ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ : ಬಂಗೇರಕಟ್ಟೆ ನಿವಾಸಿ ಫಯಾಜ್ ಮೃತ್ಯು.

ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ : ಬಂಗೇರಕಟ್ಟೆ ನಿವಾಸಿ ಫಯಾಜ್ ಮೃತ್ಯು.

ಬಂಟ್ವಾಳ: ದ್ವಿಚಕ್ರ ವಾಹನಗಳು ಮುಖಾಮುಖಿ ಡಿಕ್ಕಿ ಸಂಭವಿಸಿ, ಓರ್ವ ಮೃತಪಟ್ಟ ಘಟನೆ ತಾಲೂಕಿನ ಉಳಿ ಗ್ರಾಮದ ಅಂಕರೋಡಿ ಬಳಿ ನಡೆದಿದೆ.
ಮೃತ ಯುವಕ ಬಂಗೇರಕಟ್ಟೆ ನಿವಾಸಿ ಫಯಾಜ್ ಎಂದು ತಿಳಿದು ಬಂದಿದೆ.
ಇಂದು ಸಂಜೆ ಕಕ್ಯಪದವು LCR ಸ್ಕೂಲ್ ಬಳಿ ಎರಡು ಬೈಕ್ ಗಳು ಮುಖಾಮುಖಿ ಡಿಕ್ಕಿಯಾಗಿದೆ. ಇನ್ನು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಯುವಕ ಬಂಗೇರಕಟ್ಟೆ ನಿವಾಸಿ ಫಯಾಜ್ ನನ್ನು ಆಸ್ಪತ್ರೆಗೆ ದಾಖಲಿಸಿದರೂ ಆತ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಇನ್ನು ಘಟನೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನು ಲಭ್ಯವಾಗಬೇಕಾಗಿದ್ದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾನವೀಯತೆ ಮೆರೆದ ಹಿಂದೂ ಯುವಕರು
ಊರಿನ ಹಿಂದೂ ಭಾಂದವರು ಆಂಬುಲೆನ್ಸ್ ತಂದು ಗಾಯಾಳು ಫಯಾಜ್ ನನ್ನು ಬದುಕಿಸಲು ಪ್ರತಿಯೊಬ್ಬರೂ ಸಹಾಯ ಮಾಡಿದ್ದಾರೆ. ಇನ್ನು ಆಂಬುಲೆನ್ಸ್ ಚಾಲಕ ದಿಲೀಪ್ ತಕ್ಷಣ AJ ಆಸ್ಪತ್ರೆಗೆ ಸಾಗಿಸಿದರೂ ಭಗವಂತನ ವಿಧಿಯಂತೆ ಯುವಕ ಮೃತ ಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ರಾಜ್ಯ