
ಸುಳ್ಯ ಕಸಬಾದ ಪೈಚಾರು ಶಾಂತಿನಗರ ಶ್ರೀ ಮುತ್ತಪ್ಪ
-ತಿರುವಪ್ಪ ದೈವರಾಧನಾ ಸೇವಾ ಸಮಿತಿ ,ಶ್ರೀ ಮುತ್ತಪ್ಪ
ತಿರುವಪ್ಪ ಉತ್ಸವ ಸಮಿತಿ ಹಾಗೂ ಮುತ್ತಪ್ಪ ಮಹಿಳಾ ಸಮಿತಿ ಇದರ ಜಂಟಿ ಆಶ್ರಯದಲ್ಲಿ ವರ್ಷಂಪ್ರತಿ ಜರುಗುವ ಶ್ರೀ ಮುತ್ತಪ್ಪ -ತಿರುವಪ್ಪ ದೈವಗಳ ಕಾಲಾವಧಿ ನೇಮೋತ್ಸವವು ಶಾಂತಿನಗರ ಮುತ್ತಪ್ಪ ತಿರುವಪ್ಪ ದೈವಸ್ಥಾನ (ಮಡಪುರ)ದಲ್ಲಿ ಮಾ.11 ಮತ್ತು 12 ರಂದು ಜರುಗಿತು.ಮಾ.11 ರಂದು ಬೆಳಗ್ಗೆ ಗಣಪತಿ ಹವನವಾಗಿ ಸಂಜೆ ಗಂಟೆ 4.00 ರ ತನಕ ತಾಲೂಕಿನ ವಿವಿಧ ಸಂತ ಭಜನಾ ಮಂಡಳಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ಹಾಗೂ ವಿಶೇಷವಾಗಿ ಕುಣಿತ ಭಜನೆಯು ಬಾಲಗೋಕುಲ ಶಾಂತಿನಗರ, ಮಹಾವಿಷ್ಣು
ಕುಣಿತ ಭಜನಾ ತಂಡ ಮಂಡೆಕೋಲು, ಮಂಜುನಾಥ ಕುಣಿತ ಭಜನಾ ತಂಡ ಬೆಟ್ಟಂಪಾಡಿ ಇವರಿಂದ ಜರುಗಿತು. ಸಂಜೆ ಪೈಂಗುತ್ತಿ ಹಾಗೂ ಶ್ರೀ ಮುತ್ತಪ್ಪ ದೈವದ ಮಲೆಯರ್ಕಲ್ ನಡೆದು ರಾತ್ರಿ ಸಭಾ ಕಾರ್ಯಕ್ರಮವು ನಡೆಯಿತು. ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ಮುತ್ತಪ್ಪ ದೈವದ ನೇಮ (ಬೆಳ್ಳಾಟಂ) ವಾಗಿ ಸಾರ್ವಜನಿಕ ಅನ್ನ ಸಂತರ್ಪಣೆಯಾಯಿತು.

ಬಳಿಕ ಕಳಿಕಪಾಟ್, ಕಳಸ ಶೃಂಗಾರ ರುಮಾಲು ಕಟ್ಟುವ ಕಾರ್ಯಕ್ರಮ ನಡೆಯಿತು. ಮರುದಿನ ಪ್ರಾತ:ಕಾಲ ಶ್ರೀ ಮುತ್ತಪ್ಪ ತಿರುವಪ್ಪ ದೈವಗಳ ನೇಮೋತ್ಸವ ಜರುಗಿತು. ಮದ್ಯಾಹ್ನ ಮಹಾ ಅನ್ನಸಂತರ್ಪಣೆ ನಡೆಸಲಾಯಿತು, ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ದೈವಾರಾಧನಾ ಸಮಿತಿ ಅಧ್ಯಕ್ಷ ಪಿ. ಎಂ ಮಧುಸೂದನ, ಕಾರ್ಯದರ್ಶಿ ಕೆ ಕೆ ಬಾಲಕೃಷ್ಣ, ಮೊಕ್ತೇಸರ ರಾಮಕೃಷ್ಣ ಎಸ್ ಎನ್, ಉತ್ಸವ ಅಧ್ಯಕ್ಷ ಪ್ರವೀಣ್ ಶಾಂತಿನಗರ, ಕಾರ್ಯದರ್ಶಿ ಪೃಥ್ವಿರಾಜ್, ಮಹಿಳಾ ಸಮಿತಿಯ ಅದ್ಯಕ್ಷೆ ಉಮಾವತಿ ಕಾರ್ಯದರ್ಶಿ ಸುಮಾ ಗೋಪಾಲ, ಸೇರಿದಂತೆ ಸಾವಿರಾರು ಭಕ್ತಾದಿಗಳು ಭಾಗವಹಿಸಿದ್ದರು,
