
ಸುಳ್ಯದಂತಹ ಗ್ರಾಮಾಂತರ ಪ್ರದೇಶಗಳಲ್ಲಿ ಹಲವು ಸಮಸ್ಯೆಗಳಿತ್ತು,ದಲಿತರು ಸೇರಿದಂತೆ ಎಲ್ಲಾ ಬಡವರ್ಗದ ಜನ ಹಲವು ಮೂಲಭೂತ ಸೌಕರ್ಯದಿಂದ ವಂಚಿತರಾಗಿದ್ದರು, ಇವರ ಅಭ್ಯುದಯವೇ ನನ್ನ ಗುರಿಯಾಗಿತ್ತು: ಈ ನಿಟ್ಟಿನಲ್ಲಿ ಇಲ್ಲಿ ತಳಮಟ್ಟದಿಂದಲೇ ಕಾರ್ಯಕರ್ತರನ್ನು ಹುರಿದುಂಬಿಸಿ ಪಕ್ಷ ಸಂಘಟನೆ ಮಾಡಿದ್ದೆ ಮತ್ತು ಸುಳ್ಯದ ಜನತೆ ನನ್ನನ್ನು ಬಯಸಿಯೂ ಇದ್ದರು.. , ಇದೀಗ ರಾಜಕೀಯ ದಿಢೀರ್ ಬದಲಾವಣೆ ಕಂಡಿದೆ,ಬಹುಷ ಇಲ್ಲಿನ ಕೆಲವು ನಾಯಕರುಗಳಿಗೆ ಗೆಲುವಿನ ಅಭ್ಯರ್ಥಿ ಬೇಡವಾಗಿತ್ತು ಎಂದು ಅನಿಸುತ್ತದೆ, ಮುಂದೆ ನನ್ನ ನಡೆ ಬಗ್ಗೆ ನನ್ನ ಕಾರ್ಯಕರ್ತರೊಡನೆ ಚರ್ಚಿಸಿ ತೀರ್ಮಾನ ಕೈಗೊಳ್ಳುತೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ