
ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ತಲಪಾಡಿ ಎಂಬಲ್ಲಿ ವಿರುದ್ಧ ದಿಕ್ಕಿನಲ್ಲಿ ಬಂದ ಪಿಕಪ್ ವಾಹನ ಒಮ್ನಿ ಕಾರಿಗೆ ಡಿಕ್ಕಿ ಹೊಡೆದು ಕಾರು ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ 11 ಗಂಟೆಗೆ ನಡೆದಿದೆ.
ತಲಪಾಡಿ ಬಸ್ ಡಿಪೋ ಬದಿಯ ರಸ್ತೆಯಲ್ಲಿ ಮರಗಳನ್ನು ತುಂಬಿ ಬರುತ್ತಿದ್ದ ಪಿಕಪ್ ವಾಹನ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ ಮಾಡಿ ಬಿಸಿರೋಡು ಕಡೆಗೆ ಕ್ರಾಸ್ ಮಾಡುವ ವಿರುದ್ದ ದಿಕ್ಕಿನಲ್ಲಿ ಸಂಚರಿಸಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಮರಗಳನ್ನು ತುಂಬಿಸಿಕೊಂಡಿದ್ದ ಪಿಕಪ್ ವಾಹನ ರಾಷ್ಟ್ರೀಯ ಹೆದ್ದಾರಿಗೆ ಬಂದು ಅ ಬಳಿಕ ತಲಪಾಡಿಯಲ್ಲಿರುವ ವೈಜ್ಞಾನಿಕ ಕ್ರಾಸಿಂಗ್ ನಲ್ಲಿ ಕ್ರಾಸ್ ಮಾಡಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ಬ್ರಹ್ಮರಕೋಟ್ಲು ಮೂಲದವರು ಎಂದು ಹೇಳಲಾಗುತ್ತಿದೆಯಾದರೂ ಆತನ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿಲ್ಲ, ಎರಡು ಕಾಲಿಗೆ ಗಂಭೀರವಾಗಿ ಗಾಯಗೊಂಡ ಹಿನ್ನೆಲೆಯಲ್ಲಿ ಈತನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ವಿರುದ್ಧ ದಿಕ್ಕಿನಲ್ಲಿ ಬಂದ ಪಿಕಪ್ ವಾಹನ ರಾಷ್ಟ್ರೀಯ ಹೆದ್ದಾರಿ ಯಲ್ಲಿ ಬಿಸಿರೋಡು ಕಡೆಯಿಂದ ಮಂಗಳೂರು ಕಡೆಗೆ ತನ್ನಪಾಡಿಗೆ ಬರುತ್ತಿದ್ದ ಅಮಾಯಕ ಒಮ್ನಿ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಒಮ್ನಿ ಕಾರು ಪುಡಿಪುಡಿಯಾಗಿದೆ. ಕಾರಿನೊಳಗೆ ಕೆಲಹೊತ್ತು ಚಾಲಕ ಸಿಲುಕಿಕೊಂಡಿದ್ದು, ಈತನನ್ನು ಕಾರಿನಿಂದ ಹೊರಕ್ಕೆ ತೆಗೆಯಲು ಕೆಲ ಹೊತ್ತು ಸ್ಥಳೀಯರು ಕಷ್ಟಪಟ್ಟಿದ್ದಾರೆ.


ಮೂಕ ಪ್ರಾಣಿ ಬಲಿ
ಪಿಕಪ್ ಮತ್ತು ಒಮ್ನಿ ಕಾರು ಅಪಘಾತದಲ್ಲಿ ಮೂಕ ಪ್ರಾಣಿಯಾದ ಬೆಕ್ಕು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಮನೆಯ ಮಾಲಕನ ಜೊತೆಯಲ್ಲಿ ಪ್ರಯಾಣಿಸುತ್ತಿದ್ದ ಮನೆಯ ಸಾಕು ಬೆಕ್ಕು ಅಪಘಾತದಲ್ಲಿ ಸಾವನ್ನಪ್ಪಿರುವಂತದ್ದು. ಜಖಂ ಗೊಂಡಿರುವ ಕಾರಿನಲ್ಲಿ ಸಿಲುಕಿಕೊಂಡಿದ್ದ ಚಾಲಕನನ್ನು ಹೊರೆಕ್ಕೆ ತೆಗೆಯುವ ವೇಳೆ ಸೀಟಿನಮುಂಭಾಗದಲ್ಲಿ ಸಾವನ್ನಪ್ಪಿದ ಬೆಕ್ಕು ಕಂಡು ಬಂದಿದೆ.
ವಿರುದ್ದ ದಿಕ್ಕಿನಲ್ಲಿ ಸಂಚಾರಕ್ಕೆ ಆಕ್ರೋಶ
ಕೈಕಂಬ ,ತಲಪಾಡಿ, ತುಂಬೆ ಸಹಿತ ಅನೇಕ ಕಡೆಗಳಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಬೈಕ್ ಸಹಿತ ಘನ ವಾಹನಗಳು ವಿರುದ್ಧ ದಿಕ್ಕಿನಲ್ಲಿ ಅಪಾಯಕಾರಿ ರೀತಿಯ ಚಾಲನೆ ಮಾಡುತ್ತಿದ್ದು, ಪೋಲೀಸರು ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದಾರೆ.
ಬಂಟ್ವಾಳದಲ್ಲಿ ಟ್ರಾಪಿಕ್ ಪೋಲೀಸರ ಮೃದು ಧೋರಣೆ ಒಂದು ಕಡೆಯಾದರೆ ಇನ್ನೊಂದು ಕಡೆಯಲ್ಲಿ ಪಾಯಿಂಟ್ ನಲ್ಲಿ ನಿಂತಿರುವ ಪೊಲೀಸರು ರಸ್ತೆಯಲ್ಲಿ ವಾಹನ ಸವಾರರು ಮಾಡುವ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳನ್ನು ನೋಡಿಯೂ ನೋಡದಂತೆಮಾಡುವ ವರ್ತನೆಯ ಮೇಲೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ