
ಸೂಕ್ತ ದಾಖಲೆ ಇಲ್ಲದ ಕಾರಿನಲ್ಲಿ ಅಕ್ರಮವಾಗಿ
ಸಾಗಿಸುತ್ತಿದ್ದ 20 ಲಕ್ಷ ರೂ.ಗಳನ್ನು ಬೈಂದೂರು ಠಾಣೆಯ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಉಡುಪಿ ಜಿಲ್ಲೆಯ ಗಡಿಭಾಗದ ಶಿರೂರು ಚೆಕ್‌ಪೋಸ್ಟಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಎಸ್‌ಐ ನಿರಂಜನಗೌಡ ಅವರು ಭಟ್ಕಳದಿಂದ ಬಂದ ನೋಂದಣಿ ನಂಬರ್ ಪ್ಲೇಟ್ ಇಲ್ಲದ ಕಾರನ್ನು ತಡೆದು,ವಾಹನ ಪರಿಶೀಲನೆ ನಡೆಸಿದಾಗ ಕಾರಿನ ಹಿಂಬದಿ ಸೀಟಿನ ಕೆಳಗೆ ಪ್ಲಾಸ್ಟಿಕ್ ಬಂಡಲ್‌ನಲ್ಲಿ ಕಟ್ಟಿದ್ದ 20 ಲಕ್ಷ ರೂ ನಗದು ಇರುವುದು ಬೆಳಕಿಗೆ ಬಂದಿದೆ.
ಇನ್ನೂ ಕಾರು ಚಲಾಯಿಸುತ್ತಿದ್ದ ಬೆಳ್ತಂಗಡಿ ಶಿರ್ಲಾಲು
ಮಂಜಿಲಪಲ್ಕೆ ನಿವಾಸಿ ಬಶೀರ್ ಬಳಿ ಹಣದ ಬಗ್ಗೆ
ವಿಚಾರಿಸಿದಾಗ ಆತ ಸರಿಯಾದ ದಾಖಲೆ ನೀಡಿಲ್ಲ. ಈ
ಹಿನ್ನೆಲೆ ಬಶೀರ್‌ನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ
ನಡೆಸುತ್ತಿದ್ದಾರೆ

