ಕುಕ್ಕೆ ದೇವಳದಲ್ಲಿ ಶ್ರೀ ರವಿಶಂಕರ್ ಗುರೂಜಿ ರವರಿಂದ ನಾಗಪ್ರತಿಷ್ಠಾ ಸೇವೆ.

ಕುಕ್ಕೆ ದೇವಳದಲ್ಲಿ ಶ್ರೀ ರವಿಶಂಕರ್ ಗುರೂಜಿ ರವರಿಂದ ನಾಗಪ್ರತಿಷ್ಠಾ ಸೇವೆ.


ಸುಬ್ರಹ್ಮಣ್ಯ: ಆರ್ಟ್ ಆಫ್ ಲೀವಿಂಗ್ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಸೋಮವಾರ ದಕ್ಷಿಣ ಭಾರತದ ನಾಗಾರಾಧನೆಯ ಪ್ರಸಿದ್ಧ ತಾಣ ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು.ಶ್ರೀ ದೇವಳದಲ್ಲಿ ಅವರು ಮಹಾಭಿಷೇಕ ಮತ್ತು ನಾಗಪ್ರತಿಷ್ಠಾ ಸೇವೆ ಸಮರ್ಪಿಸಿದರು.


ಸೇವಾ ಸಮರ್ಪಣೆ:
ಮದ್ಯಾಹ್ನ ವೇಳೆಗೆ ಶ್ರೀ ದೇವಳಕ್ಕೆ ಆಗಮಿಸಿದ ಅವರು ಸಂಕಲ್ಪ ನೆರವೇರಿಸಿ ಶ್ರೀ ದೇವರ ದರುಶನ ಪಡೆದ ಬಳಿಕ ಪಂಚಾಮೃತ ಮಹಾಭಿಷೇಕ ಸೇವೆಯನ್ನು ಶ್ರೀ ದೇವರಿಗೆ ಅರ್ಪಿಸಿದರು.ನಂತರ ಶ್ರೀ ದೇವರ ಮದ್ಯಾಹ್ನದ ಮಹಾಪೂಜೆ ವೀಕ್ಷಿಸಿದರು.ತದನಂತರ ನಾಗಪ್ರತಿಷ್ಠಾ ಸೇವೆ ನೆರವೇರಿಸಿದರು.ಅಲ್ಲದೆ ನಾಗಪ್ರತಿಷ್ಠಾ ಮಂಟಪದಲ್ಲಿ ಪ್ರಸಾದ ಸ್ವೀಕರಿಸಿದರು. ದೇವಳದ ಅರ್ಚಕ ವೇದಮೂರ್ತಿ ಸತ್ಯನಾರಾಯಣ ನೂರಿತ್ತಾಯರು ಶಾಲು ಹೊದಿಸಿ ಮಹಾಪ್ರಸಾದ ನೀಡಿದರು.ಬಳಿಕ ಉಮಾಮಹೇಶ್ವರ ದೇವರ ದರುಶನವನ್ನು ಪಡೆದರು.ತದನಂತರ ಹೊಸಳಿಗಮ್ಮನ ದರುಶನ ಪಡೆದು ಪ್ರಸಾದ ಸ್ವೀಕರಿಸಿದರು.ನಂತರ ಆದಿಸುಬ್ರಹ್ಮಣ್ಯ ದೇವಳಕ್ಕೆ ಭೇಟಿ ನೀಡಿ ಮೃತ್ತಿಕಾ ಪ್ರಸಾದ ಸ್ವೀಕರಿಸಿದರು.ನಂತರ ಅವರು ಶ್ರೀ ದೇವರ ಪ್ರಸಾದ ಬೋಜನ ಸ್ವೀಕರಿಸಿದರು.


ಬಿರಿಂಡಾ ಸಸಿ ನೆಟ್ಟ ಗುರೂಜಿ:
ಶ್ರೀ ಕ್ಷೇತ್ರಕ್ಕೆ ಆಗಮಿಸಿ ಗೂರೂಜಿ ಅವರನ್ನು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ ಶಾಲು ಹೊದಿಸಿ ಹೂಗುಚ್ಚ ನೀಡಿ ಗೌರವಪೂರ್ವಕವಾಗಿ ಸ್ವಾಗತಿಸಿದರು. ಶ್ರೀ ದೇವರ ದರುಶನದ ಬಳಿಕ ಗುರೂಜಿ ಅವರು ಶ್ರೀ ಕ್ಷೇತ್ರದ ಕಾಶಿಕಟ್ಟೆಯ ಬಂಡಿವಾಳದಲ್ಲಿ ಬಿರಿಂಡಾ ಸಸಿ ನೆಟ್ಟು ಗಿಡಕ್ಕೆ ನೀರುಣಿಸಿದರು. ಪುರೋಹಿತರು ವಿವಿಧ ವೈಧಿಕ ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನರಾಂ ಸುಳ್ಳಿ, ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀವತ್ಸ ಬೆಂಗಳೂರು, ಶೋಭಾ ಗಿರಿಧರ್, ವನಜಾ.ವಿ.ಭಟ್, ಮಾಸ್ಟರ್ ಪ್ಲಾನ್ ಸಮಿತಿಯ ಮನೋಜ್ ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ಗೂರೂಜಿ ಅವರೊಂದಿಗೆ ಆರ್ಟ್ ಆಫ್ ಲೀವಿಂಗ್‌ನ ಕೋ ಆರ್ಡಿನೇಟರ್ ದಿನೇಶ್.ಕೆ ಮತ್ತು ಆರ್ಟ್ ಆಪ್ ಲೀವಿಂಗ್‌ನ ಪ್ರಮುಖರು ಆಗಮಿಸಿದ್ದರು.

ರಾಜ್ಯ