ಪಾಲಡ್ಕದಲ್ಲಿ ಅಂಬ್ಯುಲೆನ್ಸ್ ಹಾಗೂ ರಾಜ ಹಂಸ ಬಸ್ ಮುಖಾಮುಖಿ ಡಿಕ್ಕಿ : ಅಂಬ್ಯುಲೆನ್ಸ್ ನಲ್ಲಿ ಕುಳಿತ್ತಿದ್ದ ಯುವಕನಿಗೆ ಗಾಯ.

ಪಾಲಡ್ಕದಲ್ಲಿ ಅಂಬ್ಯುಲೆನ್ಸ್ ಹಾಗೂ ರಾಜ ಹಂಸ ಬಸ್ ಮುಖಾಮುಖಿ ಡಿಕ್ಕಿ : ಅಂಬ್ಯುಲೆನ್ಸ್ ನಲ್ಲಿ ಕುಳಿತ್ತಿದ್ದ ಯುವಕನಿಗೆ ಗಾಯ.

ಸುಳ್ಯದಿಂದ ರೋಗಿಯೊಬ್ಬರನ್ನು ಬೆಂಗಳೂರು ಆಸ್ಪತ್ರೆಗೆ ತುರ್ತಾಗಿ ಕೊಂಡೊಯ್ಯುತ್ತಿದ್ದ ಕೆ.ವಿ.ಜಿ. ಆಸ್ಪತ್ರೆ ಅಂಬ್ಯುಲೆನ್ಸ್ ಹಾಗೂ ಸುಳ್ಯಕ್ಕೆ ಮಡಿಕೇರಿ ಕಡೆಯಿಂದ ಬರುತ್ತಿದ್ದ ರಾಜಹಂಸ ಬಸ್ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ಜ.31 ಸಂಜೆ ಪೆರಾಜೆ ಸಮೀಪದ ಪಾಲಡ್ಕದಲ್ಲಿ ವರದಿಯಾಗಿದೆ.

ಘಟನೆಯಲ್ಲಿ ಅಂಬ್ಯುಲೆನ್ಸ್ ನಲ್ಲಿ ಎದುರು ಕುಳಿತಿದ್ದ ಸ್ವಸ್ತಿಕ್ ಎಂಬ ಯುವಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಭವಿಸಿದ ಕೂಡಲೆ ಸ್ಥಳಿಯರು ಹಾಗೂ ಸ್ಥಳದಲ್ಲಿದ್ದ ಇತರ ಪ್ರಯಾಣಿಕರು ಅಂಬ್ಯುಲೆನ್ಸ್ ನಲ್ಲಿದ್ದ ರೋಗಿಯನ್ನು ಬೇರೆ ಅಂಬ್ಯುಲೆನ್ಸ್ ನಲ್ಲಿ ಬೆಂಗಳೂರಿಗೆ ಕಳುಹಿಸಿದ್ದಾರೆ. ಕೆ ವಿ ಜಿ ಆಸ್ಪತ್ರೆಯಿಂದ ರೋಗಿಯನ್ನು ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಘಟನೆ ಸಂಜೆ ನಡೆದ ಕಾರಣ ಶಾಲಾ ವಾಹನ ಮತ್ತು ಇತರ ನೌಕರರು ತಮ್ಮ ಮನೆಗಳಿಗೆ ದಾವಿಸುತ್ತಿದ್ದರಿಂದ ವಾಹನ ದಟ್ಟಣೆ ಹೆಚ್ಚಿದ್ದು, ಸುಮಾರು ಅರ್ದ ತಾಸು ರಸ್ತೆ ಸಂಚಾರದಲ್ಲಿ ವ್ಯತ್ಯಯವಾಯಿತು. ಅಪಘಾತದಲ್ಲಿ ಅಂಬ್ಯುಲೆನ್ಸ್ ನಜ್ಜುಗುಜ್ಜಾಗಿದೆ.

ರಾಜ್ಯ