
ಪುತ್ತೂರು: ಪುತ್ತೂರು ಕ್ಷೇತ್ರದ ಕಾಂಗ್ರೆಸ್ ಪಕ್ಷದ
ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಅಶೋಕ್
ಕುಮಾರ್ ರೈ ಕೋಡಿಂಬಾಡಿಯವರ ಚುನಾವಣಾ
ಕಚೇರಿ ಎ.17ರಂದು ಉದ್ಘಾಟನೆಗೊಂಡಿತ್ತು.ದರ್ಬೆಯ ಆರ್‌ಇಬಿ ಎಂಕೇವ್ ಕಟ್ಟಡದಲ್ಲಿ ರುವ
ಈ ಕಛೇರಿಯಲ್ಲಿ ಅರ್ಚಕ ಹರಿಪ್ರಸಾದ್
ಬನಾರಿಯವರ ನೇತೃತ್ವದಲ್ಲಿ ಗಣಪತಿ ಹವನ,
ಪೂಜಾ ವಿಧಿವಿಧಾನಗಳು ನೆರವೇರಿತು. ಬಳಿಕ
ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಬ್ಲಾಕ್
ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ವಿಟ್ಲ-
ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಡಾ.ರಾಜಾರಾಮ ಕೆ.ಬಿ, ಹಿರಿಯರಾದ
ವಲೇರಿಯನ್ ಡಯಾಸ್ ಮೊದಲಾದವರು ದೀಪ
ಬೆಳಗಿಸಿ ಕಛೇರಿಯನ್ನು ಉದ್ಘಾಟಿಸಿದರು.ಬಳಿಕ ಮಾತನಾಡಿದ ಮಾಜಿ ಶಾಸಕಿ ಶಕುಂತಳಾ
ಟಿ.ಶೆಟ್ಟಿ ಪುತ್ತೂರು ಮಹಾಲಿಂಗೇಶ್ವರ ದೇವರ
ರಥೋತ್ಸವದ ಸಂದರ್ಭದಲ್ಲಿಯೇ ಅಶೋಕ್
ರೈಯವರ ಪಕ್ಷದ ಕಚೇರಿಯು
ಉದ್ಘಾಟನೆಗೊಳ್ಳುತ್ತಿದ್ದು ಪುತ್ತೂರಿನಲ್ಲಿ ಹಾಗೂ
ರಾಜ್ಯದಲ್ಲಿ ಪಕ್ಷದ ತೇರು ಎಳೆಯುವಂತಾಗಲಿ
ಎಂದರು.ಪುತ್ತೂರಿನಲ್ಲಿ 14 ಮಂದಿ ಆಕಾಂಕ್ಷಿಯಾಗಿದ್ದರು.

ಅವರವರ ಅಭಿಮಾನದಲ್ಲಿ ಹಲವು
ಮಂದಿಯಿದ್ದರು. ಆವರನ್ನು ವಿಶ್ವಾಸಕ್ಕೆ
ತೆಗೆದುಕೊಂಡು ಯಾರ ಮನಸ್ಸಿಗೂ
ನೋವಾಗದಂತೆ ಕೆಲಸಮಾಡಬೇಕು. ಫೋಸ್
ಕೊಡುವವರು ಯಾರೂ ಕೆಲಸ ಮಾಡುವುದಿಲ್ಲ.
ಕಾರ್ಯಕರ್ತರು ಮಾತ್ರ ಕೆಲಸ ಮಾಡುವುದು.
ನಾನು ಪಕ್ಷಕ್ಕೆ ಬರುವಾಗಲೂ ಇದೇ ಸಮಸ್ಯೆ ಇತ್ತು
ಎಂದರು.ನಿಮಗೆ ಟಿಕೆಟ್ ದೊರೆತಿರುವುದು ಸಂತೋಷ
ತಂದಿದ್ದು ಸತ್ಯ ದರ್ಶನವಾಗಿದೆ. ಯಾರನ್ನೂ
ನಂಬಬೇಡಿ. ಪ್ರಯೋಜವಿದ್ದಾಗ ಮಾತ್ರ ನಿಮ್ಮಬಳಿ
ಬರುತ್ತಾರೆ. ಕಾರ್ಯಕರ್ತರೇ ಜೀವಾಳ. ಹೀಗಾಗಿ
ಕಾರ್ಯಕರ್ತರಿಗೆ ಬೆಲೆ ಕೊಡಬೇಕು.
ಕಾರ್ಯಕರ್ತರಿಗೆ ನೋವಾಗದಂತೆ ನಡೆದರೆ ಈ
ಭಾರಿ ಜಯಗಳಿಸುವುದು ಖಂಡಿತ. ಎಂದು
ಅಶೋಕ್ ಕುಮಾರ್ ರೈಯವರಿಗೆ ಕಿವಿಮಾತು
ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ
ವಿಶ್ವನಾಥ ರೈ ಮಾತನಾಡಿ, ಪಕ್ಷದ ಕಾರ್ಯಕರ್ತರು
ಪ್ರತಿಯೊಬ್ಬರೂ ನಾನೇ ಅಭ್ಯರ್ಥಿ ಎಂಬ
ಭಾವನೆಯೊಂದಿಗೆ ಚುನಾವಣಾ ಹೋರಾಟದಲ್ಲಿ
ಭಾಗಿಗಳಾಗುವ ಮೂಲಕ ಪಕ್ಷದ ಗೆಲುವಿಗೆ ಶ್ರಮಿಸೋಣ
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ
ವಿಶ್ವನಾಥ ರೈ ಮಾತನಾಡಿ, ಪಕ್ಷದ ಕಾರ್ಯಕರ್ತರು
ಪ್ರತಿಯೊಬ್ಬರೂ ನಾನೇ ಅಭ್ಯರ್ಥಿ ಎಂಬ
ಭಾವನೆಯೊಂದಿಗೆ ಚುನಾವಣಾ ಹೋರಾಟದಲ್ಲಿ
ಭಾಗಿಗಳಾಗುವ ಮೂಲಕ ಪಕ್ಷದ ಗೆಲುವಿಗೆ
ಕಾರಣರಾಗಬೇಕು. ಪುತ್ತೂರು ಕ್ಷೇತ್ರದಲ್ಲಿ ಕಾಂಗ್ರೆಸ್
ಗೆಲ್ಲುವುದು ಮಾತ್ರವಲ್ಲದೆ ರಾಜ್ಯದಲ್ಲಿಯೂ
ಬದಲಾವಣೆಯನ್ನು ತರುವಂತಾಗಬೇಕು. ಕಾಂಗ್ರೆಸ್
ಪಕ್ಷದ ಶಾಸಕರ ಮೂಲಕ ಪುತ್ತೂರಿನಲ್ಲಿ ಬಹಳಷ್ಟು
ಅಭಿವೃದ್ಧಿ ಕಾರ್ಯಗಳಾಗಬೇಕು. ವಿಜಯದ
ಸಂಕೇತ ಕಚೇರಿಯಿಂದ ಪ್ರಾರಂಭವಾಗಿದ್ದು ಮೆ.13
ರ ಫಲಿತಾಂಶವು ಇದೇ ಕಚೇರಿಯಲ್ಲಿ
ನಡೆಯಬೇಕು ಎಂದು ಹೇಳಿದರು.

ಬಹಳಷ್ಟು ಜವಾಬ್ದಾರಿ ನನ್ನ ತಲೆ ಮೇಲಿದೆ
ರಾಜ್ಯದಲ್ಲಿರುವ ಬಿಜೆಪಿನ ಸರಕಾರ
ಭ್ರಷ್ಟಾಚಾರದಿಂದ ತುಂಬಿ ತುಳುಕಿದೆ. ಬಿಜೆಪಿಯ
ಎಲ್ಲಾ ನಾಯಕರು ಪಕ್ಷ ತೊರೆದು ಕಾಂಗ್ರೆಸ್‌ನತ್ತ
ಬರುತ್ತಿದ್ದಾರೆ. ಅಕ್ರಮ ಸಕ್ರಮದಲ್ಲಿ ಒಂದು ಎಕರೆಗೆ
3 ಲಕ್ಷ ರೂಪಾಯಿ ಹಾಗೂ 94 ಸಿಯಲ್ಲಿ 20000
ನೀಡಬೇಕಾದ ಪರಿಸ್ಥಿತಿಯಿದೆ. ಬಿಜೆಪಿ ಸರಕಾರದಲ್ಲಿ
ಈಗಿರುವಷ್ಟು ಭ್ರಷ್ಟಾಚಾರ ಈ ಹಿಂದೆ
ಯಾರಿಂದಲೂ ನಡೆದಿಲ್ಲ. ಅಕ್ರಮ-ಸಕ್ರಮದಲ್ಲಿ
ನಾನು ಸಲ್ಲಿಸಿದ ಅರ್ಜಿಗೆ 2 ಲಕ್ಷ ರೂಪಾಯಿ
ನೀಡುವಂತೆ ತಿಳಿಸಿದ್ದಾರೆ.

ನಾನು ಹಣ ಮಾಡುವ ಉದ್ದೇಶದಿಂದ
ರಾಜಕೀಯಕ್ಕೆ ಬಂದಿಲ್ಲ. ಪಕ್ಷಕ್ಕಾಗಿ ದುಡಿಯುತ್ತೇನೆ.
ಬಡವರ, ದೀನ ದಲಿತರ ಅಭಿವೃದ್ಧಿಗೆ
ಶ್ರಮಿಸುತ್ತೇನೆ. ಬಡವರಿಗೆ ದೊರೆಯಬೇಕಾದ 94
ಸಿಯನ್ನು ಮನೆ ಮನೆ ಹೋಗಿ ನ್ಯಾಯ
ಒದಗಿಸುತ್ತೇನೆ. ಅದರಲ್ಲಿ ಯಾವುದೇ ರಾಜಿಯಿಲ್ಲ.
ಯಾವುದೇ ಪಕ್ಷ ಬೇಧವಿಲ್ಲದೆ ಎಲ್ಲರಿಗೂ ಕಾನೂನು
ಬದ್ಧವಾಗಿ ದೊರೆಯಬೇಕಾದ ಸವಲತ್ತುಗಳನ್ನು
ಮನೆ ಮನೆಗೆ ತಲುಪಿಸುವಲ್ಲಿ ಪ್ರಯತ್ನಿಸುತ್ತೇನೆ.
ಭ್ರಷ್ಟಾಚಾರ ರಹಿತ ಆಡಳಿತ ನೀಡುವುದೇ ನನ್ನ
ಗುರಿಯಾಗಿದೆ ಎಂದ ಅವರು, ಪುತ್ತೂರಿನಲ್ಲಿ 14
ಮಂದಿ ಆಕಾಂಕ್ಷಿಗಳಿದ್ದರೂ ನನಗೆ ಅವಕಾಶ
ದೊರೆತಿದೆ. ಬಹಳಷ್ಟು ಜವಾಬ್ದಾರಿ ನನ್ನ ತಲೆ
ಮೇಲಿದ್ದು ನನ್ನ ಜವಾಬ್ದಾರಿ ಅರಿತು ಕೆಲಸ
ಮಾಡುತ್ತೇನೆ ಎಂದರು.
ಎ.19- ನಾಮಪತ್ರ
ಮೇ.18 ರಂದು ಎಲ್ಲಾ ಧರ್ಮಗಳ ಧಾರ್ಮಿಕ
ಕೇಂದ್ರಗಳಿಗೆ ಭೇಟಿ ನೀಡಿ ಆಶೀರ್ವಾದ ಪಡೆದು
ಎ.19 ರಂದು ನಾಮಪತ್ರ ಸಲ್ಲಿಸಲಾಗುವುದು.
ಬೆಳಿಗ್ಗೆ 9.30ಕ್ಕೆ ದರ್ಬೆಯಿಂದ. ಮೆರವಣಿಗೆಯಲ್ಲಿ
25000ಮಂದಿ ಭಾಗವಹಿಸುವ ಮೂಲಕ ನಮ್ಮ ಶಕ್ತಿ
ಪ್ರದರ್ಶನ ಮಾಡಲಾಗುವುದು ಎಂದು ಅಶೋಕ್
ಕುಮಾರ್ ರೈ ತಿಳಿಸಿದರು.ಜಿ.ಪಂ ಮಾಜಿ ಸದಸ್ಯ ಎಂ.ಎ ಮಹಮ್ಮದ್ ಮಾತನಾಡಿದರು.ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ
ಸ್ವಾಗತಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ
ಮಹಮ್ಮದ್ ಬಡಗನ್ನೂರು ಕಾರ್ಯಕ್ರಮ
ನಿರೂಪಿಸಿದರು.