನರು ಹೆಣ್ಣು 17,ಗಂಡು17, ಮತ ಚಲಾಯಿಸಿದ್ದಾರೆ 150 ಹಿರಿಯ ನಾಗರೀಕರು ಮತ ಚಲಾಯಿಸಿದ್ದು . 47 ಪುರುಷ ಮತದಾರರು, 103 ಮಹಿಳಾ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಚುನಾವಣಾಧಿಕಾರಿ ಅರುಣ್ ಕುಮಾರ್, ಮಂಜುನಾಥ್ , ವೀಣಾ ಮತ್ತು ಇತರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದ್ದಾರೆ.

ರಾಜ್ಯ