ಇಂದು ದ್ವಿತೀಯ ಪಿಯುಸಿ ಪಲಿತಾಂಶ :ಪಲಿತಾಂಶವನ್ನು ಹೀಗೂ ನೊಡಬಹುದು.

ಇಂದು ದ್ವಿತೀಯ ಪಿಯುಸಿ ಪಲಿತಾಂಶ :
ಪಲಿತಾಂಶವನ್ನು ಹೀಗೂ ನೊಡಬಹುದು.

ದ್ವಿತೀಯ ಪಿಯುಸಿ ಪರೀಕ್ಷೆ ಮೌಲ್ಯಮಾಪನ
ಅಂತ್ಯವಾಗಿದ್ದು, ಇಂದು(21-ಏಪ್ರಿಲ್-2023)
ಫಲಿತಾಂಶ ಪ್ರಕಟವಾಗಲಿದೆ ಎಂದು ಶಾಲಾ
ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಪತ್ರಿಕಾ
ಪ್ರಕಟಣೆ ಹೊರಡಿಸಿದೆ.ಮಾರ್ಚ್ 2023ರ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ದಿನಾಂಕ: 09-03-2023 ರಿಂದ 29-03-2023ರವರೆಗೆ ನಡೆಸಲಾಯಿತು. ಎಲ್ಲಾ ವಿಷಯಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ
ಕಾರ್ಯವು ಮುಕ್ತಾಯವಾಗಿದ್ದು, ದ್ವಿತೀಯ
ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಇಂದು
ಬೆಳ್ಳಗೆ 11-00 ಗಂಟೆಯ ನಂತರ ಜಾಲತಾಣದಲ್ಲಿ
ಲಭ್ಯವಾಗಲಿದೆ.2022-23ನೇ ಶೈಕ್ಷಣಿಕ ಸಾಲಿನಲ್ಲಿ
7,27,387ವಿದ್ಯಾರ್ಥಿಗಳು ಪರೀಕ್ಷೆಗೆ ಹೆಸರು
ನೋಂದಣಿ ಮಾಡಿಕೊಂಡಿದ್ದರು. ರಾಜ್ಯದ 1,109
ಕೇಂದ್ರಗಳಲ್ಲಿ ಮಾರ್ಚ್ 9ರಿಂದ 29ರವರೆಗೆ
ಪರೀಕ್ಷೆಗಳನ್ನು ನಡೆಸಲಾಗಿತ್ತು.
ಫಲಿತಾಂಶ ಘೋಷಣೆ ಹಿನ್ನೆಲೆ ಇಂದು ಬೆಳಿಗ್ಗೆ 10-
00 ಗಂಟೆಗೆ ಸುದ್ದಿಗೋಷ್ಠಿ ನಡೆಸಲಾಗುತ್ತದೆ,
ಬೆಳ್ಳಗೆ 11-00 ಗಂಟೆ ನಂತರ
https://karresults.nic.in ಈ ವೆಬ್ ಸೈಟ್
ನಲ್ಲಿ ಫಲಿತಾಂಶವನ್ನು ವಿದ್ಯಾರ್ಥಿಗಳು
ವೀಕ್ಷಿಸಬಹುದು.

ರಾಜ್ಯ