ಸುಳ್ಯ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯ ಶವ ಕೆರೆಯಲ್ಲಿ ಪತ್ತೆ.


ಮೇನಾಲದಲ್ಲಿ ವ್ಯಕ್ತಿಯೊಬ್ಬರ ಶವ ಕೆರೆಗೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸುಳ್ಯ ಮೇನಾಲ ಸಮೀಪ ಸ್ಥಳೀಯ ನಿವಾಸಿ ಅಬ್ದುಲ್ಲ
(ಅಂದ) (51.ವ)ಎಂಬವರು ಜ.29ರಂದು ಸಂಜೆ ಅವರ
ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಆಕಸ್ಮಿಕ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ತೋಟದಲ್ಲಿ ಕೆಲಸ ಮಾಡಿಕೊಂಡಿದ್ದವರು ಕಾಣದೆ ಇದ್ದಾಗ ಮನೆಯವರು ಅವರನ್ನು ತೋಟದ ಅಕ್ಕ ಪಕ್ಕದಲ್ಲಿ ಹುಡುಕಲು ಆರಂಭಿಸಿದ್ದು ಕೆರೆಯ ಸಮೀಪ ಅವರುಕೆಲಸಕ್ಕೆ ಬಳಸುತ್ತಿದ್ದ ಸಾಮಾಗ್ರಿ ಇರುವುದನ್ನು ಕಂಡು ಕೆರೆಯಲ್ಲಿ ನೋಡಿದಾಗ ಅಲ್ಲಿ ಅವರು ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.
ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.

Uncategorized ರಾಜ್ಯ