ಚೊಚ್ಚಲ ಮಗುವಿನ ಮುಖ ನೋಡಲು ತೆರಳುತ್ತಿದ್ದ ತಂದೆಗೆ ಅಪಘಾತ – ಆಸ್ಪತ್ರೆಯಲ್ಲಿ ಮೃತ್ಯು.

ಚೊಚ್ಚಲ ಮಗುವಿನ ಮುಖ ನೋಡಲು ತೆರಳುತ್ತಿದ್ದ ತಂದೆಗೆ ಅಪಘಾತ – ಆಸ್ಪತ್ರೆಯಲ್ಲಿ ಮೃತ್ಯು.

ಮಂಗಳೂರು: ದೇರಳಕಟ್ಟೆಯಲ್ಲಿ ನಡೆದ ಬೈಕ್
ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುತ್ತಿದ್ದ ಬುಡೋಳಿ ನಿವಾಸಿ ಮಮ್ಮುಂಞ
ಎಂಬವರ ಪುತ್ರ ಫಾರೂಕ್ (35) ಯುವಕ ಮಾ.17ರಂದು ಮೃತಪಟ್ಟಿದ್ದಾರೆ.10 ವರ್ಷಗಳ ಹಿಂದೆ ವಿವಾಹವಾಗಿದ್ದ ಫಾರೂಕ್
ದಂಪತಿಗಳಿಗೆ ಮಕ್ಕಳಾಗಿರಲಿಲ್ಲ. 10 ವರ್ಷಗಳ ಬಳಿಕ
ಮಾ.12ರಂದು ಅವರ ಪತ್ನಿಗೆ ದೇರಳಕಟ್ಟೆಯ
ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಫಾರೂಕ್ ಮಗುವನ್ನು
ನೋಡಲು ತೆರಳುವ ದಾರಿಯಲ್ಲಿ ಆಸ್ಪತ್ರೆಯ ಸಮೀಪ
ಅಪಘಾತಕ್ಕೊಳಗಾಗಿದ್ದು ಗಂಭೀರವಾಗಿ
ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ
ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಅವರು
ಶುಕ್ರವಾರ ಮಾ.17 ರಂದು ಮೃತಪಟ್ಟಿದ್ದಾರೆ.

ರಾಜ್ಯ