
ಸುಳ್ಯ ತಾಲೋಕಿನ ಅಜ್ಜಾವರದಲ್ಲಿ ಕಾಡಾನೆಗಳ ಹಿಂಡು ಸ್ಥಳೀಯ ಸಂತೋಷ್ ರೈ ಎನ್ನುವವರ ಕೆರೆಗೆ ಬಿದ್ದು ಮೇಲೇಳಲಾಗದೆ ಚಡಪಡಿಸುತ್ತಿದ್ದುದನ್ನು ಗಮನಿಸಿದ ಅರಣ್ಯಾಧಿಕಾರಿಗಳು ಮತ್ತು ಸ್ಥಳೀಯರು ಅನೆಗಳನ್ನು ೨ ತಾಸುಗಳ ಕಾರ್ಯಾಚರಣೆ ಬಳಿಕ ಯಶಸ್ವಿಯಾಗಿ ಮರಳಿ ಕಾಡಿಗೆ ಬಿಡಲಾಯಿತು .


ಕೆರೆಯ ಒಂದು ಭಾಗದಲ್ಲಿ ಕಂದಕವನ್ನು ನಿರ್ಮಿಸಿ ಅನೆ ಸುಲಭವಾಗಿ ಏರಿ ಬರಲು ಸಹಾಯ ಮಾಡಲಾಯಿತು.ಎರಡು ಹಿರಿಯ ಆನೆ ಮತ್ತೊಂದು ಮರಿಯಾನೆ ಕಂದಕದ ಮೂಲಕ ಏರಿಬಂದರು ಮತ್ತೋಂದ ಮರಿಯಾನೆ ಕೆರೆಯಿಂದ ಏರಿ ಬರಲಾರದೆ ಬಸವಳಿದು ಕೆರೆಯಲ್ಲಿಯೇ ಬಾಕಿಯಾಯಿತು, ನಂತರ ಕೆಲ ಸ್ಥಳೀಯರು ಕೆರೆಗೆ ಇಳಿದು ಮರಿಯಾನೆಯನ್ನು ಕೆಳಗಿನಿಂದ ಮೇಲಕ್ಕೆ ದೂಡಿ ಹತ್ತಿಸಿದರು . ಆದರೂ ನಡೆಯಲಾರದೆ ಅಸಾಹಯಕವಾದ ಮರಿಯಾನೆಯನ್ನು ಸ್ಥಳಿಯರೂ ಕಾಡಿನಂಚಿನವರೆಗೂ ತಳ್ಳುತ್ತಾ ಬಿಟ್ಟು ಬರಲಾಯಿತು. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಆನೆಗಳು ಮತ್ತೆ ಕಾಡು ಸೇರವಂತಾಯಿತು.
