ಬಿಯರ್ ಬಾಟಲಿಯಲ್ಲಿ ಕಸ ಕ್ರೋಧಗೊಂಡ ಗ್ರಾಹಕ : ಕಂಪೆನಿ ವಿರುದ್ದ ಹರಿಹಾಯ್ದ” ಬಿಯರ್ ಪ್ರಿಯರು”

ಬಿಯರ್ ಬಾಟಲಿಯಲ್ಲಿ ಕಸ ಕ್ರೋಧಗೊಂಡ ಗ್ರಾಹಕ : ಕಂಪೆನಿ ವಿರುದ್ದ ಹರಿಹಾಯ್ದ” ಬಿಯರ್ ಪ್ರಿಯರು”

ಬಿಯರ್ ಬಾಟಲಿಯಲ್ಲಿ ಕಸ ಕಂಡು ಬಂದಿದ್ದು, ಗ್ರಾಹಕರು ಕಂಪೆನಿ ವಿರುದ್ದ ಹರಿಹಾಯ್ದಿದ್ದಾರೆ.
ಸಿದ್ದಕಟ್ಟೆಯ ಬಾರ್ ಒಂದರಲ್ಲಿ ಯುಬಿ ಕಂಪನಿಯ ಬೀರ್ ಬಾಟಲ್ ನಲ್ಲಿ ಪೂರ್ತಿ ಕಸ ತುಂಬಿರುವುದು ಕಂಡುಬಂದಿದೆ.ಪ್ರಸ್ತುತ ಈ ವಿಷಯವನ್ನು ಗ್ರಾಹಕರು ಸಂಬಂಧಪಟ್ಟ ಇಲಾಖೆಗೆ ದೂರು ನೀಡಲು ಮುಂದಾಗಿದ್ದಾರೆ.
ವಿಷಯ ತಿಳಿದು ಕಂಪೆನಿಯವರು ಬಾರ್ ಆಗಮಿಸಿ ಗ್ರಾಹಕರ ಜೊತೆ ಮಾತನಾಡಿದ್ದಾರೆ ಎನ್ನಲಾಗಿದೆ.
ಗ್ರಾಹಕರು ಬಾಟಲಿಯನ್ನು ಬಾರ್ ನವರಿಗೆ ಮತ್ತು ಕಂಪೆನಿಯವರಿಗೆ ವಾಪಸು ನೀಡದೆ ಕೊಂಡು ಹೋಗಿದ್ದಾರೆ ಎನ್ನಲಾಗಿದೆ ‌.
ಈ ಬಿಯರ್ ಬಾಟಲಿ ವಾಪಾಸು ಕೊಡಿ, ವಿಷಯವನ್ನು ಬಹಿರಂಗಪಡಿಸಬೇಡಿ, ನಿಮಗೆ ಒಂದು ಬಾಕ್ಸ್ ಬಿಯರ್ ನೀಡುತ್ತೇವೆ ಎಂದು ಅಮಿಷ ಇಟ್ಟರೂ ಗ್ರಾಹಕರು ಒಪ್ಪಿಕೊಂಡಿಲ್ಲ.
ಇದರ ವಿರುದ್ದ ದೂರು ನೀಡುವುದಾಗಿ ಅವರು ಬಾಟಲಿಯನ್ನು ಕೊಂಡು ಹೋಗಿದ್ದಾರೆ ಎನ್ನಲಾಗಿದೆ ‌.
ಇಂತಹ ಘಟನೆಗಳು ಮುಂದೆ ಆಗಬಾರದು ಎಂಬ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂಬುದು ಗ್ರಾಹಕರ ಒತ್ತಾಯವಾಗಿದೆ ಎನ್ನಲಾಗಿದೆ.

ರಾಜ್ಯ