ಎಡಮಂಗಲ ಗ್ರಾಮದ ಬಳಕ್ಕಬೆ ನಿವಾಸಿ ಶಿವರಾಮ
ಎಂಬವರ ಪತ್ನಿ ಶ್ರೀಮತಿ ಗೀತಾ ಎಂಬವರು ಟ್ಯಾಪಿಂಗ್ ಕತ್ತಿ ಆಕಸ್ಮಿಕವಾಗಿ ಎದೆಗೆ ಹೊಕ್ಕು ಮೃತಪಟ್ಟ ಘಟನೆ ಇಂದು ಮುಂಜಾನೆ ನಡೆದಿದೆ.
ಗೀತಾರವರು ತಮ್ಮದೇ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಕೆಲಸ ಮುಗಿಸಿ ಸುಮಾರು 7 ಗಂಟೆ ಹೊತ್ತಿಗೆ ಮನೆಗೆ ಹಿಂತಿರುಗುವಾಗ ಎಡವಿ ಬಿದ್ದರೆನ್ನಲಾಗಿದೆ. ಬೀಳುವಾಗ ಹರಿತವಾದ ಕತ್ತಿ ಎದೆಯೊಳಗೆ ಹೊಕ್ಕು ಮೃತಪಟ್ಟಿರುವುದಾಗಿ ಮೃತರ ಪತಿ ಪೊಲೀಸ್ ದೂರು ನೀಡಿದ್ದು, ಬೆಳ್ಳಾರೆ ಪೊಲೀಸರು ಪ್ರಕರಣ
ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

