
ಸಂಪಾಜೆ ಗ್ರಾಮ ಪಂಚಾಯತ್ ನ ಸಾಮಾನ್ಯ ಸಭೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಧ್ಯಕ್ಷತೆಯಲ್ಲಿ ನಡೆಯಿತು ವರದಿ ಹಾಗೂ ಲೆಕ್ಕ ಪತ್ರವನ್ನು ಕಾರ್ಯದರ್ಶಿ ಪದ್ಮಾವತಿ ಮಂದಿಸಿದರು. ಸಾರ್ವಜನಿಕ ಅರ್ಜಿಗಳನ್ನು ಸಭೆಯಲ್ಲಿ ಓದಿ ಹೇಳಲಾಯಿತು. ಸಾರ್ವಜನಿಕ ದೂರು ಅರ್ಜಿಗಳಿಗೆ ದಿನಾಂಕ 21.2.2023 ಕ್ಕೆ ನೋಟೀಸ್ ಮಾಡಲು ತೀರ್ಮಾನಿಸಲಾಯಿತು. ಕುಡಿಯುವ ನೀರಿಗೆ ತೊಂದರೆಯಾಗದಂತೆ ಸೂಕ್ತ ವೆವಸ್ಥೆ ಕಲ್ಪಿಸುವುದು.. ಕುಡಿಯುವ ನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಕೆ ಮಾಡಿ ವೆವಸ್ಥೆ ಕಲ್ಪಿಸುವುದು. ಮನೆ ತೆರಿಗೆ ಮನೆ ಮನೆಗೆ ತೆರಳಿ ವಸೂಲಿ ಮಾಡುವುದು.. ವಾರ್ಡ್ ಸಭೆಗೆ ದಿನಾಂಕ ನಿಗದಿ ಮಾಡಲಾಯಿತು. ಫೆಬ್ರವರಿ 27 ಬೆಳಿಗ್ಗೆ 2 ಮತ್ತು 5 ನೇ ವಾರ್ಡ್ ಸಭೆ 10.30 ಗಂಟೆಗೆ ಬೆಳಿಗ್ಗೆ ಗ್ರಾಮ ಪಂಚಾಯತ್ ಸಬಾಭವನದಲ್ಲಿ ಮದ್ಯಾಹ್ನ 2 ಗಂಟೆಗೆ ದರ್ಕಾಸ್ ಅಂಗನವಾಡಿ ಕೇಂದ್ರದಲ್ಲಿ 3 ನೇ ವಾರ್ಡ್ ನಡೆಸಲು ತೀರ್ಮಾನಿಸಲಾಯಿತು. ಫೆಬ್ರವರಿ 28 ಕ್ಕೆ 1 ಮತ್ತು 4 ನೇ ವಾರ್ಡ್ ಸಭೆ ರಾಜರಾಂಪುರ ಶಾಲೆಯಲ್ಲಿ. ನಡೆಸಲು ತೀರ್ಮಾನಿಸಲಾಯಿತು. ದಿನಾಂಕ 21.2.2023 ಕ್ಕೆ 12 ಗಂಟೆಗೆ ಮುಳ್ಳುಕುಂಜ ನಿವೇಶನ ಪಲಾನುಭವಿಗಳ ಸಭೆ ನಡೆಸುವುದು ಆಶ್ರಯ ಪಲಾನುಭವಿಗಳಿಗೆ ಮನೆ ನಿರ್ಮಾಣದ ಕಂತು ಸಮಯಕ್ಕೆ ಸರಿಯಾಗಿ ಪಾವತಿಯಾಗದ ಬಗ್ಗೆ ಚರ್ಚೆ ನಡೆಯಿತು. ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಚರಂಡಿ ತಡೆಗೋಡೆ ಕಾಮಗಾರಿಗೆ ಕ್ರಿಯಾಯೋಜನೆ ಮಾಡಲಾಯಿತು. ಗ್ರಾಮದ ರಸ್ತೆ ಅಭಿವೃದ್ಧಿ. ಅಂಗನವಾಡಿ ಕೇಂದ್ರದ ಅಭಿವೃದ್ಧಿ ಮಾಡಲು ತೀರ್ಮಾನಿಸಲಾಯಿತು. ಬೀದಿ ದೀಪ ದುರಸ್ಥಿ, ಹಲವು ಕಾಮಗಾರಿಗೆ ಚಾಲನೆ ನೀಡಲು ನಿರ್ಧರಿಸಲಾಯಿತು. ಗ್ರಾಮ ಪಂಚಾಯತ್ ಆಡಳಿತಕ್ಕೆ 2 ವರ್ಷ ತುಂಬಿರುವ ಸಂದರ್ಭದಲ್ಲಿ ಸಭೆಯಲ್ಲಿ ಹರ್ಷ ವ್ಯಕ್ತಪಡಿಸಲಾಯಿತು. ಸಿಹಿ ಹಂಚಲಾಯಿತು. ಸಭೆಯಲ್ಲಿ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರು ಗಳಾದ ಸುಂದರಿ ಮುಂಡಡ್ಕ,ಜಗದೀಶ್ ರೈ, ಸುಮತಿ ಶಕ್ತಿವೇಲು, ಹನೀಫ್ ಎಸ್. ಕೆ. ಸವಾದ್, ಅನುಪಮಾ, ವಿಮಲಾ, ಸುಶೀಲಾ, ರಜನಿ ಶರತ್, ಮೊದಲದವರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಸರ್ವರನ್ನು ಸ್ವಾಗತಿಸಿದರು


